ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ವರಿಗೂ ಸಮಾನತೆ ಸಂಕಲ್ಪ

Last Updated 15 ಅಕ್ಟೋಬರ್ 2012, 5:55 IST
ಅಕ್ಷರ ಗಾತ್ರ

ಗದಗ: ಬಡವ-ಶ್ರೀಮಂತ ಎಂಬ ಭೇದ-ಭಾವ ಅಳಸಿ ಎಲ್ಲರಿಗೂ ಆರ್ಥಿಕ ಸಮಾನತೆ ಕಲ್ಪಿಸುವ ಗುರಿ ಹೊಂದಲಾಗಿದೆ ಎಂದು ಬಿಎಸ್‌ಆರ್ ಕಾಂಗ್ರೆಸ್ ಪಕ್ಷದ ಜಿಲ್ಲಾ ಸಂಚಾಲಕ ಅನಿಲ ಮೆಣಸಿನಕಾಯಿ ಹೇಳಿದರು.
ಬೆಟಗೇರಿ ಎಡೆಯೂರ ಸಿದ್ಧಲಿಂಗೇಶ್ವರ ನಗರದ 6ನೇ ವಾರ್ಡ್‌ನಲ್ಲಿ ಇತ್ತೀಚೆಗೆ ನಡೆದ ಕಾರ್ಯ ಕರ್ತರ ಸಭೆ ಹಾಗೂ ಕಾರ್ಯಕರ್ತರ ಸೇರ್ಪಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ತಪ್ಪು ಆರ್ಥಿಕ ನೀತಿಯಿಂದ ಜನ ಸಾಮಾನ್ಯರು ನಿತ್ಯ ಉಪಯೋಗಿಸುವ ಆಹಾರ ಧಾನ್ಯಗಳ ಬೆಲೆ ಗಗನಕ್ಕೆ ಏರಿದೆ. ಇದರಿಂದ ಬಡ ಜನತೆ ಜೀವನ ನಡೆಸುವುದು ಕಷ್ಟಕರವಾಗಿದೆ. ರಾಜ್ಯದಲ್ಲಿ ಆರ್ಥಿಕ ಸಮಾನತೆ ತರುವ ಉದ್ದೇಶ ಬಿಎಸ್‌ಆರ್ ಕಾಂಗ್ರೆಸ ಪಕ್ಷದ್ದಾಗಿದೆ ಎಂದರು.

ನಿತ್ಯ ಹಲವಾರು ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿ ಆಯ್ಕೆ ಯಲ್ಲಿ ವಿಚಾರ ಮಾಡಿ ಮತ ನೀಡ ಬೇಕು. ಮನೆ ಮಗನಂತೆ ಕೆಲಸ ಮಾಡುವ ಜನ ಪ್ರತಿನಿಧಿಗೆ ಆಯ್ಕೆ ಮಾಡುವ ಹಕ್ಕು ನಿಮ್ಮದಾಗಬೇಕಾಗಿದೆ ಎಂದು ತಿಳಿಸಿದರು. ಬಸವಣ್ಣೆಯ್ಯ ಹಿರೇಮಠ,  ರವೀಂದ್ರ ಲಕ್ಕುಂಡಿ, ಅಂಬರೀಷ ಹಿರೇಮಠ, ಮಾತನಾಡಿದರು. ಇದೇ ಸಂದರ್ಭದಲ್ಲಿ ಹಲವಾರು ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿ ಕೊಳ್ಳ ಲಾಯಿತು.

ಸತೀಶ ಮುದಗಲ್ಲ, ಆನಂದ ಗುರುಸ್ವಾಮಿ, ಪರಶುರಾಮ ಭಜಂತ್ರಿ, ಮಂಜುನಾಥ ಭಜಂತ್ರಿ, ಮಕ್ತುಮಸಾಬ ಮುಲ್ಲಾನವರ, ಸುರೇಶ ಬೆಳಮಕರ, ಸಲೀಂ ಮಹ್ಮದ್ ಪಾಟೀಲ ಪರಶಪ್ಪ ಚೌಡಿ, ಶಂಕ್ರಪ್ಪ ಮಾಳಶೆಟ್ಟಿ, ಮಹಾದೇವಪ್ಪ  ಪಲ್ಲೆದ, ಪೂಜಾ ಬೇವೂರ, ಜಯಶ್ರೀ ಅಣ್ಣಿಗೇರಿ, ಶಂಕ್ರಮ್ಮ ಭರಮಗೌಡರ ಮತ್ತಿತರರು ಹಾಜರಿದ್ದರು.  ಸುರೇಶ ನೀರಸಾಗರ ಸಂಗೀತ ಕಾರ್ಯಕ್ರಮ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT