ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮಾಂಧ್ರ ಬಂದ್‌: ಮಿಶ್ರ ಪ್ರತಿಕ್ರಿಯೆ

Last Updated 7 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ (ಪಿಟಿಐ): ಆಂಧ್ರ ವಿಭಜನೆ ಕುರಿತ ಕರಡು ಮಸೂ­ದೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿರುವು­ದನ್ನು ಖಂಡಿಸಿ ಅಖಂಡ ಆಂಧ್ರಪ್ರದೇಶ ಪರ ಹೋರಾಟ ನಡೆಸುತ್ತಿರುವ ಸಂಘ­ಟನೆಗಳು ನೀಡಿದ್ದ ಬಂದ್‌ ಕರೆಗೆ ಶನಿ­ವಾರ ಸೀಮಾಂಧ್ರದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ತೆಲುಗು ದೇಶಂ ಪಕ್ಷ (ಟಿಡಿಪಿ) ಮತ್ತು ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷಗಳು ಅಖಂಡ ಆಂಧ್ರಪ್ರದೇಶ ಪರ ಹೋರಾಟ ಮಾಡುತ್ತಿರುವ ಸಂಘಟನೆಗಳೊಂದಿಗೆ ಸೇರಿ ಸೀಮಾಂಧ್ರ ಭಾಗದಲ್ಲಿ ಪ್ರತಿಭಟನೆ­ಗಳನ್ನು ಆಯೋಜಿಸಿದ್ದವು.

ಈ ಮುನ್ನ, ವೈಎಸ್‌ಆರ್‌ ಕಾಂಗ್ರೆಸ್‌ ಪಕ್ಷ ಮಾತ್ರ ಶುಕ್ರವಾರ ಬಂದ್‌ಗೆ ಕರೆ ನೀಡಿತ್ತು. ನಂತರ ಇದನ್ನು ಶನಿವಾರಕ್ಕೂ ವಿಸ್ತರಿಸುವಂತೆ ಆ ಪಕ್ಷ ಕರೆ ಕೊಟ್ಟಿತು.  ಆಂಧ್ರಪ್ರದೇಶ ಪತ್ರಾಂಕಿತೇತರ ಅಧಿಕಾರಿ­ಗಳ ಸಂಘ, ಟಿಡಿಪಿ ಪ್ರತ್ಯೇಕವಾಗಿ ಶನಿ­ವಾರ ಬಂದ್‌ಗೆ ಕರೆ ನೀಡಿದ್ದವು. 

ಈ ಮಧ್ಯೆ, ಆಂಧ್ರಪ್ರದೇಶ ವಿಭಜನೆ ಕುರಿತು ಪ್ರತಿ­ಕ್ರಿಯಿಸಿದ ಕೇಂದ್ರ ಜವಳಿ ಸಚಿವ ಕಾವೂರಿ ಸಾಂಬಸದಾಶಿವ ರಾವ್‌, ಈ ಕುರಿತ ಮಸೂದೆಗೆ ಸಂಸತ್ತಿನಲ್ಲಿ ಅಂಗೀಕಾರ ದೊರಕುವ ಸಾಧ್ಯತೆ ಇಲ್ಲ ಎಂದರು.

‘ಕರಡು ಮಸೂದೆಗೆ ಸಂಪುಟ ಒಪ್ಪಿಗೆ ನೀಡಿರಬಹುದು ಆದರೆ, ಈ ಮಸೂದೆ ಸಂಸತ್ತಿಗೆ ಬರುವುದೇ ಅನುಮಾನ’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT