ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಕ್ಕೆ ವರದಿ ಸಲ್ಲಿಸಲು ನಿರ್ಧಾರ

Last Updated 19 ಸೆಪ್ಟೆಂಬರ್ 2013, 7:09 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರದ ಮುಖ್ಯ ರೈಲು ನಿಲ್ದಾಣದ ಬಳಿ ಹೊರ ವರ್ತುಲ ರಸ್ತೆ (ರಿಂಗ್ ರೋಡ್) ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ನಡುವೆ ಉಂಟಾಗಿರುವ ಜಾಗದ ವಿವಾದ ಬಗೆಹರಿಯಲಿಲ್ಲ.

ಸಭಾಪತಿ ಡಿ.ಎಚ್.ಶಂಕರಮೂರ್ತಿ ನೇತೃತ್ವದಲ್ಲಿ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆ ಅಧಿಕಾರಿಗಳು ವಿವಾದಿತ ಪ್ರದೇಶದಲ್ಲಿ  ಬುಧವಾರವೂ ಜಂಟಿ ಸಮೀಕ್ಷೆ ನಡೆಸಿದರೂ ಅಂತಿಮ ನಿರ್ಧಾರಕೆ್ಕ ಬರಲು ಸಾಧ್ಯವಾಗಲಿಲ್ಲ. ರಸ್ತೆ ಹಾದು ಹೋಗುವ ಸ್ಥಳದ ಖುದ್ದು ಪರಿಶೀಲನೆಯನ್ನು ಎರಡು ಕಡೆಯ ಅಧಿಕಾರಿಗಳು ನಡೆಸಿದರು. ಜಿಲ್ಲಾಡಳಿತದ ಅಧಿಕಾರಿಗಳು, ರಸ್ತೆ ಹಾದು ಹೋಗುವ ಸ್ಥಳದ ನೀಲ ನಕ್ಷೆ ಸಿದ್ಧಪಡಿಸಿ ರೈಲ್ವೆ ಅಧಿಕಾರಿಗಳ ಗಮನಕ್ಕೆ ತಂದರು. ತದನಂತರ ಮುಖ್ಯ ರೈಲು ನಿಲ್ದಾಣದ ಆವರಣದಲ್ಲಿರುವ ವಿಶ್ರಾಂತಿ ಕೊಠಡಿಯಲ್ಲಿ ಸಭೆ ನಡೆಯಿತು.

ಪ್ರಸ್ತುತ ರಸ್ತೆ ನಿರ್ಮಾಣಕ್ಕೆ ಎರಡು ಸ್ಥಳಗಳ ಕುರಿತಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಮೊದಲೇ ನಿರ್ಧರಿಸಿದಂತೆ ರೈಲು ನಿಲ್ದಾಣ ಮುಂಭಾಗದಿಂದಲೇ ರಸ್ತೆ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ವಿಪುಲ್ ಬನ್ಸಲ್ ತಿಳಿಸಿದರು. ಇದಕ್ಕೆ ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಕೂಡ ಸಹಮತ ವ್ಯಕ್ತಪಡಿಸಿದರು.
ಆದರೆ, ನೈರುತ್ಯ ರೈಲ್ವೆ ವಲಯದ ಮೈಸೂರು ಉಪ ವಿಭಾಗದ ವ್ಯವಸಾ್ಥಪಕ ನಿರ್ದೇಶಕ ವಿನೋದ್‌ ಕುಮಾರ್ ಈ ಮಾರ್ಗಕ್ಕೆ ಬದಲಾಗಿ ಮತ್ತೊಂದು ಮಾರ್ಗ (ರೈಲ್ವೆ ಕ್ವಾಟ್ರಸ್‌ - ಕೆಇಬಿ ಕ್ವಾಟ್ರಸ್‌ ಹಿಂಭಾಗ) ದ ಮೂಲಕ ರಸ್ತೆ ನಿರ್ಮಾಣ ಮಾಡುವಂತೆ ಸಲಹೆ ನೀಡಿದರು.

ಈ ವಿಷಯದಲ್ಲಿ ಜಿಲ್ಲಾಡಳಿತ ಹಾಗೂ ರೈಲ್ವೆ ಇಲಾಖೆಯ ನಡುವೆ ಒಮ್ಮತ ಮೂಡಲಿಲ್ಲ. ಉದ್ದೇಶಿತ ಎರಡು ಮಾರ್ಗಗಳಲ್ಲಿನ ಅನುಕೂಲ, ಅನಾನುಕೂಲದ ಕುರಿತಾದ ವರದಿ ಸಿದ್ಧಪಡಿಸಿ ರಾಜ್ಯ ಸರ್ಕಾರಕೆ್ಕ ಜಿಲ್ಲಾಡಳಿತದಿಂದ ಸಲ್ಲಿಸಲು ನಿರ್ಧರಿಸಲಾಯಿತು. ಈ ವರದಿಯ ಆಧಾರದ ಮೇಲೆ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಸಭೆಯಲ್ಲಿ ಡಿ.ಎಚ್.ಶಂಕರಮೂರ್ತಿ ಮಾತನಾಡಿ, ಹಲವು ವರ್ಷಗಳಿಂದ ಜಾಗದ ವಿವಾದದಿಂದ ಹೊರ ವರ್ತುಲ ರಸ್ತೆ ಕಾಮಗಾರಿ ಅರ್ಧಕ್ಕೆ ಸ್ಥಗಿತಗೊಂಡಿದೆ. ಇದರಿಂದ ವಾಹನಗಳ ಸಂಚಾರಕ್ಕೆ ಹಾಗೂ ನಾಗರಕರಿಗೆ ತೀವ್ರ ತೊಂದರೆಯಾಗಿದೆ. ರೈಲೆ್ವ ಅಧಿಕಾರಿಗಳು ಈ ಬಗೆ್ಗ ಗಮನ ಹರಿಸಬೇಕು ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಉಪ ವಿಭಾಗಾಧಿಕಾರಿ ಕುಸುಮಕುಮಾರಿ, ತಹಶೀಲ್ದಾರ್ ಕೊಟ್ರೇಶ್, ಜಿಲ್ಲಾ ನಗರಾಭಿವೃದಿ್ಧ ಕೋಶದ ಹಿರಿಯ ಅಧಿಕಾರಿ ರಾಜಪ್ಪ ಹಾಗೂ ನೈರುತ್ಯ ರೈಲ್ವೆ ವಲಯದ ಅಧಿಕಾರಿಗಳಾದ ಸಿ.ಎನ್.ರಂಗನಾಥ್, ದೇವೇಂದ್ರ ಗುಪ್ತ, ವಲುತಿ ಮತ್ತಿತರರು ಉಪಸಿ್ಥತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT