ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಆರ್‌ವೈ (ಚೈಲ್ಡ್ ರೈಟ್ಸ್ ಅಂಡ್ ಯೂ) ಸಂಸ್ಥೆ ಹೀಗೆ ಹೇಳುತ್ತದೆ

Last Updated 20 ಜುಲೈ 2012, 19:30 IST
ಅಕ್ಷರ ಗಾತ್ರ

ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ 2007ರ ವರದಿಯ ಪ್ರಕಾರ ಶೇ 53.2ರಷ್ಟು ಮಕ್ಕಳು ಒಂದಲ್ಲಾ ಒಂದು ರೀತಿಯಲ್ಲಿ ಲೈಂಗಿಕ ದೌರ್ಜನ್ಯಕ್ಕೆ ಗುರಿ ಆಗುತ್ತಿದ್ದಾರೆ. ಆದರೆ ಈ ವಿಷಯವನ್ನು ಹೊರಗೆಡಹುವವರು ಕೇವಲ ಶೇ 6ರಷ್ಟು ಮಕ್ಕಳು. ಶೇ 50ರಷ್ಟು ಪ್ರಕರಣಗಳಲ್ಲಿ ಆರೋಪಿಗಳು ಮಕ್ಕಳು ನಂಬಿದ್ದ ಪರಿಚಿತರೇ ಆಗಿರುತ್ತಾರೆ.

-ದೇಶದಲ್ಲಿ ಪ್ರತಿ ವರ್ಷ 8945 ಮಕ್ಕಳು ಕಾಣೆಯಾಗುತ್ತಿದ್ದಾರೆ.

-ವರ್ಷಂಪ್ರತಿ 5 ಲಕ್ಷ ಮಕ್ಕಳನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿದೆ.

-ಲೈಂಗಿಕ ಕಾರ್ಯಕರ್ತರಲ್ಲಿ ಶೇ 40ರಷ್ಟು ಮಕ್ಕಳೇ ಇದ್ದಾರೆ. ಇವರಲ್ಲಿ  2 ದಶಲಕ್ಷ ಮಂದಿ 5ರಿಂದ 15 ವರ್ಷದ ಒಳಗಿನವರು ಮತ್ತು 3.3 ದಶಲಕ್ಷ ಮಂದಿ 15ರಿಂದ 18 ವರ್ಷದ ಒಳಗಿನವರು.

-ಈ ಮಕ್ಕಳಲ್ಲಿ ಶೇ 80ರಷ್ಟು ಮಂದಿ ಐದು ಮಹಾನಗರಗಳಲ್ಲಿ ನೆಲೆಸಿದ್ದಾರೆ. ಆ ಕ್ರೂರ ನಗರಗಳೆಂದರೆ- ದೆಹಲಿ, ಮುಂಬೈ, ಕೋಲ್ಕತ್ತ, ಚೆನ್ನೈ ಮತ್ತು ಬೆಂಗಳೂರು.

-ಈ ಮಕ್ಕಳಲ್ಲಿ ಶೇ 71ರಷ್ಟು ಮಂದಿ ಅನಕ್ಷರಸ್ಥರು.

ಕಾನೂನು ರಕ್ಷಣೆ

ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಮಕ್ಕಳ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯ ತಡೆಯಲು ಕೆಲವು ಕಾನೂನುಗಳು ನಮ್ಮಲ್ಲಿವೆ. ಅವುಗಳೆಂದರೆ

-ಅನೈತಿಕ ಮಾರಾಟ (ತಡೆ) ಕಾಯ್ದೆ: ಇದು 16 ವರ್ಷದ ಒಳಗಿನ ಮಕ್ಕಳು ವಾಣಿಜ್ಯ ಉದ್ದೇಶದ ಲೈಂಗಿಕ ಕಾರ್ಯಕ್ಕೆ ಬಳಕೆಯಾಗುವುದಕ್ಕೆ ತಡೆ ಒಡ್ಡುತ್ತದೆ.

-ಬಾಲ ನ್ಯಾಯ ಕಾಯ್ದೆ: ಇದರ ಸೆಕ್ಷನ್ 26 (ಮಕ್ಕಳು ಅಥವಾ ಬಾಲ ಉದ್ಯೋಗಿಯ ಶೋಷಣೆ) ಮಕ್ಕಳನ್ನು ಅಪಾಯಕಾರಿ ಹುದ್ದೆಗಳಲ್ಲಿ ತೊಡಗಿಸುವವರಿಗೆ ಶಿಕ್ಷೆ ವಿಧಿಸಲು ಅವಕಾಶ ಮಾಡಿಕೊಡುತ್ತದೆ.

-ಮಕ್ಕಳ ವಿವಾಹ ತಡೆ ಕಾಯ್ದೆ: 18 ವರ್ಷದೊಳಗಿನ ಹೆಣ್ಣು ಮಕ್ಕಳು ಹಾಗೂ 21 ವರ್ಷದೊಳಗಿನ ಗಂಡು ಮಕ್ಕಳಿಗೆ ಮದುವೆ ಮಾಡುವವರನ್ನು ಶಿಕ್ಷೆಗೆ ಗುರಿಪಡಿಸುತ್ತದೆ.

ಇವುಗಳ ಜೊತೆಗೆ ಮಕ್ಕಳ ಹಕ್ಕು ರಕ್ಷಣೆಗಾಗಿಯೇ ಇರುವ ಆಯೋಗವು ಈ ಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸುತ್ತದೆ. ಅಗತ್ಯ ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT