ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ನೌಕರರ ಕ್ರೀಡಾಕೂಟ 18ರಿಂದ

Last Updated 1 ಜನವರಿ 2014, 6:08 IST
ಅಕ್ಷರ ಗಾತ್ರ

ವಿಜಾಪುರ: ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ­ಕೂಟ­­ವನ್ನು ಬೆಂಗಳೂರಿ­ನಲ್ಲಿ ಇದೇ 18ರಿಂದ 20ರವರೆಗೆ ಆಯೋಜಿಸಲಾಗಿದೆ. ಇದೇ  18ರಂದು  ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಸಿದ್ದ­ರಾಮ­ಯ್ಯ ಕ್ರೀಡಾ­ಕೂಟವನ್ನು ಉದ್ಘಾಟಿಸಲಿದ್ದಾರೆ.

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ­ದಲ್ಲಿ ವಿಜೇತರದ ಕ್ರೀಡಾಪಟುಗಳು ರಾಜ್ಯಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಕ್ರೀಡಾಪಟು­ಗಳಿಗೆ ಇಲಾಖೆ ವತಿಯಿಂದ ಟೀ ಶರ್ಟ್‌ ಹಾಗೂ ಕ್ಯಾಪ್ ವಿತರಿಸಲಾಗುತ್ತಿದ್ದು, ಕಡ್ಡಾಯವಾಗಿ ಕ್ಯಾಪ್ ಹಾಗೂ ಟೀ ಶರ್ಟ್‌್ ಧರಿಸಿ ಕ್ರೀಡಾಕೂಟದಲ್ಲಿ ಭಾಗವಹಿಸಿಬೇಕು.

ಕ್ರೀಡಾಕೂಟದ  ಸ್ಮರಣ ಸಂಚಿಕೆ ಹೊರತರ­ಲಾಗುತ್ತಿದ್ದು,  ಸಾಧಕ ನೌಕರರ ಮಾಹಿತಿ ಹಾಗೂ ಭಾವಚಿತ್ರವನ್ನು ಇದೇ10 ರೊಳಗಾಗಿ ಕೇಂದ್ರ ಸಂಘಕ್ಕೆ ಕಳುಹಿಸಿಕೊಡಬೇಕು.  ಮಾಹಿತಿಗೆ ದೂ: 08352-251085 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT