ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುನಾಮಿಯಿಂದ ರಕ್ಷಣೆ: ಇಸ್ರೊ ಉಪಗ್ರಹಕ್ಕೆ ಮೊರೆ

Last Updated 22 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ):  ಆಸ್ಟ್ರೇಲಿಯಾ ದಂತಹ ಮುಂದುವರೆದ ರಾಷ್ಟ್ರಗಳು    ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ನೆರವು ಪಡೆಯಲು ಮುಂದಾಗಿರುವುದು ದೇಶದ ಪ್ರತಿಷ್ಠೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಸಾಗರದ ಅಧ್ಯಯನ ಮತ್ತು ರಕ್ಷಣೆ ಉದ್ದೇಶದಿಂದ ಹಾರಿಬಿಡಲಾದ ಇಸ್ರೊದ ‘ಓಸಿಯನ್‌ ಸ್ಯಾಟ್‌-2’ ಉಪ ಗ್ರಹದ ದತ್ತಾಂಶ ಹಂಚಿಕೊಳ್ಳಲು ಆಸ್ಟ್ರೇಲಿಯಾ ಸರ್ಕಾರ ಉತ್ಸಾಹ ತೋರಿಸಿದೆ.

ಸುನಾಮಿ ಮತ್ತು ಚಂಡಮಾರುತಗಳಿಂದ ತನ್ನ 60 ಸಾವಿರ ಕಿ.ಮೀ ಕರಾವಳಿ ತೀರವನ್ನು ರಕ್ಷಿಸಲು ಇಸ್ರೊದ ನೆರವು ಕೋರಿದೆ.
ಒಸಿಯನ್‌ ಸ್ಯಾಟ್‌-2 ಉಪಗ್ರಹ ಸಾಗರದ ಬಣ್ಣ, ವಿಶೇಷತೆಗಳನ್ನು ಕರಾರುವಕ್ಕಾಗಿ ತಿಳಿಸುತ್ತದೆ. ಸಾಗರದ ನೀರಿನ ಬಣ್ಣ ಮತ್ತು ವಾತಾವರಣ­ದಲ್ಲಾಗುವ ಬದಲಾ­ವಣೆಗಳಿಂದ ಸುನಾ­ಮಿಯ ಮತ್ತು ಚಂಡಮಾರುತ ಅಪ್ಪಳಿಸುವ ಅಪಾಯವನ್ನು  ಮುಂಚಿತವಾಗಿ ಅರಿಯಬಹುದಾಗಿದೆ.

ಈ ಉಪಗ್ರಹ ಕಳಿಸುವ ಚಿತ್ರಗಳು ಅತ್ಯಂತ  ಸ್ಪಷ್ಟ ಮತ್ತು ಕರಾರುವಕ್ಕಾಗಿರುತ್ತವೆ ಎನ್ನು ತ್ತಾರೆ ಆಸ್ಟ್ರೇಲಿಯಾದ ಖನಿಜ ಮತ್ತು ಪ್ರಕೃತಿ ವಿಕೋಪ ನಿಯಂತ್ರಣ ವಿಭಾಗದ ಮುಖ್ಯಸ್ಥ ಆ್ಯಂಡಿ ಬರ್ನಿಕೋಟ್‌.

ಮಾರ್ಗಸೂಚಿ ವ್ಯವಸ್ಥೆಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗೆ ಕಾರಣ­ವಾಗಿರುವ ಐಆರ್‌ಎನ್‌ಎಸ್‌ಎಸ್‌ ಮತ್ತು ಹಗಲು, ರಾತ್ರಿಗಳಲ್ಲದೇ ಪ್ರತಿ­ಕೂಲ ವಾತಾವರಣದಲ್ಲೂ ಭೂಮಿಯ ಸ್ಪಷ್ಟ ಚಿತ್ರಗಳನ್ನು ಹಿಡಿಯ ಬಲ್ಲ ರಿಸಾಟ್‌ ಉಪಗ್ರಹಗಳ ನೆರವನ್ನು ಪಡೆಯಲು  ಉತ್ಸುಕರಾಗಿರುವುದಾಗಿ ಅವರು ತಿಳಿಸಿದರು.

ಶೀಘ್ರದಲ್ಲಿಯೇ ಬೆಂಗಳೂರಿನಲ್ಲಿ ಇಸ್ರೊ ಅಧಿಕಾರಿಗಳನ್ನು ಕಂಡು ಈ ಕುರಿತು ಮಾತುಕತೆ ನಡೆಸುವುದಾಗಿ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT