ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರದಿಂದ ಶ್ರೇಯೋಭಿವೃದ್ಧಿ: ರಂಭಾಪುರಿ ಶ್ರೀಗಳು

Last Updated 11 ಫೆಬ್ರುವರಿ 2012, 3:55 IST
ಅಕ್ಷರ ಗಾತ್ರ

ವಿಜಾಪುರ: `ಮನುಷ್ಯ ಪ್ರಗತಿಗೆ ಶ್ರಮಿಸಬೇಕು. ನಿರಂತರ ಪ್ರಯತ್ನ ಮತ್ತು ಸಾಧನೆಯಿಂದ ಅಸಾಧ್ಯವಾದು ದನ್ನು ಸಾಧಿಸಬಹುದು. ಪರಸ್ಪರ ಸಹಕಾರದಿಂದ ಮುನ್ನಡೆದಲ್ಲಿ  ಶ್ರೇಯೋಭಿವೃದ್ಧಿ ಸಾಧ್ಯ~ ಎಂದು ಬಾಳೆ ಹೊನ್ನೂರು ರಂಭಾಪುರಿ ಪೀಠದ ವೀರ ಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.

ಶುಕ್ರವಾರ ಇಲ್ಲಿ ನಡೆದ ಜಗದ್ಗುರು ಪಂಚಾಚಾರ್ಯ ಪತ್ತಿನ ಸಹಕಾರ ಸಂಘದ ದಶಮಾನೋತ್ಸವದ ಸಾನಿಧ್ಯ ವಹಿಸಿ, `ಪಂಚಾಚಾರ್ಯ ಸಿರಿ~ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದರು.

`ಸಕಲ ಜೀವಾತ್ಮರಿಗೆ ಲೇಸನ್ನೇ ಬಯ ಸಿದ ವೀರಶೈವ ಧರ್ಮ ಆದರ್ಶ ಮೌಲ್ಯ ಗಳನ್ನು ಎತ್ತಿ ಹಿಡಿದಿದೆ. ಉತ್ಕೃಷ್ಠ ವಿಚಾ ರಗಳನ್ನು ಮೈಗೂಡಿಸಿಕೊಂಡು ಸಕಲರ ಬಾಳಿಗೆ ಬೆಳಕು ತೋರಿದೆ. ವ್ಯಕ್ತಿ ನಿಷ್ಠೆ ಗಿಂತ ತತ್ವನಿಷ್ಠೆ ಎತ್ತಿ ಹಿಡಿದ ವೀರಶೈವ ಧರ್ಮ ಕಾಯಕ ದಾಸೋಹದ ಮಹತ್ವವನ್ನು ಪ್ರತಿಪಾದಿಸಿದೆ~ ಎಂದರು.

ಶಾಸಕ ವಿಠ್ಠಲ ಕಟಕಧೋಂಡ, ಮಾಜಿ ಶಾಸಕ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಶಿವಾನಂದ ಪಾಟೀಲ, `ಈ ಪತ್ತಿನ ಸಂಘ ಮತ್ತಷ್ಟು ಅಭಿವೃದ್ಧಿ ಸಾಧಿಸಿ ಕಷ್ಟದಲ್ಲಿರುವವರಿಗೆ ನೆರವು ನೀಡಲಿ~ ಎಂದರು.

ಚಿಮ್ಮಲಗಿ, ನಾಗಠಾಣ, ಜಾಲಹಳ್ಳಿ, ಇಂಚಗೇರಿ, ನೊಣವಿನಕೆರೆ, ಬಬಲೇಶ್ವರ, ಡೋಣೂರ, ಮನಗೂಳಿ, ಕರಬಂಟನಾಳ, ಕರಜಗಿ, ಬಸವನ ಬಾಗೇವಾಡಿಯ ಸ್ವಾಮೀಜಿ ಮಾತನಾಡಿದರು. ಸಂಘದ ಅಧ್ಯಕ್ಷ ರಾಜಶೇಖರ ಮಗಿಮಠ, ಉಪಾಧ್ಯಕ್ಷ ಸಿದ್ದಯ್ಯ ಹಿರೇಮಠ, ನಿರ್ದೇಶಕರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT