ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸವದತ್ತಿ ಸಾಂಸ್ಕೃತಿಕ ನಗರ: ಪಾಟೀಲ

Last Updated 6 ಜನವರಿ 2014, 6:49 IST
ಅಕ್ಷರ ಗಾತ್ರ

ಸವದತ್ತಿ: ಪ್ರತಿವರ್ಷ ರಂಗಭೂಮಿ ಪ್ರೇಕ್ಷಕರನ್ನು ರಂಜಿಸುವುದರ ಜತೆಗೆ ಅದರ ಅಭಿರುಚಿ ಹೆಚ್ಚಿಸಿದ ರಂಗ ಆರಾಧನಾ ಸಾಂಸ್ಕೃತಿಕ ಸಂಘಟನೆ  ಸವದತ್ತಿ ಯನ್ನು ಸಾಂಸ್ಕೃತಿಕ ನಗರವನ್ನಾಗಿಸಿದೆ ಎಂದು ಕಸಾಪ ಬೆಳಗಾವಿ ಜಿಲ್ಲಾ ಅಧ್ಯಕ್ಷ ಯ.ರು ಪಾಟೀಲ ಹೇಳಿದರು.

ಇಲ್ಲಿನ ಕೋಟೆ ಆವರಣದಲ್ಲಿ ಆಯೋಜಿಸಿದ್ದ ಪರಸಗಡ ನಾಟಕೋತ್ಸವ–2014 ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.  ನಮ್ಮ ನಡುವಿನ ದೈನಂದಿನ ಸಮಸ್ಯೆಗಳನ್ನು ಇದ್ದಂತೆ ಇದ್ದ ಹಾಗೆ ತಮ್ಮ ನೈಜ್ಯ ಅಭಿನಯದ ಮೂಲಕ ರಂಗಭೂಮಿ ಮೇಲೆ ತೋರಿ ಸುವುದೇ ನಿಜವಾದ ಕಲೆ ಎಂದರು.

ನಾಡಿನ ಚಲಿಸುವ ರಂಗಭೂಮಿ ಎನಿಸಿಕೊಂಡ ನಾಟ್ಯಭೂಷಣ ಏಣಗಿ ಬಾಳಪ್ಪನವರಿಗೆ ನೂರು ವರ್ಷಗಳಾ ಗುವುದು, ಅದರ ಸವಿ ನೆನಪಿಗಾಗಿ ಜಿಲ್ಲಾ ಕಸಾಪವತಿಯಿಂದ ಸ್ಮಾರಕ ನಿರ್ಮಿಸುವ ಮೂಲಕ ಸರ್ಕಾರಿ ಗೌರವ ಸಲ್ಲಿಸುವ ಉದ್ದೇಶಹೊಂದಿದ್ದು, ಆ ನಿಟ್ಟಿನಲ್ಲಿ ಸಂಬಂಧ ಪಟ್ಟವರ ಜತೆ ಸಂಪರ್ಕಿ ಸಲಾಗಿದೆ ಎಂದರು.

ಖಾನಾಪುರದ ಪಿ.ಡಿ.ಒ ಆನಂದ ಬಿಂಗೆ ಮಾತನಾಡಿ, ರಂಗಭೂಮಿ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಶ್ರಮಿಸು ತ್ತಿರುವ ಸಂಘಟನೆ ಸತತ 16 ನೇ ವರ್ಷದ ನಾಟಕೋತ್ಸವ ಆಯೋಜಿಸಿದೆ. ಇಲ್ಲಿ ನಾಟಕ ಮಾಡುವುದಷ್ಟೇ ಅಲ್ಲದೇ ಕಲಾವಿದರ ವ್ಯಕ್ತಿತ್ವ ವಿಕಸನ ಮಾಡುವ ಮೂಲಕ ಜಿಲ್ಲೆಗೆ ಮಾದರಿಯಾಗಿದೆ ಎಂದರು.

ಡಾ. ಎ.ಸಿ ಕಬ್ಬಿಣ ಮಾತನಾಡಿ,  ನವರಸಗಳಿಂದ ನಾಟಕೋತ್ಸವ ನಡೆ ಸಲು ಬಯಲು ರಂಗಭೂಮಿ ಅಗತ್ಯ ವಿದ್ದು, ಪುರಸಭೆ  ವೇದಿಕೆ ನಿರ್ಮಿಸಿ ಕೊಡಬೇಕು ಎಂದು ಹೇಳಿದರು.

ಪುರಸಭೆ ಅಧ್ಯಕ್ಷೆ ಬಸವ್ವ ಅಮಾತನ್ನವರ, ಉಪಾಧ್ಯಕ್ಷ ಸುಭಾಸ ರಜಪೂತ, ಕಸಾಪ ತಾಲ್ಲೂಕು ಅಧ್ಯಕ್ಷ ಬಿ.ವಿ.ಬಿ ನರಗುಂದ, ಬಸವರಾಜ ಕಾರದಗಿ, ಎಂ.ಟಿ ಶಿಗ್ಲಿ, ಡಾ. ನಬಿ ನಾಯಕ, ಇತರರು ಉಪಸ್ಥಿತರಿದ್ದರು. ಝಕೀರ್‌ ನದಾಫ ಸ್ವಾಗತಿಸಿದರು. ಶಿವಾನಂದ ತಾರಿಹಾಳ ನಿರೂಪಿಸಿದರು. ಆನಂದ ಭೋವಿ ಕಥೆ, ಝಕೀರ್‌ ನದಾಫ ನಿರ್ದೇಶನದ ‘ಕಲ್ಲೂರ ವಾಡೆ ದಾಗ’ ನಾಟಕ ಪ್ರೇಕ್ಷಕರನ್ನು ರಂಜಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT