ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ಶಾಲಾ ಆರಂಭೋತ್ಸವ

Last Updated 1 ಜೂನ್ 2013, 10:33 IST
ಅಕ್ಷರ ಗಾತ್ರ

ಹನುಮಸಾಗರ:  ಇಲ್ಲಿನ ಹರಿಜನವಾಡಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸರಸ್ವತಿ ಪೂಜೆಯೊಂದಿಗೆ ಸಂಭ್ರಮದಿಂದ ಶಾಲಾ ಪುನರಾರಂಭೋತ್ಸವ ಆಚರಿಸಲಾಯಿತು. ಕಾರ್ಯಕ್ರಮ ನಿಮಿತ್ತವಾಗಿ ಶಾಲೆಗೆ ಸುಣ್ಣ, ಬಣ್ಣ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶಾಲೆಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳ ಜೊತೆಗೆ ಸಿಹಿಯೂಟ ನೀಡಲಾಯಿತು.

ಬಳಿಕ ನಡೆದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕಿ ಜಯದೇವಿ ಉಪ್ಪಿನ ಕಾರ್ಯಕ್ರಮದ ಉದ್ದೇಶ, ಶಾಲೆಯಿಂದ ಹಾಕಿಕೊಂಡಿರುವ ವಾರ್ಷಿಕ ಕಾರ್ಯಕ್ರಮಗಳು ಹಾಗೂ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ನಾಗಪ್ಪ ಹಿರೇಮನಿ, ಉಪಾಧ್ಯಕ್ಷೆ ರೇಣುಕಾ ಜಾಲಿಹಾಳ, ಶರಣಪ್ಪ ಕಳಸದ, ಮುರ್ತುಜಾಸಾಬ ಕುಷ್ಟಗಿ, ದಾವಲಬಿ ಕನಕಗಿರಿ, ಮಂಜುಳಾ ತಳವಾರ, ಗೀತಾಂಜಲಿ ಕೊಪ್ಪಳ, ಶ್ರೀಕಾಂತಪ್ಪ ಹಾದಿಮನಿ, ಸರೋಜಾದೇವಿ ಇತರರು ಇದ್ದರು.

ಅಕ್ಷತಾ ಕಳಸದ ಪ್ರಾರ್ಥಿಸಿದರು. ರುದ್ರಸ್ವಾಮಿ ಗುರುವಿನಮಠ ಸ್ವಾಗತಿಸಿದರು. ಬಸಪ್ಪ ಬಂಡಿವಡ್ಡರ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ವಂದಿಸಿದರು.

ಬಾಲಕರ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಲೆಯ ಉಪಪ್ರಾಚಾರ್ಯರಾದ ಶಾರದಮ್ಮ ಎನ್ ವಿದ್ಯಾರ್ಥಿಗಳಿಗೆ ಸಮವಸ್ತ್ರ ಹಾಗೂ ಪಠ್ಯಪುಸ್ತಕಗಳನ್ನು ವಿತರಿಸಿದರು. ವಿದ್ಯಾರ್ಥಿಗಳಿಗೆ ಸಿಹಿಯೂಟ ಬಡಿಸಲಾಯಿತು.

ಎಂ.ಎಸ್.ಗೋನಾಳ, ಲೀಲಾ ಶೆಟ್ಟರ್, ಸುಮಂಗಲಾ ತರಿಕೇರಿ, ಗೀತಾ ದೇವಾಂಗಮಠ, ರೋಹಿಣಿ ಜ್ಯೋತಿ, ಈರೇಶಪ್ಪ, ಮಹಮ್ಮದ್‌ಅಲಿ ಅತ್ತಾರ, ರಾಜಾ ಭಕ್ಷಾರ ಪೆಂಡಾರಿ, ಉಮಾಕಾಂತ, ಎನ್.ಎಸ್.ಹೂಲಗೇರಿ, ಬಸಮ್ಮ ಸೇರಿದಂತೆ ಶಾಲೆಯ ಸಿಬ್ಬಂದಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT