ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಇಟಿ: ಸೋಮವಾರ ಕೊನೆ ದಿನ

Last Updated 18 ಜುಲೈ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಎರಡನೇ ಸುತ್ತಿನ ಆನ್‌ಲೈನ್ ಕೌನ್ಸೆಲಿಂಗ್‌ನಲ್ಲಿ ಗುರುವಾರ ಸಂಜೆವರೆಗೆ 21,940 ವಿದ್ಯಾರ್ಥಿಗಳು 5,97,652 ಆದ್ಯತೆ ಗುರುತಿಸಿದ್ದಾರೆ.

ಸೋಮವಾರ ಬೆಳಿಗ್ಗೆ 10.30 ರವರೆಗೂ ಆದ್ಯತೆ ಗುರುತಿಸಲು ಅವಕಾಶ ಇದೆ. ಮಂಗಳವಾರ ಸೀಟು ಹಂಚಿಕೆ ಪಟ್ಟಿ ಪ್ರಕಟಿಸಲಾಗುವುದು.

ಏಳು ವೈದ್ಯಕೀಯ ಕಾಲೇಜುಗಳಲ್ಲಿ 223 ಸೀಟು, ಮೂರು ದಂತ ವೈದ್ಯ ಕಾಲೇಜುಗಳಲ್ಲಿ 53 ಸೀಟು ಹೊಸದಾಗಿ ಸೇರಿದೆ. ಈ ಸೀಟುಗಳು ಎರಡನೇ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಆಯ್ಕೆಗೆ ಲಭ್ಯವಾಗಲಿದ್ದು, ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ಬೆಂಗಳೂರಿನ ವಿ.ಎಸ್.ದಂತ ಕಾಲೇಜು, ರಾಜೀವ್‌ಗಾಂಧಿ ದಂತ ಕಾಲೇಜಿನಲ್ಲಿ ತಲಾ 14 ಸೀಟು, ಮಂಗಳೂರಿನ ಶ್ರೀನಿವಾಸ ದಂತ ಕಾಲೇಜಿನಲ್ಲಿ 25 ಸೀಟು ಹೊಸದಾಗಿ ಸೇರಿದ್ದು, ಇವನ್ನು ಸರ್ಕಾರಿ ಕೋಟಾದಲ್ಲಿ ಹಂಚಲಾಗುತ್ತದೆ.

ಮೊದಲ ಸುತ್ತಿನಲ್ಲಿ ಸೀಟು ಆಯ್ಕೆ ಮಾಡಿಕೊಂಡು ಪ್ರವೇಶ ಪಡೆದವರು ವೆಬ್‌ಪೋರ್ಟಲ್ ಮೂಲಕ ಗಮನಕ್ಕೆ ತರಬೇಕು. ಸೀಟು ವಾಪಸ್ ಮಾಡಲು ಬಯಸುವವರು ಇದೇ 22ರ ಬೆಳಿಗ್ಗೆ 11 ಗಂಟೆ ಒಳಗೆ ತಿಳಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT