ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪ್ರೀಂ ಎಚ್ಚರ, ಪಾಕ್ ನಲ್ಲಿ ತುರ್ತು ಅಧಿವೇಶನ

Last Updated 11 ಜನವರಿ 2012, 5:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): ~ಎಲ್ಲರ ಗಮನ ಸೆಳೆದಿರುವ ಬ್ರಷ್ಟಾಚಾರ ಪ್ರಕರಣಗಳನ್ನು ಪುನಃ ವಿಚಾರಣೆಗೊಳಪಡಿಸುವಲ್ಲಿ ವಿಫಲವಾಗಿರುವ ಅಧ್ಯಕ್ಷ ಮತ್ತು ಪ್ರಧಾನಿಗಳ ವಿರುದ್ಧ ಕ್ರಮ ಅನಿವಾರ್ಯ~ ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ಅಧಿಕಾರದಲ್ಲಿರುವ ಸಮ್ಮಿಶ್ರ ಸರ್ಕಾರದ ಪಾಲುದಾರರಾಗಿರುವ ಪಕ್ಷಗಳ ನಾಯಕರು ನಾಳೆ ಗುರುವಾರ ಸಂಸತ್ತಿನ ತುರ್ತು ಅಧಿವೇಶನ ಕರೆಯಲು ನಿರ್ಧರಿಸಿದ್ದಾರೆ.

ಮಂಗಳವಾರ ತಡ ರಾತ್ರಿ ಅಧ್ಯಕ್ಷ  ಆಸೀಫ್ ಅಲಿ ಜರ್ದಾರಿ ಮತ್ತು  ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರ ಜಂಟಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

~ಸಮ್ಮಶ್ರ ಸರ್ಕಾರದ ನೇತೃತ್ವ ವಹಿಸಿರುವ ಪಾಕಿಸ್ತಾನ್ ಪೀಪಲ್ಸ್ ಪಕ್ಷದ ನಾಯಕರು ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಚರ್ಚೆ ನಡೆಸಲು ಸಂಸತ್ತಿನ ಅಥವಾ ರಾಜ್ಯಸಭೆಯ ತುರ್ತು ಅಧಿವೇಶನ ಕರೆಯುವುದು ಅನಿವಾರ್ಯ ಎಂದು ಸಲಹೆ ನೀಡಿದರು. ಕೊನೆಗೆ ಗುರುವಾರ ಸಂಜೆ  4ಗಂಟೆಗೆ ಸಂಸತ್ ಅಧಿವೇಶನ ಕರೆಯಲು ತೀರ್ಮಾನಿಸಲಾಯಿತೆಂದು~ ಅಧ್ಯಕ್ಷರ ವಕ್ತಾರ ಫರ್ತುಲ್ಲಾ ಬಾಬರ್ ಅವರು ಬುಧವಾರ ಇಲ್ಲಿ ತಿಳಿಸಿದ್ದಾರೆ.

 ಕಳೆದ  2007ರಲ್ಲಿ ಹಿಂದಿನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅಧಿಕಾರಾವಧಿಯಲ್ಲಿನ ಭ್ರಷ್ಟಾಚಾರ ಪ್ರಕರಣಗಳಲ್ಲಿ ನೀಡಲಾಗಿದ್ದ ಕ್ಷಮಾದಾನ ಪ್ರಕರಣಗಳನ್ನು ಪುನಃ ವಿಚಾರಣೆಗೆ ಕೈಗೆತ್ತಿಕೊಳ್ಳುವಂತೆ ತಾನು ನೀಡಿದ ಆದೇಶವನ್ನು ಪಾಲಿಸಲು ವಿಫಲರಾದ ಪಾಕ್ ಅಧ್ಯಕ್ಷ ಮತ್ತು ಪ್ರಧಾನಿ ಅವರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಪಾಕ್ ನ ಸುಪ್ರೀಂ ಕೋರ್ಟ್ ನ ಐವರು ನ್ಯಾಯಮೂರ್ತಿಗಳ ನ್ಯಾಯಪೀಠ  ಮಂಗಳವಾರ ಪ್ರಧಾನಿ ಗಿಲಾನಿ ಅವರಿಗೆ ಛೀಮಾರಿ ಹಾಕಿತ್ತು.

ಸುಪ್ರೀಂ ಕೋರ್ಟ್, ಕಳೆದ ಡಿಸೆಂಬರ್ 2009ರಲ್ಲಿ ಮುಷರಫ್ ಅವರು ನೀಡಿದ ಕ್ಷಮಾದಾನವನ್ನು ರದ್ದು ಪಡಿಸಿತ್ತು. ಅಂದಿನಿಂದ ಭ್ರಷ್ಟಚಾರದ ಪ್ರಕರಣಗಳಲ್ಲಿ ಸಿಲುಕಿದ್ದ ಅಧ್ಯಕ್ಷ ಜರ್ದಾರಿ ಸೇರಿದಂತೆ ಕ್ಷಮಾದಾನದ ಫಲಾನುಭವಿಗಳಾದ 8000ಕ್ಕೂ ಅಧಿಕ ಮಂದಿಯ ವಿರುದ್ಧದ ಪ್ರಕರಣಗಳನ್ನು ಪುನಃ ಕೈಗೆತ್ತಿಕೊಳ್ಳುವಂತೆ ಸುಪ್ರೀಂ ಕೋರ್ಟ್ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT