ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರಿಯಾ ರಾಸಾಯನಿಕ ಅಸ್ತ್ರ ನಾಶಕ್ಕೆ ಒಪ್ಪಂದ

ಅಮೆರಿಕ– ರಷ್ಯಾ ಮಾತುಕತೆ ಯಶಸ್ವಿ
Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನ್ಯೂಯಾರ್ಕ್‌/ಜಿನಿವಾ (ಎಪಿ/ ಪಿಟಿಐ): ಸಿರಿಯಾದಲ್ಲಿ ಇರಬ­ಹು­ದಾದ ರಾಸಾಯನಿಕ ಅಸ್ತ್ರಗಳನ್ನು ಅಂತರರಾಷ್ಟ್ರೀಯ ಸಮುದಾಯದ ನಿಯಂತ್ರಣಕ್ಕೆ ಪಡೆಯುವ ಹಾಗೂ ಅವುಗಳನ್ನು ನಾಶ ಮಾಡುವ ಬಗ್ಗೆ ಅಮೆರಿಕ –ರಷ್ಯಾ ನಡುವೆ ಒಪ್ಪಂದ ಏರ್ಪಟ್ಟಿದೆ.

ಅಮೆರಿಕದ ವಿದೇಶಾಂಗ ಕಾರ್ಯ­ದರ್ಶಿ ಜಾನ್‌ ಕೆರಿ ಹಾಗೂ ರಷ್ಯಾದ ವಿದೇಶಾಂಗ ಸಚಿವ ಸರ್ಗೆ ಲಾವೋರ್‌ ಅವರು ಮೂರು ದಿನಗಳಿಂದ ಜಿನಿವಾ­ದಲ್ಲಿ ಈ ಬಗ್ಗೆ ನಡೆಸಿದ ಸಂಧಾನ ಮಾತುಕತೆ ಫಲಪ್ರದವಾಗಿದೆ.

ಆದರೆ ಅಧ್ಯಕ್ಷ ಬರಾಕ್‌ ಒಬಾಮ ಅವರು ‘ಸಿರಿಯಾ ಮೇಲೆ ಸೇನಾ ಕಾರ್ಯಾಚರಣೆ ವಿಷಯವನ್ನು ನಾವು ಇನ್ನೂ ಕೈಬಿಟ್ಟಿಲ್ಲ’ ಎಂದಿದ್ದಾರೆ.
ಎಚ್ಚರಿಕೆ: ಒಂದೊಮ್ಮೆ ಅಂತರ­ರಾಷ್ಟ್ರೀಯ ಸಮುದಾಯದ ನಿಯಂತ್­ರಣಕ್ಕೆ ತನ್ನಲ್ಲಿರುವ ರಾಸಾಯನಿಕ ಅಸ್ತ್ರಗಳನ್ನು ಒಪ್ಪಿಸಲು ಸಿರಿಯಾ ಹಿಂದೇಟು ಹಾಕಿದರೆ, ಆ ದೇಶದ ಮೇಲೆ ಸೇನಾ ಕಾರ್ಯಾಚರಣೆ ನಡೆ­ಸಲು ವಿಶ್ವಸಂಸ್ಥೆ ಭದ್ರತಾ ಮಂಡಳಿ ಅನುಮತಿ ಕೇಳುವುದಾಗಿ ಇಬ್ಬರೂ ಮುಖಂಡರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಮ್ಮ ಗುರಿ ಸಿರಿಯಾದಲ್ಲಿರುವ ರಾಸಾ­ಯನಿಕ ಅಸ್ತ್ರಗಳನ್ನು 2014ರ ಮಧ್ಯ ಭಾಗದ ವೇಳೆಗೆ ನಾಶ ಪಡಿಸು­ವುದು ಆಗಿದೆ’ ಎಂದು ಕೆರಿ ಹೇಳಿದರು.
ಸಿರಿಯಾದಲ್ಲಿನ ರಾಸಾಯನಿಕ ಅಸ್ತ್ರ­ಗಳನ್ನು ನಾಶ ಮಾಡುವ ಕಾಲಮಿತಿ­ಯನ್ನು ವಿಶ್ವ ಸಂಸ್ಥೆಯ ರಾಸಾಯನಿಕ ಅಸ್ತ್ರ ನಿಷೇಧ ಸಂಸ್ಥೆಯು ನಿರ್ಧರಿಸಲಿದೆ ಎಂದು ಸರ್ಗೆ ಲಾವೋರ್‌ ತಿಳಿಸಿದರು.

ಅಮೆರಿಕ–ರಷ್ಯಾ ನಡುವೆ ಸಿರಿಯಾ ಕುರಿತು ನಡೆದ ಮಾತುಕತೆ ಯಶಸ್­ವಿಯಾಗಿರುವುದರಿಂದ ಆ ದೇಶದಲ್ಲಿ 2 ವರ್ಷಗಳಿಂದ ನಡೆಯುತ್ತಿರುವ ಆಂತ­ರಿಕ ಯುದ್ಧ ಕೊನೆಗೊಳಿಸಲು ಶಾಂತಿ ಮಾತುಕತೆಗೆ ವೇದಿಕೆ ಸಿದ್ಧವಾದಂತೆ ಆಗಿದೆ.
 

>ಒಪ್ಪಂದದ ಮುಖ್ಯಾಂಶಗಳು
* ತನ್ನ ಬಳಿ ಇರುವ ರಾಸಾಯನಿಕ ಅಸ್ತ್ರಗಳ ಅಸ್ತ್ರಗಳ ಹೆಸರು, ಪ್ರಮಾಣ, ವಿಧ, ಪೂರೈಕೆ ಮಾಡುವ ವ್ಯಕ್ತಿಗಳು, ದಾಸ್ತಾನು ಮಾಡಿರುವ ಸ್ಥಳ, ಸಂಗ್ರಹಿಸಿ ಇಟ್ಟಿರುವ ವಿಧಾನ, ಉತ್ಪಾದನೆ, ಸಂಶೋಧನೆ ಮತ್ತು ಅಭಿವೃದ್ಧಿ ಪಡಿಸಿದ ವಿಧಾನಗಳನ್ನು ವಿವರವಾಗಿ ಒಂದು ವಾರದ ಒಳಗೆ ತಿಳಿಸಬೇಕು.

* ಅಂತರರಾಷ್ಟ್ರೀಯ ವೀಕ್ಷಕರು ಸಿರಿಯಾದಲ್ಲಿರುವ ಅಸ್ತ್ರಗಳನ್ನು ತಪಾಸಣೆ ಮಾಡಲು ಪೂರ್ಣ ಸಹಕಾರ ನೀಡಬೇಕು.

* ಒಂದೊಮ್ಮೆ ಅಂತಹ ಅಸ್ತ್ರಗಳು ಇದ್ದಲ್ಲಿ ಅವುಗಳನ್ನು ಕಾಲಮಿತಿಯಲ್ಲಿ ಅಂತರರಾಷ್ಟ್ರೀಯ ಸಮುದಾಯದ ನಿಯಂತ್ರಣಕ್ಕೆ ನೀಡಿ  ನಾಶ ಪಡಿಸಲು ಅವಕಾಶ ನೀಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT