ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್, ಪಾಂಟಿಂಗ್‌ಗಿಂತ ಲಾರಾ ಶ್ರೇಷ್ಠ

Last Updated 31 ಜನವರಿ 2012, 19:30 IST
ಅಕ್ಷರ ಗಾತ್ರ

ಮೆಲ್ಬರ್ನ್ (ಪಿಟಿಐ): `ಸಚಿನ್ ತೆಂಡೂಲ್ಕರ್ ಹಾಗೂ ರಿಕಿ ಪಾಂಟಿಂಗ್ ಅವರಿಗಿಂತ ವೆಸ್ಟ್‌ಇಂಡೀಸ್‌ನ ಬ್ರಯಾನ್ ಲಾರಾ ಶ್ರೇಷ್ಠ ಆಟಗಾರ~ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಇಯಾನ್ ಚಾಪೆಲ್ ಅಭಿಪ್ರಾಯಪಟ್ಟಿದ್ದಾರೆ.

ಇದಕ್ಕೆ ಚಾಪೆಲ್ ನೀಡುವ ಕಾರಣ ಮಾಜಿ ಎಡಗೈ ಬ್ಯಾಟ್ಸ್‌ಮನ್ ಲಾರಾ ಒಮ್ಮೆ 400 ರನ್, ಮತ್ತೊಮ್ಮೆ ತ್ರಿಶತಕ ಹಾಗೂ ಏಳು ಬಾರಿ ದ್ವಿಶತಕ ಗಳಿಸಿದ್ದು. `ವೇಗದ ಆಟದ ಮೂಲಕ ದೊಡ್ಡ ಮೊತ್ತ ಗಳಿಸುವ ಆಟಗಾರ ಲಾರಾ. ಈ ವಿಭಾಗದಲ್ಲಿ ಅವರು ಭಾರತದ ಸಚಿನ್ ಹಾಗೂ ಆಸ್ಟ್ರೇಲಿಯಾದ ಪಾಟಿಂಗ್ ಅವರನ್ನು ಮೀರಿಸುತ್ತಾರೆ~ ಎನ್ನುವುದು ಚಾಪೆಲ್ ವಾದ.

`ಸಚಿನ್ ಹಾಗೂ ಲಾರಾ ಜೊತೆ ಪಾಂಟಿಂಗ್ ಅವರ ಹೆಸರನ್ನೂ ಸೇರಿಸಬೇಕು. ಅವರು ಕೂಡ ಅತ್ಯುತ್ತಮ ಬ್ಯಾಟ್ಸ್‌ಮನ್. ಆದರೆ ಈ ಮೂವರಲ್ಲಿ ಶ್ರೇಷ್ಠರು ಯಾರು? ಲಾರಾ ಟೆಸ್ಟ್‌ನ ಒಂದು ಇನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅದು ವಿಶ್ವದಾಖಲೆ ಕೂಡ. ಅದೊಂದು ಶ್ರೇಷ್ಠ ಸಾಧನೆ. ತೆಂಡೂಲ್ಕರ್ ಹಾಗೂ ಪಾಂಟಿಂಗ್ ಒಮ್ಮೆಯೂ ತ್ರಿಶತಕ ಬಾರಿಸಿಲ್ಲ~ ಎಂದು ಅವರು ಹೇಳಿದ್ದಾರೆ.

`ಇದನ್ನು ಪರಿಗಣಿಸಿದರೆ ಲಾರಾ ಶ್ರೇಷ್ಠ ಆಟಗಾರ ಎನ್ನುವುದು ಗೊತ್ತಾಗುತ್ತದೆ. ಏಕೆಂದರೆ ದೊಡ್ಡ ಮೊತ್ತ ಗಳಿಸುವ ಕಲೆ ಅವರಲ್ಲಿತ್ತು~ ಎಂದು `ಡೈಲಿ ಟೆಲಿಗ್ರಾಫ್~ನಲ್ಲಿ ಬರೆದಿರುವ ತಮ್ಮ ಅಂಕಣದಲ್ಲಿ ಚಾಪೆಲ್ ತಿಳಿಸಿದ್ದಾರೆ.
`ಲಾರಾ ಅವರ ರನ್‌ರೇಟ್ ಆರಂಭದಿಂದ ಕೊನೆಯವರೆಗೆ ಸಮತೋಲನದಿಂದ ಕೂಡಿತ್ತು. ಏರುಪೇರಾಗುತ್ತಿರಲಿಲ್ಲ. ಇದು ಡಾನ್ ಬ್ರಾಡ್ಮನ್‌ಗೆ ಕೂಡ ಸಾಧ್ಯವಾಗಿರಲಿಲ್ಲ. 10 ವರ್ಷಗಳ ಅವಧಿಯಲ್ಲಿ ಎರಡು ಬಾರಿ ಅವರು ವೈಯಕ್ತಿಕ ಅತಿ ಹೆಚ್ಚು ಮೊತ್ತ ಗಳಿಸಿ ವಿಶ್ವದಾಖಲೆ ನಿರ್ಮಿಸಿದರು. ಯಾವ ಬೌಲರ್‌ಗೆ ಯಾವ ರೀತಿ ಆಡಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು~ ಎಂದು ವಿವರಿಸಿದ್ದಾರೆ.

ಅದರಲ್ಲೂ ಅವರು ಸ್ಪಿನ್ ಬೌಲರ್‌ಗಳನ್ನು ಎದುರಿಸುತ್ತಿದ್ದ ರೀತಿ ನನಗೆ ಇಷ್ಟವಾಯಿತು ಎಂದು ಚಾಪೆಲ್ ಹೇಳಿದ್ದಾರೆ.

`ಅವರು ಸ್ಪಿನ್ನರ್‌ಗಳನ್ನು ಎದುರಿಸುತ್ತಿದ್ದ ಶೈಲಿ ಅಮೋಘ. ಅವರ ಬದ್ಧತೆ ನನಗೆ ತುಂಬಾ ಇಷ್ಟವಾಯಿತು. ಮೂವರು ಬ್ಯಾಟ್ಸ್‌ಮನ್‌ಗಳಲ್ಲಿ ಯಾರು ಶ್ರೇಷ್ಠ ಎಂದು ನನ್ನನ್ನು ಕೇಳಿದರೆ ಅದು ಲಾರಾ. ಯಾರು ಶ್ರೇಷ್ಠ ಎಂಬ ಇತ್ತೀಚಿಗಿನ ಚರ್ಚೆಗಳಲ್ಲಿ ಲಾರಾ ಹೆಸರು ತಪ್ಪಿ ಹೋಗುತ್ತಿದೆ. ಅವರೀಗ ವಿದಾಯ ಹೇಳಿರಬಹುದು. ಆದರೆ ಅವರು ಹೆಸರನ್ನು ಕೈಬಿಡುವುದು ದೊಡ್ಡ ತಪ್ಪು~ ಎಂದಿದ್ದಾರೆ.

ಆದರೆ ಸಚಿನ್ ದಾಖಲೆಗಳನ್ನು ಮುರಿಯಲು ಪಾಂಟಿಂಗ್ ಅವರಿಗೆ ಕೂಡ ಕಷ್ಟ. ಈ ನಿಟ್ಟಿನಲ್ಲಿ ಲಿಟಲ್ ಚಾಂಪಿಯನ್ ಎತ್ತರದಲ್ಲಿ ನಿಲ್ಲುತ್ತಾರೆ  ಎಂದು ಚಾಪೆಲ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT