ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ದಿನಾಂಕ ಬದಲು

ಒತ್ತಡಕ್ಕೆ ಮಣಿದ ಜಿಲ್ಲಾ ಕಸಾಪ
Last Updated 7 ಜನವರಿ 2014, 8:27 IST
ಅಕ್ಷರ ಗಾತ್ರ

ಗಂಗಾವತಿ: ಕನ್ನಡ ಸಾಹಿತ್ಯ ಪರಿಷತ್ತಿನ ಕೊಪ್ಪಳ ಜಿಲ್ಲಾ ಘಟಕ ತಾಲ್ಲೂಕಿನ ಶ್ರೀರಾಮನಗರದಲ್ಲಿ ಫೆ.1ಮತ್ತು 2ರಂದು ಆಯೋಜಿಸಲು ಉದ್ದೇಶಿಸಿದ್ದ 7ನೇ ಜಿಲ್ಲಾ ಸಮ್ಮೇಳನವನ್ನು ಗಂಗಾವತಿ ಘಟಕದ ಒತ್ತಡ ಮೇರೆಗೆ ಮೂಂದೂಡಿದ್ದು, ಫೆ.10, 11ರಂದು ಸಮ್ಮೇಳನ ನಡೆಸಲು ತೀರ್ಮಾನಿಸಿದೆ.

ಗ್ರಾಮದ ಕನಕದುರ್ಗಾ ದೇವ ಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ವೀರಣ್ಣ ನಿಂಗೋಜಿ ಮಾತನಾಡಿ, ಸಮ್ಮೇಳನದ ರೂಪುರೇಷೆ, ಅಗತ್ಯ ಸಂಪನ್ಮೂಲ, ಕ್ರೊಢೀಕರಣದ ಬಗ್ಗೆ ಮಾತನಾಡಿದರು. 
ಸಮ್ಮೇಳನಕ್ಕೆ ಶ್ರೀರಾಮನಗರ ಆಯ್ಕೆ ಮಾಡಿದ್ದಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪ ಡಿಸಿದ್ದಾರೆ ಎಂದು ಹೇಳಿದರು.

ಸಮ್ಮೇಳನ ವಿವಿಧ ಸಮಿತಿ: ಆಹಾರ- (ಸಿದ್ದಣ್ಣ ಜಕ್ಲಿ), ಮೆರವಣಿಗೆ- (ಕೆ. ಸತ್ಯನಾರಾಯಣ), ಮೂಲಸೌಕರ್ಯ (ಎ.ಸೂರ್ಯರಾವು), ಪ್ರಚಾರ (ರೆಡ್ಡಿ ಶ್ರೀನಿವಾಸ), ವಸತಿ (ಮೊಹಮ್ಮದ್‌ ರಫಿ), ಮಾಧ್ಯಮ (ನಾರಾಯಣ ಜೋಶಿ) ಮಹಿಳಾ ಸಮಿತಿ (ನಾಗಮಣಿ) ಗೆ ಅಧ್ಯಕ್ಷರನ್ನು ಆಯ್ಕೆಮಾಡಲಾಗಿದೆ.
ಜಿ.ಬಾಪರಾವು, ಟಿ.ವೆಂಕಟೇಶ್ವರ ರಾವು, ಎ.ವೆಂಕಟರಾಜು, ಕೆ. ವೆಂಕ ಟ್ರಾವು, ಎನ್.ಚಂದ್ರರಾವು, ಎಂ.ಜೆ ರವಿ ಕುಮಾರ, ವರದರಾಜು, ಸಿ.ಎಚ್. ರಾಮಕೃಷ್ಣ, ಬಾವಿ ಶರಣಪ್ಪ, ಬಸವ ಗುರೂಜಿ, ಸತ್ತಿಪಂಡು, ಲೋಕಪ್ಪ, ಸಂಗನ ಬಸಪ್ಪ ಇದ್ದರು.

ತಾ.ಪಂ. ಸದಸ್ಯೆ ಲಕ್ಷ್ಮಿ, ಗ್ರಾಂ.ಪಂ ಅಧ್ಯಕ್ಷೆ ನರಸಮ್ಮ, ಉಪನ್ಯಾಸಕರಾದ ಮುಮ್ತಾಜ್ ಬೇಗಂ, ಲಲಿತಾ ಬಾವಿ ಕಟ್ಟೆ, ಅನಿಲ್ ರಾಠೋಡ, ಸೋಮು, ಜಗದೇವಿ, ನಾಗ ಮಣಿ, ರಾಧಾ, ಮಹಾಲಕ್ಷ್ಮಿ, ಗಂಗ, ಭಾಗ್ಯಲಕ್ಷ್ಮಿ, ಝಾನ್ಸಿ ಲಕ್ಷ್ಮಿ, ಪದ್ಮಾವತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT