ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲ ಮರುಪಾವತಿಯಲ್ಲಿ ಪ್ರಾಮಾಣಿಕತೆ: ಶ್ಲಾಘನೆ

Last Updated 2 ಜನವರಿ 2012, 8:50 IST
ಅಕ್ಷರ ಗಾತ್ರ

ವಿರಾಜಪೇಟೆ: ಜಿಲ್ಲೆಯ ಬ್ಯಾಂಕ್‌ಗಳು ವಿತರಿಸುವ ಸಾಲವನ್ನು ಪಡೆಯುವ ಕೊಡಗಿನ ಜನತೆ ಮರು ಪಾವತಿಯಲ್ಲಿಯೂ ಪ್ರಾಮಾಣಿಕತೆ ಮೆರೆಯುತ್ತಿದ್ದಾರೆ ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಶ್ಲಾಘಿಸಿದರು.

ಭಾರತೀಯ ಸ್ಟೇಟ್ ಬ್ಯಾಂಕ್‌ನ ವಿರಾಜಪೇಟೆ ಶಾಖೆಯ ವತಿಯಿಂದ ತಾಲ್ಲೂಕು ಮೈದಾನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರು ಹಾಗೂ ಗೃಹ ಸಾಲ ಉತ್ಸವ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿ ದರು. ಬ್ಯಾಂಕುಗಳು ಸಾಲಗಳನ್ನು ನೀಡಲು ಭದ್ರತೆಯೊಂದಿಗೆ ಸರಳೀಕರಣ ಮಾರ್ಗ ಅನುಸರಿಸಬೇಕು. ಸಾಲ ಮರುಪಾವತಿಯನ್ನು ವಿಳಂಬ ಮಾಡಿ ಕೊಂಡು ಸಾಲ ಉಳಿಸಿಕೊಂಡರೆ ಗ್ರಾಹಕನೇ ಸಂಕಷ್ಟಕ್ಕೆ ಗುರಿಯಾಗುತ್ತಾನೆ. ಸಕಾಲದಲ್ಲಿ ಸಾಲ ಮರು ಪಾವತಿಯಾದರೆ ಬ್ಯಾಂಕ್ ಹಾಗೂ ಗ್ರಾಹಕನಿಗೂ ಒಳಿತಾಗಲಿದೆ. ಅವಶ್ಯಕತೆಗಾಗಿ ದೊರೆಯುವ ಸಾಲವನ್ನು ಸದುಪಯೋಗಪಡಿಸಿ ಕೊಳ್ಳಬೇಕು. ಕಾರು ಮತ್ತು ಗೃಹ ಸಾಲದ ಇಂದಿನ ಬ್ಯಾಂಕ್‌ನ ಯೋಜನೆ ಪ್ರತಿಯೊಬ್ಬರಿಗೂ ಪ್ರಯೋಜನಕಾರಿ ಯಾಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮನುಷ್ಯನ ಕನಸುಗಳನ್ನು ನನಸಾಗಿಸುವುದು ಬ್ಯಾಂಕುಗಳು. ಆತನ ಬೇಡಿಕೆಗೆ ತಕ್ಕಂತೆ ಸಾಲಗಳನ್ನು ನೀಡುತ್ತವೆ. ಅದನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಹಿಂತಿರುಗಿಸಿದರೆ ಬ್ಯಾಂಕ್ ಸಾಲ ಪಡೆದವರನ್ನು ಗೌರವಿಸುತ್ತದೆ, ಪುನ: ಸಾಲ ಪಡೆಯಲು ಆತ ಅರ್ಹತೆ ಪಡೆಯುತ್ತಾನೆ ಎಂದು ಹೇಳಿದರು.

ಬ್ಯಾಂಕ್‌ನ ಮೈಸೂರು ವಿಭಾಗದ ಪ್ರಾದೇಶಿಕ ವ್ಯವಸ್ಥಾಪಕ  ಟಿ.ಆರ್. ಉಗಾಲವತ್ ಮಾತನಾಡಿ, ಬ್ಯಾಂಕು ಈಗ ಬಡ್ಡಿಯಲ್ಲಿ ರಿಯಾಯಿತಿ ಯೊಂದಿಗೆ ಸಾಲದ ವಿಧಾನವನ್ನು ಸರಳೀಕರಣ ಗೊಳಿಸಿದೆ. ಬ್ಯಾಂಕ್ ಸ್ಥಳದಲ್ಲಿಯೇ ಸಾಲ ನೀಡುವ ಯೋಜನೆಯಿಂದಾಗಿ ವಿರಾಜ ಪೇಟೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಸಾಲ ಮೇಳ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಅವರು ಹೇಳಿದರು.

ವಿರಾಜಪೇಟೆಯ ಶಾಖಾ ವ್ಯವಸ್ಥಾಪಕ ಅರವಿಂದ್ ಸಾಯ್‌ಗವಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರವಿಂದ್ ಸಾಯ್‌ಗವಿ ಸ್ವಾಗತಿಸಿ, ಕೆ.ಎಂ.ಪ್ರತಾಪ್ ನಿರೂಪಿಸಿ, ಬ್ಯಾಂಕ್‌ನ ಸಿ.ಎ.ಕಾರ್ಯಪ್ಪ ವಂದಿಸಿದರು.
ಮೈಸೂರು, ಗೋಣಿಕೊಪ್ಪ ಹಾಗೂ ಬೆಂಗಳೂರಿನಿಂದ ಕಾರು ಡೀಲರುಗಳು ಮೇಳದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT