ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮ್ಮೇಳನ ವಾಸ್ತವಕ್ಕೆ ಸ್ಪಂದಿಸಲಿ

Last Updated 28 ನವೆಂಬರ್ 2011, 8:35 IST
ಅಕ್ಷರ ಗಾತ್ರ

ತುರುವೇಕೆರೆ: ಸಾಹಿತ್ಯ ಸಮ್ಮೇಳನಗಳು ವಾಸ್ತವ ಸಂಗತಿಗಳಿಗೆ ಹಾಗೂ ಹೊಸ ಕಾಲದ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾರ್ಯಸೂಚಿಯಾಗಬೇಕು ಎಂದು ನಾಟಕಕಾರ ಪ್ರೊ.ಎಸ್.ಆರ್. ತೋಂಟದಾರ್ಯ ಹೇಳಿದರು.

ತಾಲ್ಲೂಕು ಸಾಹಿತ್ಯ ಸಮ್ಮೇಳನದಲ್ಲಿ ಶನಿವಾರ ವಿಚಾರಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪರಂಪರೆ ಹಾಗೂ ಇತಿಹಾಸ ಸಾಹಿತ್ಯದ ಮೂಲ ದ್ರವ್ಯವಾಗಿದೆ. ಆದರೆ ಯುವ ಪೀಳಿಗೆಗೆ ಇವುಗಳ ಪರಿಚಯವೇ ಇಲ್ಲ ಎಂದರು. ಗೋಷ್ಠಿಯಲ್ಲಿ ಬಾ.ಹ.ರಮಾಕುಮಾರಿ, ಆರ್.ಸತ್ಯನಾರಾಯಣ್, ಎ.ಎಲ್. ಭೈರುವೇಗೌಡ, ಎಲ್.ಮಂಜಯ್ಯಗೌಡ ಎಚ್.ಪಿ.ಸೋಮಶೇಖರಯ್ಯ, ವಿಜಯಾ ಹಾಲಪ್ಪನ್ ಮಾತನಾಡಿದರು.

ಕವಿಗೋಷ್ಠಿಯನ್ನು ಉಪನ್ಯಾಸಕ ಎಂ.ಜಿ.ಸಿದ್ಧರಾಮಯ್ಯ ಉದ್ಘಾಟಿಸಿ ದರು. ಜಿ.ಪಂ. ಮಾಜಿ ಸದಸ್ಯ ಎನ್. ಆರ್.ಜಯರಾಂ, ಕವಯತ್ರಿ ಪ್ರೇಮ ಲೀಲಾ ಕಲ್ಕೆರೆ ಉಪಸ್ಥಿತರಿದ್ದರು. 20ಕ್ಕೂ ಹೆಚ್ಚು ಕವಿಗಳು ಕವನ ವಾಚಿಸಿದರು.

ಜಿಲ್ಲಾಧಿಕಾರಿ ಡಾ.ಸಿ.ಸೋಮಶೇಖರ್ ಸಮಾರೋಪ ಭಾಷಣ ಮಾಡಿದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮೈ.ಸಿ.ಪಾಟೀಲ್, ಟಿ.ಎಲ್.ನಾಗರಾಜ್‌ಡಾ.ನಾಗರಾಜ್, ಡಾ.ನಂಜಪ್ಪ, ಟಿ.ಎನ್‌ಸೂರ್ಯ ನಾರಾಯಣರಾವ್, ಕೆ.ಎ. ಕೇಶವಮೂರ್ತಿ, ಕೈಲಾಸನಾಥ್, ಹುಲಿಕಲ್ ನಾಗರಾಜ್ ಮೊದಲಾದ ವರನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಸನ್ಮಾನಿಸಿದರು.
 
ತಹಸೀಲ್ದಾರ್ ಟಿ.ಅರ್. ಶೋಭಾ, ಪ.ಪಂ. ಅಧ್ಯಕ್ಷ ಆರ್. ಮಲ್ಲಿಕಾರ್ಜುನ್, ನೌಕರರ ಸಂಘದ ಅಧ್ಯಕ್ಷ ಪ್ರಹ್ಲಾದ್, ಕಸಾಪ ಅಧ್ಯಕ್ಷ ಯೋಗಾನಂದ್, ಗೌರವಾಧ್ಯಕ್ಷ ಟಿ.ಎಸ್‌ಬೋರೇಗೌಡ, ಕಾರ್ಯದರ್ಶಿ ಡಿ.ಪಿ. ರಾಜು, ಕೆಂಪರಾಜ್, ಸತೀಶ್‌ಕುಮರ್, ಚೆನ್ನಿಗರಾಯಪ್ಪ, ದಿನೇಶ್‌ಕುಮಾರ್, ರಾಮಯ್ಯ, ಕಡೇಹಳ್ಳಿ ರಾಮಚಂದ್ರ, ಡಿ.ಕೆ.ನಿಂಗೇಗೌಡ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT