ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಶೋಧನೆ: ಪಾಂಡಿತ್ಯರಸ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪ್ರಿಯದರ್ಶಿನಿ ಪ್ರಕಾಶನ ಆಯೋಜನೆಯಲ್ಲಿ ಡಾ.ಎಂ.ಚಿದಾನಂದ ಮೂರ್ತಿ ಅವರ `ಸಂಶೋಧನೆ: ಪಾಂಡಿತ್ಯರಸ~ ಕೃತಿ ಗುರುವಾರ ಲೋಕಾರ್ಪಣೆಯಾಗಲಿದೆ. ಕನ್ನಡ ಅಧ್ಯಯನ ಕೇಂದ್ರದ ಪ್ರಾಧ್ಯಾಪಕ ಡಾ.ಬಸವರಾಜ ಕಲ್ಗುಡಿ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಡಾ.ಎಸ್.ವಿದ್ಯಾಶಂಕರ ಅವರು ಸಂಪಾದಿಸಿರುವ ಮಹಾಕವಿ ಷಡಕ್ಷರದೇವನ ಮೂರು ಚಂಪೂ ಕೃತಿಗಳಾದ `ರಾಜಶೇಖರ ವಿಳಾಸ~, `ಬಸವರಾಜ ವಿಜಯ~, `ಶಬರ ಶಂಖರವಿಳಾಸ~ ಕೃತಿಗಳನ್ನು ಕವಿ ಜಿ.ಎಸ್.ಸಿದ್ಧಲಿಂಗಯ್ಯ ಅವರು ಲೋಕಾರ್ಪಣೆಗೊಳಿಸಲಿದ್ದಾರೆ.

ಸಂಶೋಧನೆ: ಪಾಂಡಿತ್ಯರಸ- ಮುಖ್ಯವಾಗಿ ಯುವ ಸಂಶೋಧಕರನ್ನು ಗಮನದಲ್ಲಿಟ್ಟುಕೊಂಡು ಈ ಕೃತಿ ರಚಿಸಲಾಗಿದೆ. ಪಿಎಚ್.ಡಿ ಪದವಿಗಾಗಿ ಕೆಲಸ ಮಾಡುವವರು ವಿಷಯದ ಆಯ್ಕೆ, ಆರಂಭದಲ್ಲಿ ಕೈಗೊಳ್ಳಬೇಕಾದ ಶ್ರಮಪೂರ್ಣ ಕಾರ್ಯ, ಟಿಪ್ಪಣಿ, ಬರವಣಿಗೆಗೆ ವಹಿಸಬೇಕಾದ ಎಚ್ಚರ, ಊಹೆ-ಪ್ರಮೇಯ-ಸಿದ್ಧಾಂತ ಇವುಗಳ ಕುರಿತು ಸಮಗ್ರವಾಗಿ ಕಟ್ಟಿಕೊಡಲಾಗಿದೆ.

ಮಹಾಕವಿ ಷಡಕ್ಷರದೇವನ ಮೂರು ಚಂಪೂ ಕೃತಿಗಳು- ಮಹಾಕವಿಯೊಬ್ಬರ ಮೂರು ಕೃತಿಗಳು ಏಕಕಾಲಕ್ಕೆ ಪ್ರಕಟವಾಗುತ್ತಿರುವುದು ಸಾಹಿತ್ಯಲೋಕದ ಪ್ರಕಟಣಾ ವಿಶೇಷ.  
ಸ್ಥಳ: ಪ್ರೆಸ್‌ಕ್ಲಬ್ ಸಭಾಂಗಣ, ಕಬ್ಬನ್ ಪಾರ್ಕ್. ಬೆಳಿಗ್ಗೆ 11.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT