ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮೂಹಿಕ ಅತ್ಯಾಚಾರ ನಡೆಸಿ ಆಭರಣ ಲೂಟಿ

Last Updated 21 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಜಾಜ್‌ಪುರ (ಒಡಿಶಾ)(ಪಿಟಿಐ): ಒಡಿಶಾದ ಕಿಯೊಂಜಾರ್ ಜಿಲ್ಲೆಯಲ್ಲಿ ಮೂವರು ಯುವಕರು 24 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಆಕೆಯ ಆಭರಣಗಳನ್ನು ಲೂಟಿ ಮಾಡಿದ ಘಟನೆ ನಡೆದಿದೆ.

ಕಟಕ್‌ನ ಈ ವಿವಾಹಿತ ಮಹಿಳೆ ಜಾಜ್‌ಪುರ ಜಿಲ್ಲೆಯಲ್ಲಿರುವ ತನ್ನ ಸಹೋದರಿಯ ಮನೆಗೆ ತೆರಳಿದ್ದಳು. ವಾಪಸು ಬಸ್‌ಗಾಗಿ ಕಾಯುತ್ತಿದ್ದಾಗ ಆರೋಪಿಗಳಲ್ಲಿ ಒಬ್ಬನಾದ ಸುಭಾ ಅಲಿಯಾಸ್ ಪಾಪು `ಎಸ್‌ಯುವಿ'ಯಲ್ಲಿ ಆಕೆಯನ್ನು ಬಿಡುವುದಾಗಿ ಹೇಳಿದ.
ಪಕ್ಕದ  ಕಿಯೊಂಜಾರ್ ಜಿಲ್ಲೆಯ ಘಟಗಾಂವ್ ಅರಣ್ಯ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದ ಪಾಪು ತನ್ನ ಸ್ನೇಹಿತರಾದ ಮನಸ್ ದಾಸ್ ಮತ್ತು ಸುಜಿತ್ ಘಡೆಯ್ ಜತೆ ಸೇರಿ ಆಕೆಯ ಮೇಲೆ ಅತ್ಯಾಚಾರ ನಡೆಸಿದ.

ಆಕೆಗೆ ಪ್ರಜ್ಞೆ ತಪ್ಪಿದಾಗ ಆ ಗುಂಪು ಆಕೆಯ ಆಭರಣ ಹಾಗೂ ಮೊಬೈಲ್ ಫೋನ್ ಕಿತ್ತುಕೊಂಡು ಪರಾರಿಯಾಯಿತು. ಪ್ರಜ್ಞೆ ಮರಳಿದ ಮೇಲೆ ಆಕೆ ದೂರು ದಾಖಲಿಸಿದ್ದಾಳೆ. ಆರೋಪಿಗಳನ್ನು ಬಂಧಿಸಲಾಗಿದ್ದು, ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT