ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಿಂಚನ ಮಾಸಿಕ ಕಾರ್ಯಕ್ರಮ

Last Updated 3 ಜೂನ್ 2013, 9:35 IST
ಅಕ್ಷರ ಗಾತ್ರ

ಬಳ್ಳಾರಿ:  ಸ್ಥಳೀಯ ಹರಿಹರ-ರಾಘ ವಾಂಕ ಕನ್ನಡ ಸಂಘದ ವತಿಯಿಂದ ನಗರದ ಬಸವೇಶ್ವರ ನಗರದ ಸಂಗಮೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಸಂಜೆ  ಸಾಹಿತ್ಯ ಸಿಂಚನ ಮಾಸಿಕ ಸಾಹಿತ್ಯಿಕ ಚಿಂತನ-ಮಂಥನ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾಹಿತಿ ಕೆ.ಶಿವಲಿಂಗಪ್ಪ ಹಂದ್ಯಾಳು ಪ್ರಾಸ್ತಾವಿಕವಾಗಿ ಮಾತನಾಡಿ, ವಿರಳವಾಗುತ್ತಿರುವ ಮಕ್ಕಳ ಸಾಹಿತ್ಯದ ಬಗ್ಗೆ ಕಳವಳ ವ್ಯಕಪಡಿಸಿದರು. 

ಮಕ್ಕಳ ಸಾಹಿತ್ಯ ಅವಜ್ಞೆಗೆ ಒಳಗಾ ಗುತ್ತಿರುವುದು ಆತಂಕದ ಸಂಗತಿ. ಈಗಾಗಲೇ ಮಕ್ಕಳ ಸಾಹಿತ್ಯವನ್ನು ರಚಿಸಿರುವವರೂ ಕೂಡ ನಾವು ಮಕ್ಕಳಿ ಗಾಗಿ ಈ ಸಾಹಿತ್ಯವನ್ನು ರಚಿಸಿಲ್ಲ, ಸಹಜವಾಗಿ ಇವುಗಳನ್ನು ರಚಿಸಿದ್ದೇವೆ ಎಂದು ಹೇಳಿಕೊಳ್ಳುವ ಮೂಲಕ ಮಕ್ಕಳ ಸಾಹಿತ್ಯ ಪ್ರಕಾರಕ್ಕೂ ತಮಗೂ ಸಂಬಂಧವಿಲ್ಲವೆಂಬಂತೆ ವರ್ತಿಸುತ್ತಿದ್ದು, ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಅವರು ಹೇಳಿದರು.

ಮಕ್ಕಳ ಸಾಹಿತ್ಯ ವಿಷಯವನ್ನೇ ಚರ್ಚೆಗೆ ತೆಗೆದುಕೊಂಡು ಎ.ಎಂ. ಜಯಶ್ರೀ, ಜಡೇಶ್ ನಡವಿ, ಎ. ಎರ್ರಿಸ್ವಾಮಿ, ಪತ್ರಕರ್ತ ಪಿ.ಆರ್. ವೆಂಕ ಟೇಶ್ ಸುದೀರ್ಘ ಚರ್ಚೆ ನಡೆಸಿ, ಜಾಗತೀಕರಣದ ಫಲಶ್ರುತಿಯಾಗಿ, ದೃಶ್ಯಮಾಧ್ಯಮಗಳ ಪ್ರಭಾವದಿಂದ ಮಕ್ಕಳ ಕಥೆಗಳು, ಮಕ್ಕಳ ಕವನಗಳು ಹೆಚ್ಚಾಗಿ ಹೊರಹೊಮ್ಮುತ್ತಿಲ್ಲ. ಪಠ್ಯಕ್ರಮದಲ್ಲಿರುವ ಮಕ್ಕಳ ಹಾಡು ಮತ್ತು ಕಥೆಗಳನ್ನು ಬಿಟ್ಟರೆ ಬೇರೆ ರೀತಿಯ ಕಥೆಗಳು ಮಕ್ಕಳಿಗೆ ತಲು ಪುತ್ತಿಲ್ಲ. ಏಕೆಂದರೆ ಸಂಕೀರ್ಣ, ವಿಭಜಿತ ಕುಟುಂಬ ವ್ಯವಸ್ಥೆಯಲ್ಲಿ ಬೆಳೆಯುವ ಮಕ್ಕಳು ತಮ್ಮ ಶಾಲೆಯ ಹೋಮ್‌ವರ್ಕ್, ಪಠ್ಯ ಚಟುವಟಿಕೆಗಳಲ್ಲಿ ಸಂಪೂರ್ಣವಾಗಿ ತೊಡಗಿ ಕೊಂಡಿರುವುದು ಹಾಗೂ ಬಿಡುವಿಲ್ಲದೆ ದುಡಿಯುವ ತಂದೆತಾಯಿಗಳು ಇದಕ್ಕೆ ಕಾರಣ ಎಂದು ಪ್ರತಿಪಾದಿಸಿದರು.

ಯೋಗಶಿಕ್ಷಕ ನಾಗರಾಜ ಓಶೋರವರ ತಂತ್ರ  ಕುರಿತು ಹಾಗೂ ಇಸ್ಲಾಂ ಧರ್ಮದ ಹದೀಸ್ ಕೃತಿಗಳಲ್ಲಿನ ಪಾರಮಾರ್ಥಿಕ ಸತ್ಯಗಳನ್ನು, ವಿಷಯಗಳನ್ನು ಚರ್ಚಿಸಿದರು. ಓಶೋ ಅವರು ಭಾರತೀಯ, ಪೌರ್ವಾತ್ಯ ಹಾಗೂ ಪಾಶ್ಚಿಮಾತ್ಯ ಸಾಹಿತ್ಯ, ಸಂಸ್ಕೃತಿ, ದಾರ್ಶನಿಕ ವ್ಯಕ್ತಿಗಳನ್ನು ಆಳವಾಗಿ ಅಧ್ಯಯನ ಮಾಡಿ, ತಮ್ಮ ಪ್ರಖರ ಚಿಂತನಾ ಕ್ರಮದಿಂದ ಹಾಗೂ ವಿಶಿಷ್ಠ ವಿಷಯ ಮಂಡನೆಯಿಂದ ಕಬ್ಬಿಣದ ಕಡಲೆಯಂತಹ ವಿಷಯಗಳನ್ನು ಸರಳವಾಗಿ ಜನ ಸಾಮಾನ್ಯರಿಗೂ ಅರ್ಥವಾಗುವಂತೆ ವ್ಯಾಖ್ಯಾನಿಸುತ್ತಿದ್ದ ಮಹಾನ್ ಚೇತನ ಎಂದು ಅವರು ಅಭಿಪ್ರಾಯಪಟ್ಟರು.

ಯರ್ರಿಸ್ವಾಮಿ ಸ್ವಾಮಿಹಳ್ಳಿ ಹಾಸ್ಯ ತುಣುಕುಗಳನ್ನು ಪ್ರಸ್ತುತಪಡಿಸುವ ಮೂಲಕ ಸಾಹಿತ್ಯ ಪ್ರಿಯರನ್ನು ರಂಜಿಸಿದರು. ಎ.ಎಂ. ಜಯಶ್ರೀ, ಜಡೇಶ್ ನಡವಿ, ಸಂತೋಷ ಯಕ್ಕುಂಡಿ ಸ್ವರಚಿತ ಕವನ ವಾಚಿಸಿದರು.

ಡಾ.ಶಿವಶಾಂತಲ, ಮಂಜುನಾಥ್ ಕ.ಸಾ.ಪ ಜಿಲ್ಲಾ ಘಟಕದ ನಿಕಟಪೂರ್ವ ಅಧ್ಯಕ್ಷ ನಿಷ್ಠಿ ರುದ್ರಪ್ಪ, ಕೆ.ವಿ.ನಾಗರೆಡ್ಡಿ, ಬಿ. ಹೇಮನಗೌಡ  ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT