ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ ಆಧಾರಿತ ತಾಂತ್ರಿಕ ಶಿಕ್ಷಣಕ್ಕೆ ಸಲಹೆ

Last Updated 9 ಏಪ್ರಿಲ್ 2011, 18:35 IST
ಅಕ್ಷರ ಗಾತ್ರ

ತುಮಕೂರು: ಸಂಶೋಧನೆ ಆಧಾರಿತ ಎಂಜಿನಿಯರಿಂಗ್ ಶಿಕ್ಷಣದ ಅಗತ್ಯವಿದೆ ಎಂದು ಕೇಂದ್ರೀಯ ಇಂಧನ ಸಂಶೋಧನಾ ಸಂಸ್ಥೆ (ಸಿಪಿಆರ್‌ಐ) ಪ್ರಧಾನ ನಿರ್ದೇಶಕ ಎನ್.ಮುರುಗನ್ ಅಭಿಪ್ರಾಯಪಟ್ಟರು.

ಸಿದ್ದಗಂಗಾ ತಾಂತ್ರಿಕ ವಿದ್ಯಾಲಯದಲ್ಲಿ ವಿದ್ಯುತ್- ವಿಜ್ಞಾನ ವಿಭಾಗದ ವತಿಯಿಂದ ಶನಿವಾರ ಏರ್ಪಡಿಸಿದ್ದ ‘ಟೆಕ್ನೀಶಿಯಮ್-11’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮತ್ತು ತಾಂತ್ರಿಕ ಜ್ಞಾನವನ್ನು ಸಮ್ಮಿಲನಗೊಳಿಸಿ ಸಂಶೋಧನೆಗೆ ಆದ್ಯತೆ ನೀಬೇಕಾಗಿದೆ ಎಂದು ನುಡಿದರು.

 ತಾಂತ್ರಿಕ ಶಿಕ್ಷಣದ ಜೊತೆಗೆ ಯುವ ಮನಸ್ಸುಗಳನ್ನು ಸೃಜನಶೀಲ ಚಟುವಟಿಕೆಗಳಲ್ಲಿ ತೊಡಗಿಸುವ ಕೆಲಸವಾಗಬೇಕು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ತಾಂತ್ರಿಕ, ವಿಜ್ಞಾನ ಕ್ಷೇತ್ರ ಅಗಾಧವಾಗಿ ಬೆಳೆಯುತ್ತಿದೆ. ಹೊಸ ಸಂಶೋಧನೆ, ಬೆಳವಣಿಗೆಗಳ ಅರಿವು ವಿದ್ಯಾರ್ಥಿಗಳಿಗೆ ಇರಬೇಕು ಎಂದು ಹೇಳಿದರು.

ಡಿಆರ್‌ಡಿಒ ವಿಜ್ಞಾನಿ ಡಾ.ಜಿ.ಅತಿಥನ್ ಕಾರ್ಯಾಗಾರದ ವಿಶೇಷ ಸಂಚಿಕೆ ಬಿಡುಗಡೆ ಮಾತನಾಡಿ, ಮಾನವನ ಮೆದುಳಿನ ಮೇಲೆ ಕಂಪ್ಯೂಟರ್ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಪ್ರಭಾವ ವಿವರಿಸಿದರು. ಮಾನವನ ಜ್ಞಾಪಕ ಶಕ್ತಿ ಅಗಾಧವಾಗಿದ್ದು, ಅದರಲ್ಲಿ ನಾವು ಬಳಸುತ್ತಿರುವುದು ಅತ್ಯಲ್ಪ ಪ್ರಮಾಣದಲ್ಲಿದೆ ಎಂದು ತಿಳಿಸಿದರು.

ಎಸ್‌ಐಟಿ ನಿರ್ದೇಶಕ ಡಾ.ಎಂ.ಎನ್.ಚನ್ನಬಸಪ್ಪ. ಡೀನ್ ಪ್ರೊ.ಬಸವರಾಜಯ್ಯ, ಪ್ರಾಚಾರ್ಯ ಡಾ.ಶಿವಕುಮಾರಯ್ಯ, ಪ್ರಾಧ್ಯಾಪಕರಾದ ಡಾ.ಸಿದ್ದೇಶ್ವರ ಪ್ರಸಾದ್, ಡಾ.ಸೀತಾರಾಮು, ಡಾ.ಸವಿತಾ ಮುಂತಾದವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT