ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವಧರ್ಮ ಪೂಜನೀಯ ಬಸಪ್ಪ ಯಾತ್ರೆ

Last Updated 8 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಜಮೀನು ವ್ಯಾಜ್ಯಗಳಲ್ಲಿ ಒಡೆದುಹೋಗಿದ್ದ ಹಲವು ಸಂಸಾರಗಳು ಇಂದು ಒಂದಾಗಿವೆ. ಅಣ್ಣ ತಂಗಿಯರಿಬ್ಬರಿಗೆ ತಂದೆ ನೀಡಿದ್ದ ಆಸ್ತಿ ಹಂಚಿಕೆಯಲ್ಲಿ ವೈಮನಸ್ಸುಂಟಾಗಿ ಅರ್ಧಕ್ಕೆ ನಿಂತಿದ್ದ ವಿವಾದ ಬಗೆಹರಿದಿದೆ. ಕೆಲ ಗ್ರಾಮಗಳಲ್ಲಿ ಎರಡು ಪಂಗಡಗಳಿಗೂ ಸಂಘರ್ಷ ಉಂಟಾಗಿ ಇಬ್ಭಾಗವಾಗಿದ್ದ ಗುಂಪುಗಳು ಒಡಗೂಡಿವೆ. ಹತ್ತಿಪ್ಪತ್ತು ವರ್ಷಗಳಾದರೂ ತಾಯ್ತನದ ಭಾಗ್ಯವಿಲ್ಲದವರಿಗೆ ಮಕ್ಕಳ ಭಾಗ್ಯ ಲಭಿಸಿದೆ. ಜ್ವರದಿಂದ ಬಳಲಿ ಸಾವಿನಂಚಿನಲ್ಲಿದ್ದ ಮುಗ್ಧ ಮಗುವೊಂದು ಚೇತರಿಸಿಕೊಂಡಿದ್ದುಂಟು.

ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚಿಕ್ಕರಸಿನಕೆರೆ ಗ್ರಾಮದಲ್ಲಿರುವ ನಡೆದಾಡುವ ದೇವರು, ದೈವ ಸ್ವರೂಪಿಯಂತೆ `ಕಾಲ ಭೈರವೇಶ್ವರ ಸ್ವಾಮಿ ಬಸವಪ್ಪ' ಇಂತಹ ಅನೇಕ ಘಟನೆಗಳಿಗೆ ಸಾಕ್ಷಿಯಾಗಿದೆ. ಕ್ರೈಸ್ತರು, ಮುಸ್ಲಿಂ, ಸಿಖ್, ಬೌದ್ಧ, ಜೈನ ಧರ್ಮದವರೂ ಸೇರಿದಂತೆ ಇತರ ಧರ್ಮೀಯರು ಇಲ್ಲಿಗೆ ಆಗಮಿಸಿ ಇಷ್ಟಾರ್ಥ ನೆರವೇರಿಸಿಕೊಳ್ಳುವರು. ಇಂಥ ಅಪೂರ್ವ ಸರ್ವಧರ್ಮೀಯ ದೇವರ ಜಾತ್ರೆ ಇದೇ 21ರಿಂದ ಆರಂಭಗೊಳ್ಳಲಿದ್ದು, ಎಂಟು ದಿನಗಳವರೆಗೆ ನಡೆಯುತ್ತದೆ.

ಅನೇಕ ಪವಾಡ ಸೃಷ್ಟಿಸಿರುವ ಈ ದೇವರಲ್ಲಿಗೆ ರಾಜ್ಯದ ಮೂಲೆಮೂಲೆಗಳಿಂದಲೂ ಜನ ಸಮೂಹ ಹರಿದುಬರುತ್ತದೆ. ತಮ್ಮ ಇಷ್ಟಾರ್ಥಗಳನ್ನು ಮನಸ್ಸಿನಲ್ಲಿಟ್ಟು ಎರಡು ಕೈಗಳನ್ನು ಬಸವಪ್ಪನ ಪಾದದ ಮುಂದಿಟ್ಟರೆ, ಬಲ ಪಾದ ನೀಡಿದರೆ, ಇಷ್ಟಾರ್ಥಗಳು ನೆರವೇರುತ್ತವೆ. ಎಡ ಪಾದ ನೀಡಿದರೆ ಅಂದಕೊಂಡ ಕಾರ್ಯ ನಿಧಾನವಾಗಿ ನೆರವೇರುತ್ತವೆ ಎಂಬ ಸೂಚನೆಯಾಗಿದೆ ಎಂಬ ನಂಬಿಕೆ ಇದೆ. ಬಸವಪ್ಪನಲ್ಲಿ ಇಷ್ಟಾರ್ಥ ಸಿದ್ಧಿಗಾಗಿ ಹರಕೆಕಟ್ಟಿಕೊಂಡು ನಂತರ ಈಡೇರಿದರೆ, ಸಾವಿರ, ಲಕ್ಷ, ಹೀಗೆ ಹರಸಿಕೊಂಡಷ್ಟು ಹರಕೆಯನ್ನು ಬಸವಪ್ಪನ ಹಣೆಗೆ ಕಟ್ಟುತ್ತಾರೆ. ಕಟ್ಟಿದ ಹಣವನ್ನು ಬಸವಪ್ಪ ಒಪ್ಪಿಗೆ ಕೊಟ್ಟಾಗ ಮಾತ್ರವೇ ಬಿಚ್ಚುವುದು. ಒಪ್ಪಿಗೆ ನೀಡಿದ ಬಳಿಕವೇ ನೋಟುಗಳನ್ನು ಬಿಚ್ಚಿ ಎಣಿಕೆ ಮಾಡಿಡಲಾಗುವುದು.

ಹೀಗೆ ಸಂಗ್ರಹಿಸಿದ ಹಣ ಹಲವು ಗ್ರಾಮಗಳ ಅಭಿವೃದ್ಧಿ ಹಾಗೂ ಶಾಲೆಗಳ ನಿರ್ಮಾಣಕ್ಕೂ ಸಹ ಬಳಸಿಕೊಳ್ಳಲಾಗಿದೆ. ಕಷ್ಟವೆಂದು ಬಸವಪ್ಪನ ಮೊರೆ ಹೋದಾಗ ಅಂತಹ ವ್ಯಕ್ತಿಗಳಿಗೆ ಬಸವಪ್ಪನ ಒಪ್ಪಿಗೆಯಂತೆ ಹಣ ನೀಡಲಾಗಿದೆ. ಹಲವು ರಾಜ್ಯಗಳಿಂದಲೂ ಬಸವಪ್ಪನ ದರ್ಶನ ಪಡೆಯಲೆಂದೇ ದಿನನಿತ್ಯವೂ ಬರುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT