ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಡಗರದ ಉಪ್ಪಲದಿನ್ನಿ ಸಂಗಮನಾಥ ಜಾತ್ರೆ

Last Updated 3 ಸೆಪ್ಟೆಂಬರ್ 2011, 5:15 IST
ಅಕ್ಷರ ಗಾತ್ರ

ವಿಜಾಪುರ: ತಾಲ್ಲೂಕಿನ ಸುಕ್ಷೇತ್ರ ಉಪ್ಪಲದಿನ್ನಿ ಜಾತ್ರಾ ಮಹೋತ್ಸವವು ಈಚೆಗೆ ಸಡಗರ ಸಂಭ್ರಮದಿಂದ ನಡೆಯಿತು.

ಸಂಗಮನಾಥ ದೇವಾಲಯದಿಂದ ಪಲ್ಲಕ್ಕಿ ಉತ್ಸವ ಹಾಗೂ ನಂದಿಕೋಲ ಶಿವಾಲಯಕ್ಕೆ ಹೋಗುವ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿತು.

ಜಾತ್ರಾ ಮಹೋತ್ಸವದಲ್ಲಿ ಪಲ್ಲಕ್ಕಿ ಮುಂದೆ ಅಸಂಖ್ಯಾತ ಭಕ್ತರು ದಿಂಡರಕಿ ಸೇವೆ ಹಾಗೂ ಶಿವಾಲಯದಲ್ಲಿ ಸಾಗಿಬಂದ ಸಾರಾರು ಭಕ್ತರಿಂದ ಶಿವ ಭಜನೆ ಜರುಗಿತು.

ದಾನಮ್ಮಾದೇವಿ ಪುರಾಣ ಮಂಗಲೋತ್ಸವ
ತಾಲ್ಲೂಕಿನ ಕೃಷ್ಣಾನಗರದ ನಂದಿ ಸಹಕಾರಿ ಸಕ್ಕರೆ ಕಾರಖಾನೆಯ ಲಕ್ಷ್ಮಿ ದೇವಸ್ಥಾನದಲ್ಲಿ ಸಕ್ಕರೆ ಕಾರಖಾನೆಯ ಹಾಗೂ ಸುತ್ತ-ಮುತ್ತಲಿನ ಗ್ರ್ರಾಮಗಳ ಭಕ್ತರು ಶ್ರಾವಣ ಮಾಸ ಅಂಗವಾಗಿ ತಿಂಗಳ ಕಾಲ ನಡೆದ ಗುಡ್ಡಾಪುರ ದಾನಮ್ಮಾದೇವಿ ಪುರಾಣ ಮಂಗಲೋತ್ಸವ ಕಾರ‌್ಯಕ್ರಮವು ಮಂಗಳವಾರ ನಡೆಯಿತು.
 ಮಹಾಲಕ್ಷ್ಮೀ ದೇವಿಗೆ ಮಹಾ ರುದ್ರಾಭಿಷೇಕ, ಉಡಿ ತುಂಬುವ ಕಾರ್ಯಕ್ರಮ ನೆರವೇರಿತು. ನಂತರ ದಾನಮ್ಮಾ ದೇವಿ ಭಾವಚಿತ್ರದ ಮೆರವಣಿಗೆ ಜರುಗಿತು.  

ನಂತರ ಪುರಾಣ ಮಂಗಲೋತ್ಸವ ಧರ್ಮಸಭೆ ಜರುಗಿತು. ನೂರಂದೇಶ್ವರ ಶ್ರೀಗಳು ಸಾನ್ನಿಧ್ಯ, ವೀರಮಹಾಂತ ಶಿವಾಚಾರ್ಯ ಶ್ರೀಗಳು ಅಧ್ಯಕ್ಷತೆ ವಹಿಸಿದ್ದರು. ಪ್ರವಚನ ನೀಡಿದ
ಕಾರಖಾನೆಯ ಅಧ್ಯಕ್ಷ ಶಶಿಕಾಂತಗೌಡ ಪಾಟೀಲ, ಉಪಾಧ್ಯಕ್ಷ ಕೆ.ಆರ್. ಬಿರಾದಾರ, ನಿರ್ದೇಶಕ ಬಿ.ಡಿ. ಪಾಟೀಲ, ಶಿವನಗೌಡ ಪಾಟೀಲ ಚಿಕ್ಕಗಲಗಲಿ, ಎಸ್.ಟಿ. ಪಾಟೀಲ, ಜಂಬಗಿ ಹಾಗೂ ಸಕ್ಕರೆ ಕಾರಖಾನೆಯ ಸಿಬ್ಬಂದಿ ಮತ್ತು ಶಿರಬೂರ, ಹೊಸೂರು, ಜಂಬಗಿ, ಸುತಗುಂಡಿ, ಕಣಬೂರ ಹಾಗೂ ಚಿಕ್ಕ-ಗಲಗಲಿ ಗ್ರಾಮಗಳ ಸುತ್ತ ಮುತ್ತಲಿನ ಭಕ್ತರು ಹಾಜರಿದ್ದರು. ಪುರಾಣಕ್ಕೆ ಮಂಜುನಾಥ ಶೆಟ್ರ, ಸುರೇಶ ಅಂಗಡಿ ಸಂಗೀತ ಸೇವೆ ನಡೆಸಿಕೊಟ್ಟರು. ಎಸ್.ಸಿ. ಸಿಂಗರಡ್ಡಿ ಸ್ವಾಗತಿಸಿದರು. ಎ.ವೈ. ಮಹೇಂದ್ರಕರ ನಿರೂಪಿಸಿದರು. ಜಿ.ಬಿ. ಕಂಬಿ ವಂದಿಸಿದರು.

`ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸಿ~
ವಿಜಾಪುರ: ತಾಲ್ಲೂಕಿನ ಮದಗುಣಕಿ ಗ್ರಾಮದ ಎಮ್.ಎಸ್. ಬಬಲೇಶ್ವರ ವಿದ್ಯಾವರ್ಧಕ ಸಂಘದ ಶಿವಯ್ಯ ಸ್ವಾಮೀಜಿ ಪ್ರಾಥಮಿಕ ಶಾಲೆಯಲ್ಲಿ ಈಚೆಗೆ ವನಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ನಗರದ ಎಕ್ಸಲಂಟ್ ಸಮೂಹ ಸಂಸ್ಥೆಯ ಅಧ್ಯಕ್ಷ ಬಸವರಾಜ ಕೌಲಗಿ ಉದ್ಘಾಟಿಸಿ, `ಮಕ್ಕಳಲ್ಲಿ ಪರಿಸರ ಪ್ರೇಮ ಬೆಳೆಸುವುದರ ಜೊತೆಗೆ ಅದರ ಉಪಯೋಗಗಳ ಕುರಿತು ತಿಳಿವಳಿಕೆ ನೀಡಬೇಕು ಎಂದರು.

ಇದೇ ಸಂದರ್ಭದಲ್ಲಿ ಬಸವರಾಜ ಕೌಲಗಿ ಅವರನ್ನು ಸನ್ಮಾನಿಸಲಾಯಿತು. ತಾ.ಪಂ. ಸದಸ್ಯ ಶಂಕರ ಅವಟಿ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಮಾಜಿ ಅಧ್ಯಕ್ಷ ಕೌಸರ್ ಅತ್ತಾರ, ಅರವಿಂದ ಪಾಟೀಲ, ಶಾಲೆಯ ಮುಖ್ಯಶಿಕ್ಷಕಿ ಮಹಾನಂದ ತ್ರಿಪಾದೆ ಸೇರಿದಂತೆ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT