ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರ ಹೂಡಿಕೆದಾರರ ಬೆನ್ನು ಬಿದ್ದಿದೆ: ಆಕ್ರೋಶ

Last Updated 20 ಅಕ್ಟೋಬರ್ 2012, 4:25 IST
ಅಕ್ಷರ ಗಾತ್ರ

ಕಂಪ್ಲಿ: ಜಾಗತಿಕ ಬಂಡವಾಳ ಹೂಡಿಕೆದಾರರ ಬೆನ್ನ ಬಿದ್ದಿರುವ ಸರ್ಕಾರಕ್ಕೆ ರೈತರ ಬಗ್ಗೆ ಕಿಂಚಿತ್ತು ಕಾಳಜಿ ಇಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಆರೋಪಿಸಿದರು.

ಸಮೀಪದ ರಾಮಸಾಗರ ಗ್ರಾಮದಲ್ಲಿ ಶುಕ್ರವಾರ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.ಡಿನೋಟಿಫಿಕೇಷನ್ ಮಾಡುವುದರಲ್ಲಿ ನಿರತವಾದ ಸರ್ಕಾರ ರೈತರಿಂದ ಒತ್ತಾಯ ಪೂರ್ವಕವಾಗಿ ಭೂಮಿ ಪಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಿಕ್ಕು ತಪ್ಪಿರುವ ಸರ್ಕಾರಕ್ಕೆ ರೈತ ಸಂಘದ ಪ್ರತಿನಿಧಿಗಳು ತಕ್ಕ ಪಾಠ ಕಲಿಸಬೇಕಿದೆ. ಈ ನಿಟ್ಟಿನಲ್ಲಿ ರೈತ ಕುಟುಂಬದ ಪ್ರತಿಯೊಬ್ಬರು ರೈತ ಚಳವಳಿಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.

ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಜಹೀರುದ್ದೀನ್, ತಾಲ್ಲೂಕು ಅಧ್ಯಕ್ಷ ಕಾರ್ತಿಕ್, ಎಚ್. ಶಿವಶಂಕರಗೌಡ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ. ನಾರಾಯಣಪ್ಪ, ಉಡೇದ ಭೀಮಪ್ಪ, ಸಿರಿಗೇರಿ ಚಂದ್ರಪ್ಪ, ಆರ್.ಟಿ. ಬಸವನಗೌಡ, ಎಚ್. ಜಗದೀಶಗೌಡ, ಎಚ್. ರಮೇಶ್‌ಗೌಡ, ಬೇವಿನಹಳ್ಳಿ ನಾಗರಾಜ, ಪ್ರಸಾದರಾವ್, ಎಚ್. ತಿಮ್ಮಾರೆಡ್ಡಿ, ಎಂ. ಜಡಿಯಪ್ಪ, ಟಿ. ವೆಂಕಟೇಶ್, ರವಿಕುಮಾರ, ದಾನೇಶ್, ಹನುಮಂತಪ್ಪ, ಪಾಲಾಕ್ಷಪ್ಪ, ಬಿ. ನಾಗರಾಜಪ್ಪ, ಗೆಣಿಕೆಹಾಳು ಬಸವರಾಜ, ಕನಕಪ್ಪ, ಗೌಸಿಯಾ ಖಾನ್, ಕಡ್ಡಿ ಯಂಕೋಬಪ್ಪ, ದುರುಗಪ್ಪ, ರೇಣುಕಪ್ಪ ಇತರರಿದ್ದರು.

ರೈತ ಸಂಘದ ನೂತನ ಪದಾಧಿಕಾರಿಗಳು ಕೋಡಿಹಳ್ಳಿ ಚಂದ್ರಶೇಖರ ಅವರಿಂದ ಹಸಿರು ಟವೆಲ್ ಸ್ವೀಕರಿಸಿ ಪದಗ್ರಹಣ ಮಾಡಿದರು. ರೈತ ಕೆ. ಕಿಷ್ಟಪ್ಪ ಸ್ವಾಗತಿಸಿ, ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT