ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಲೋಚನಾ ಮನ್ನಾಡೆ ನಿಧನ

Last Updated 19 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಖ್ಯಾತ ಗಾಯಕ ಮನ್ನಾ ಡೇ ಅವರ ಪತ್ನಿ ಸುಲೋಚನಾ ಕುಮಾರನ್ (88) ಗುರುವಾರ ಮುಂಜಾನೆ ಇಲ್ಲಿ ತಮ್ಮ ಸ್ವಗೃಹದಲ್ಲಿ ನಿಧನರಾದರು.

ಮನ್ನಾ ಡೇ ಅವರ ಸಂಗೀತ ಸಾಧನೆಯ ಹಿಂದೆ ಸುಲೋಚನಾ ಕೊಡುಗೆ ಅಪಾರ. ಮೂರು ದಶಕಗಳ ಹಿಂದೆ ರಾಷ್ಟ್ರ ಪ್ರಶಸ್ತಿ ಪಡೆದ ಹೆಸರಾಂತ ಮಲೆಯಾಳಂ ಸಿನೆಮಾ `ಚೆಮ್ಮೀನ್~ನ  `ಮಾನಸ ಮೈನೆವರು...~ ಹಾಡು ಕೇಳದವರಾರು?. ಅಂದು ದಕ್ಷಿಣ ಭಾರತದ ಬಹುತೇಕ ಮಂದಿ ಈ ಹಾಡಿನ ಮಾಧುರ್ಯಕ್ಕೆ ಮನಸೋತವರೆ. ಅದನ್ನು ಹಾಡಿದವರು ಮನ್ನಾಡೇ. ಇವರು ಬಂಗಾಳಿಯಾಗಿದ್ದು, ಮಲೆಯಾಳಂ ಭಾಷೆ ಒಂದಿನಿತೂ ಗೊತ್ತಿರಲಿಲ್ಲ. ಆದರೆ ಆ ಹಾಡಿನ ಅರ್ಥ, ಭಾವಗಳನ್ನು ಮನ್ನಾಡೇ ಅವರ ಹೃದಯಕ್ಕೆ ತುಂಬಿದವರು ಸುಲೋಚನಾ.

ನಲ್ವತ್ತರ ದಶಕದಲ್ಲಿ ಮನ್ನಾಡೇ ಅವರು ಕೋಲ್ಕತ್ತದಿಂದ ಮುಂಬೈಗೆ ಬಂದು ಹಿಂದಿ ಚಲನಚಿತ್ರ ಲೋಕದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದರು. ಆಗ ಅವರು ಅದರಲ್ಲಿ ಯಶಸ್ಸು ಗಳಿಸದೆ ಜೀವನದಲ್ಲಿ ಜಿಗುಪ್ಸೆಗೊಂಡಿದ್ದರು. ಸನ್ಯಾಸಿಯೂ ಆಗಬೇಕೆಂದಿದ್ದರು. ಆಗ ಅವರ ಬಾಳಲ್ಲಿ ಬಂದವರು ಬೆಂಗಳೂರಿನ ಸುಲೋಚನಾ.
 
ಇವರ ಹೆತ್ತವರು ಮೂಲತಃ ಕೇರಳದ ಕಣ್ಣೂರಿನವರು.ಸುಲೋಚನಾ ಮುಂಬೈನಲ್ಲಿ ಆಂಗ್ಲಭಾಷೆಯಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಆಗ ಪರಿಚಯವಾದ ಮನ್ನಾ ಡೇ ಅವರು ಸುಲೋಚನಾ ಅವರನ್ನು 1953ರಲ್ಲಿ ವಿವಾಹವಾದರು.

ಆ ನಂತರ ಮನ್ನಾಡೇ ಅವರ ಸಂಗೀತ ಬದುಕಿನ ಹಿಂದೆ ಸ್ಫೂರ್ತಿಯ ಸಿಂಚನವಾಗಿ ನಿಂತವರು ಸುಲೋಚನಾ. ಮನ್ನಾಡೇ ತಮ್ಮ ಬದುಕಿನ ಸಂಧ್ಯಾಕಾಲದಲ್ಲಿ ಬೆಂಗಳೂರಿನಲ್ಲಿ ಪತ್ನಿಯ ಜತೆಯಲ್ಲಿಯೇ ನೆಲೆಸಿದರು.  ಸುಲೋಚನಾ ಅವರು ಪತಿ ಮನ್ನಾ ಡೇ, ಪುತ್ರಿಯರಾದ ಶುರೋಮಿ ಮತ್ತು ಸುಮಿತಾ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT