ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸರಕು ಸಾಗಣೆ ವಾಹನದಲ್ಲಿ ಜನರನ್ನು ಕರೆದೊಯ್ಯುವಂತಿಲ್ಲ'

ಚುನಾವಣಾ ನೀತಿಸಂಹಿತೆ ಪಾಲನೆಗೆ ಸುತ್ತೋಲೆ
Last Updated 5 ಏಪ್ರಿಲ್ 2013, 9:35 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಕಟ್ಟೆಚ್ಚರ ವಹಿಸುವ ಸಂಬಂಧ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರು ಬುಧವಾರ ಸುತ್ತೋಲೆ ಹೊರಡಿಸಿದ್ದು, ಸರಕು ಸಾಗಣೆ ವಾಹನಗಳಲ್ಲಿ ಜನರನ್ನು ಕೊಂಡೊಯ್ಯುವಂತಿಲ್ಲ ಎಂಬಂತಹ ನಿಯಮಗಳನ್ನು ಬಿಗಿಗೊಳಿಸಿದ್ದಾರೆ.

ಸಾರ್ವಜನಿಕ ಪ್ರದೇಶಗಳನ್ನು ಬ್ಯಾನರ್ ಬಂಟಿಂಗ್‌ಗಳನ್ನು ಹಚ್ಚಿ  ವಿರೂಪಗೊಳಿಸದಂತೆ (ಪ್ರಿವೆಂಷನ್ ಆಫ್ ಡಿಸ್‌ಫಿಗರ್‌ಮೆಂಟ್ ಕಾಯ್ದೆ) ತಡೆಯುವ ಹೊಣೆ ಕಂದಾಯ ಅಧಿಕಾರಿಗಳದು. ಮಹಾನಗರ ಪಾಲಿಕೆ ಆಯುಕ್ತರು, ಸ್ಥಳೀಯ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗಳು, ಪಿಡಿಒಗಳಿಗೆ ಜಿ.ಪಂ.ಸಿಇಒ ಅವರು ಸೂಕ್ತ ಮಾರ್ಗದರ್ಶನ ನೀಡಬೇಕು ಪೊಲೀಸ್ ಆಯುಕ್ತರು ಮತ್ತು ಎಸ್‌ಪಿ ಅವರೂ ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಎಲ್ಲ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಬಳಸುವ ಎಲ್ಲ ವಾಹನಗಳು ಆರ್‌ಟಿಒ ಅವರಿಂದ ಅಥವಾ ಈ ಸಂಬಂಧ ಸ್ಥಳೀಯ ನೋಡಲ್ ಅಧಿಕಾರಿಗಳಿಂದ ಎನ್‌ಒಸಿ ಪಡೆದು ಚುನಾವಣಾ ಅಧಿಕಾರಿಯ ಪೂರ್ವಾನುಮತಿ ಪಡೆಯಬೇಕು. ಸಂಚರಿಸುವ ವಾಹನಗಳು ಮೈಕ್ ಅಳವಡಿಸುವಂತಿಲ್ಲ. ಬಿಳಿ ಬಣ್ಣದ ನಂಬರ್ ಪ್ಲೇಟ್ ಅಳವಡಿಸಿದ ವಾಹನ ಗಳನ್ನು ಬಾಡಿಗೆ ಪಡೆಯಲು ಅವಕಾಶ ವಿಲ್ಲ. ರೋಡ್ ಶೋಗಳಿಗೆ ತೆರೆದ ವಾಹನ ಬಳಕೆ ಇಲ್ಲ. ಕಪ್ಪುಬಣ್ಣದ ಗಾಜುಗಳಿರುವ ವಾಹನಗಳನ್ನು ಬಳಸುವಂತಿಲ್ಲ. ಚುನಾವಣಾ ಆಯೋಗ ನಿಗದಿಪಡಿಸಿದ ಮಾನದಂಡಕ್ಕೆ ಅನುಗು ಣವಾಗಿ ಬ್ಯಾನರ್ ಅಳವಡಿಸಬೇಕು ಎಂದು ಸೂಚಿಸಲಾಗಿದೆ.

ಚುನಾವಣಾ ಪ್ರಚಾರಕ್ಕೆ ಬಳಸಲ್ಪಡುವ ಎಲ್ಲ ವಾಹನಗಳು ಆರ್‌ಒ ಅವರಿಂದ ಪಡೆದ ಪಾಸ್‌ಗಳನ್ನು ವಾಹನಕ್ಕೆ ಕಾಣಿಸುವಂತೆ ಹಾಕಬೇಕು. ಈ ವಾಹನಗಳಲ್ಲಿ ಮತದಾರರನ್ನು ಮತದಾನದಂದು ಕರೆತಂದರೆ ಕ್ರಿಮಿನಲ್ ಅಪರಾಧವೆಂದು ಪರಿಗಣಿಸಲಾಗುವುದು. ಇಂತಹವರ ವಿರುದ್ಧ ಕ್ರಮ ಕೈಗೊಳ್ಳುವುದು ಆರ್‌ಟಿಒ, ಆರ್‌ಒ, ಪೊಲೀಸ್ ಕಮಿಷನರ್ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರ ಹೊಣೆ ಎಂದು ತಿಳಿಸಲಾಗಿದೆ.

ಎಲ್ಲ ಮಾಹಿತಿಗಳನ್ನು  ಕಡ್ಡಾಯ ವಾಗಿ ಎಲ್ಲರೂ ಕಂಟ್ರೋಲ್ ನಂಬರ್ 1077 ಗೆ ನೀಡಬೇಕು ಎಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT