ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಸ್ಕೃತಿ ಪರಿಕಲ್ಪನೆ ಪ್ರವಾಸೋದ್ಯಮಕ್ಕೆ ಪೂರಕ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಕರಕುಶಲ ಹಾಗೂ ಸಂಸ್ಕೃತಿ ಗ್ರಾಮದ ಪರಿಕಲ್ಪನೆ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಸಹಾಯಕವಾಗುತ್ತದೆ~ ಎಂದು ಕೇಂದ್ರ ಸಚಿವ ಸುಬೋದ್ ಕಾಂತ ಸಹಾಯ್ ಹೇಳಿದರು.

ಬಿಡದಿಯಲ್ಲಿ ಇನ್ನೋವೇಟಿವ್ ಫಿಲಂ ಸಿಟಿಯ ಕರಕುಶಲ ಹಾಗೂ ಸಾಂಸ್ಕೃತಿಕ ಗ್ರಾಮದಲ್ಲಿ ಕೇರಳ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಇನ್ನೋವೇಟಿವ್ ಫಿಲಂ ಸಿಟಿಯು ದೇಶದ ಪ್ರಮುಖ ಮನರಂಜನಾ ಸ್ಥಳವಾಗಿದೆ. ಇಂತಹ ಮೇಳ ಹಾಗೂ ಹಬ್ಬಗಳು ರಾಜ್ಯದ ಪ್ರವಾಸೋದ್ಯಮಕ್ಕೆ ಹೆಚ್ಚಿನ ಮೌಲ್ಯಗಳನ್ನು ಒದಗಿಸುತ್ತದೆ~ ಎಂದರು.

ಐಎಫ್‌ಸಿಯ ಸರವಣ ಪ್ರಸಾದ್ ಮಾತನಾಡಿ, `ಕೇರಳದ ಶ್ರೀಮಂತಿಕೆಯ ಪ್ರದರ್ಶನ ಹಾಗೂ ಜನರಿಗೆ ಕೇರಳ ರಾಜ್ಯದ ಸಂಸ್ಕೃತಿ ಹಾಗೂ ಮೌಲ್ಯಗಳ ಬಗ್ಗೆ ಶಿಕ್ಷಿತರನ್ನಾಗಿಸುವುದು ಈ ಮೇಳದ ಉದ್ದೇಶವಾಗಿದೆ~ ಎಂದು ವಿವರಿಸಿದರು. ಈ ಮೇಳವು ಅ. 9 ರ ವರೆಗೂ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT