ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಸಾಂಘಿಕ ಅಭಿವೃದ್ಧಿಯಲ್ಲಿ ಖುಷಿ ಕಾಣಬೇಕು'

Last Updated 21 ಡಿಸೆಂಬರ್ 2012, 8:22 IST
ಅಕ್ಷರ ಗಾತ್ರ
ಶಿರಸಿ: ಅಂತರರಾಷ್ಟ್ರೀಯ ಮಟ್ಟದ ಸಹಕಾರಿ ಸ್ವರ್ಣಶ್ರೀ ಪ್ರಶಸ್ತಿ ಪಡೆದ ಇಲ್ಲಿನ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೇಹಳ್ಳಿ ಅವರನ್ನು ತಾಲ್ಲೂಕಿನ ಮುಂಡಗನಮನೆ ಸಹಕಾರಿ ಸಂಘದಲ್ಲಿ ಬುಧವಾರ ಹೃದಯಪೂರ್ವಕವಾಗಿ ಅಭಿನಂದಿಸಲಾಯಿತು. 
 
ಮುಂಡಗನಮನೆ ಸಹಕಾರಿ ಸಂಸ್ಥೆಯ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಂತಾರಾಮ ಹೆಗಡೆ ಶೀಗೇಹಳ್ಳಿ ದಂಪತಿಯನ್ನು ಸಂಘಟಕರು ಶಾಲು ಹೊದೆಸಿ ಸನ್ಮಾನಿಸಿದರು. ಸನ್ಮಾನ ಸ್ವೀಕರಿಸಿದ ಶಾಂತಾರಾಮ ಹೆಗಡೆ ಮಾತನಾಡಿ, ತಮಗೆ ದೊರೆತ ಪ್ರಶಸ್ತಿ ಸಹಕಾರಿ ಕ್ಷೇತ್ರಕ್ಕೆ ದೊರೆತ ಪ್ರಶಸ್ತಿಯಾಗಿದೆ ಎಂದರು. `ಮತ್ತೀಘಟ್ಟ ಭಾಗದ ಜನರು ನನ್ನ ಸಾಧನೆಯಲ್ಲಿ ಪಾಲುದಾರರಾಗಿದ್ದಾರೆ.

ಯಾವದೇ ವ್ಯಕ್ತಿ ವೈಯಕ್ತಿಕ ನೆಲೆ ಗಟ್ಟಿನಲ್ಲಿ ಬೆಳೆಯುವುದಕ್ಕಿಂತ ಸಾಂಘಿಕ ಅಭಿವೃದ್ಧಿಯಲ್ಲಿ ಖುಷಿ ಕಾಣಬೇಕು' ಎಂದರು. 
ಪತ್ರಕರ್ತ ಅಶೋಕ ಹಾಸ್ಯಗಾರ ಮಾತನಾಡಿ, `ಹಿರಿಯ ಸಹಕಾರಿಗಳ ಜೀವನ ಯುವ ಸಮುದಾಯಕ್ಕೆ ಆದರ್ಶವಾಗಬೇಕು' ಎಂದರು. 
 
ಸ್ಥಳೀಯರಾದ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ದತ್ತಾತ್ರೇಯ ದೀಕ್ಷಿತ, ಶ್ರೀನಿವಾಸ ಹೆಗಡೆ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಕೆ.ಡಿ.ದೀಕ್ಷಿತ, ಸಾವಿತ್ರಿ ಹೆಗಡೆ, ವಿ.ಆರ್.ಹೆಗಡೆ, ಸೊಸೈಟಿ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ, ಸುಬ್ರಾಯ ಹೆಗಡೆ, ಕೆರಿಯಾ ಹರಿಜನ, ಮೀಟು ಮರಾಠಿ, ಪ್ರಮೋದ ನಾಯ್ಕ, ಪರಮೇಶ್ವರಿ ಮುಕ್ರಿ, ಸುಬ್ಬಾ ಗೌಡ ಇತರರು ಉಪಸ್ಥಿತರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT