ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಯವ ಕೃಷಿಯಿಂದ ರೈತರಿಗೆ ಲಾಭ

Last Updated 25 ಜನವರಿ 2012, 10:40 IST
ಅಕ್ಷರ ಗಾತ್ರ

ಲಕ್ಷ್ಮೇಶ್ವರ: `ಹೇರಳವಾಗಿ ರಾಸಾಯನಿಕ ಗೊಬ್ಬರ ಬಳಕೆ ಮಾಡಿದ ಪರಿಣಾಮ ರೈತರ ಭೂಮಿಗಳು ಹದಗೆಟ್ಟು ಇಳುವರಿಯಲ್ಲಿ ಭಾರೀ ಕುಸಿತ ಉಂಟಾಗಿದೆ. 

 ಆದರೆ ಸಾವಯವ ಕೃಷಿಯಿಂದ ಉತ್ತಮ ಆದಾಯ ಪಡೆಯಲು ಸಾಧ್ಯವಿದ್ದು ಎಲ್ಲ ರೈತರು ಕ್ರಮೇಣವಾಗಿ ಸಾವಯವ ಕೃಷಿಯತ್ತ ಮರಳಬೇಕು~ ಎಂದು ಶಿಗ್ಲಿಯ ಸಾವಯವ ಕೃಷಿಕ ಹಾಗೂ ವಕೀಲ ಎಸ್.ಪಿ. ಬಳಿಗಾರ ರೈತರಿಗೆ ಸಲಹೆ ನೀಡಿದರು.

ರಾಜ್ಯ ಸಾವಯವ ಕೃಷಿ ಮಿಷನ್, ಸೋಮೆಶ್ವರ ಸಾಯವಯ ಕೃಷಿ ಪರಿವಾರ ಶಿಗ್ಲಿ ಹಾಗೂ ಕೃಷಿ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶಿಗ್ಲಿಯಲ್ಲಿ ಸಾವಯವ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ `ಕಪೋತಗಿರಿಯ ನಂದಿವೇರಿಮಠದ ಶಿವಕುಮಾರ ಸ್ವಾಮೀಜಿ ಮಾತನಾಡಿ `ಯುವಕರು ಕೃಷಿಯಿಂದ ವಿಮುಖರಾಗದೇ ದೇಶದ ಅಭಿವೃದ್ಧಿಯಲ್ಲಿ ತನ್ನದೇ ಪಾತ್ರ ನೀಡುತ್ತಿರುವ ಅದನ್ನು ಪೋಷಿಸಿಕೊಂಡು ಬರಬೇಕು.

ಇಂದು ಒಕ್ಕಲುತನದಲ್ಲಿ ಲಾಭ ಗಳಿಸಬೇಕು ಎಂದರೆ ರೈತರು ಸಾವಯವ ಕೃಷಿಗೆ ತಮ್ಮನ್ನು ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸಾವಯವ ಕೃಷಿ ಕೈಗೊಳ್ಳುವ ರೈತರಿಗೆ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡುವ ಅಗತ್ಯ ಇದೆ~ ಎಂದರು.

ಬಿ.ಎಚ್. ಹ್ಯಾಟಿ ಅಧ್ಯಕ್ಷತೆ ವಹಿಸಿದ್ದರು. ಎನ್.ಆರ್. ಚವ್ಹಾಣ, ವಿ.ಸಿ. ಹತ್ತಿಕಾಳ, ಎಚ್. ಎಫ್.ತಳವಾರ, ಶಂಕ್ರಣ್ಣ ದೇಸಾಯಿ, ಬಸವರಾಜ ಬೆಂಡಿಗೇರಿ, ಎಫ್.ಕೆ. ಕಾಳಪ್ಪನವರ ಮತ್ತಿತರರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಬಸವರಾಜ ನಾವಿ ಹಾಗೂ ಬೆಳ್ಳಟ್ಟಿಯ ರಾಮಣ್ಣ ಮಾಳಮ್ಮನವರ ವರನ್ನು ಸನ್ಮಾನಿಸಲಾಯಿತು. ಶಿವಾನಂದ ಮೂಲಿಮನಿ ಸ್ವಾಗತಿಸಿದರು. ಡಿ.ಎಫ್. ಹಿತ್ತಲಮನಿ ಕಾರ್ಯಕ್ರಮ ನಿರೂಪಿಸಿದರು. ನಿಂಗಪ್ಪ ದಾನಪ್ಪನವರ ವಂದಿಸಿದರು.

ಹುಲಕೋಟಿಯ ಸುರೇಶಗೌಡ ಪಾಟೀಲ ಸಾವಯವ ಕೃಷಿ ಕುರಿತು ರೈತರಿಗೆ ತರಬೇತಿ ನೀಡಿದರು. ನೂರಾರು ರೈತರು ತರಬೇತಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT