ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪತ್ತಿದ್ದರೂ ಕೊಡುವ ಮನಸ್ಸಿರಬೇಕು: ಶ್ರೀಗಳು

Last Updated 22 ಸೆಪ್ಟೆಂಬರ್ 2011, 10:55 IST
ಅಕ್ಷರ ಗಾತ್ರ

ಬಸವನಬಾಗೇವಾಡಿ: ದೇಶದಲ್ಲಿ ಶ್ರೀಮಂತರ ಸಂಖ್ಯೆ ಸಾಕಷ್ಟಿದ್ದರು ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ ಎಂದು ಹರಿಹರ ಪೀಠದ ಜಗದ್ಗುರು ಸಿದ್ಧಲಿಂಗ ದೇವರು ಹೇಳಿದರು.

ಸ್ಥಳೀಯ ವಿರಕ್ತ ಮಠದಲ್ಲಿ ಉದ್ಯಮಿ ಅಶೋಕ ಖೇಣಿ ಜನ್ಮ ದಿನಾಚರಣೆ ಅಂಗವಾಗಿ ವಿಜಾಪುರದಲ್ಲಿ ಹಮ್ಮಿಕೊಳ್ಳಲಾಗಿರುವ ಸರ್ವಧರ್ಮ ಸಮ್ಮೇಳನ ಹಾಗೂ ಸಾಮೂಹಿಕ ವಿಹಾಹ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಬುಧವಾರ ಅವರು ಮಾತನಾಡಿದರು.

ನಮ್ಮಲ್ಲಿ ಸಾಕಷ್ಟು ಸಂಪತ್ತು ಇರಬಹುದು ಆದರೆ ಕೊಡುವ ಮನಸ್ಸು ಇರಬೇಕು. ಕೊಟ್ಟದ್ದು ಸಾರ್ಥಕವಾಗಬೇಕು. ಆಗ ಕೊಟ್ಟವರು ಮತ್ತು ತೆಗೆದುಕೊಂಡವರು ಸಂತ್ರಪ್ತರಾಗಿರುತ್ತಾರೆ. ಉದ್ಯಮಿ ಅಶೋಕ ಖೇಣಿ ಅವರು ಕೊಡುವ ಮನಸ್ಸಿನಿಂದ ತಮ್ಮನ್ನು ಸಾಮಾಜಿಕ ಮತ್ತು ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿ ಕೊಂಡಿದ್ದಾರೆ ಎಂದರು.

ಉತ್ತಮ ಕಾರ್ಯ ಮಾಡುವಾಗ ಅಡೆ ತಡೆಗಳು ಬರುತ್ತವೆ. ಅದಕ್ಕೆ ಹಿಂಜರಿಯಬಾರದು. 12ನೇ ಶತಮಾನದಲ್ಲಿ ಬಸವಣ್ಣ ಸಮಾನತೆ ತರಲು ಕಲ್ಯಾಣದಲ್ಲಿ ಅನುಭವ ಮಂಠಪ ಸ್ಥಾಪಿಸಿದರು. ಆಗ ಬಂದ ಅಡೆ ತಡೆಗಳನ್ನು ಸಮರ್ಥವಾಗಿ ಎದುರಿಸಿದರು ಎಂದು ಹೇಳಿದರು.

ವಿಜಾಪುರದಲ್ಲಿ ನಡೆಯಲಿರುವ ಸರ್ವಧರ್ಮ ಸಮಾವೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಹೇಳಿದರು.ಗುನ್ನಾಪುರದ ಅಮ್ಮ ಯೋಗೇಶ್ವರಿ, ಶಿವಯೋಗಿ ಸ್ವಾಮೀಜಿ, ವಚನಾನಂದ ಸ್ವಾಮೀಜಿ, ಮಸಬಿನಾಳದ ಸಿದ್ದರಾಮೇಶ್ವರ ಸ್ವಾಮೀಜಿ ಇತರರು ಮಾತನಾಡಿದರು.

ಜಿ.ಪಂ ಉಪಾಧ್ಯಕ್ಷ ಶ್ರೀಶೈಲಗೌಡ ಬಿರಾದಾರ, ಪುರಸಭೆ ಅಧ್ಯಕ್ಷ ಜಗದೀಶ ಕೊಟ್ರಶೆಟ್ಟಿ, ಉಪ್ಪಿನ, ಈರಣ್ಣ ಪಟ್ಟಣಶೆಟ್ಟಿ, ಶಿವಾನಂದ ಕಲ್ಲೂರ, ಬಸವರಾಜ ಗೊಳಸಂಗಿ, ಸುರೇಶಗೌಡ ಪಾಟೀಲ, ಅನೀಲ ಪವಾರ, ಅಜೀಜ ಬಾಗವಾನ, ರಾಜಶೇಖರ ಚಿಂಚೋಳಿ, ಉದಯ ಮಾಮಲೇಕರ, ಸಂಗಮೇಶ ಓಲೇಕಾರ, ಸಂಗಪ್ಪ ಅಡಗಿಮನಿ, ಸಂಗಪ್ಪ ಹಾರಿವಾಳ, ಈರಪ್ಪ ಚಿಕ್ಕೊಂಡ, ವೈ.ಡಿ.ನಾಯ್ಕೋಡಿ, ಸಂಗಪ್ಪ ಕುಂಟೋಜಿ, ಸಾಬು ಕುಂಬಾರ, ಎಸ್.ಎಸ್.ಝಳಕಿ, ಎಫ್.ಡಿ.ಮೇಟಿ, ಎಸ್.ಬಿ.ಬಶೆಟ್ಟಿ, ಬಿರಾದಾರ, ಪರಮಾನಂದ ಓಲೇಕಾರ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT