ಬೆಳಗಾವಿ ಮೂಲದ ವೈದ್ಯೆ ಸವಿತಾ ಹಾಲಪ್ಪನವರ ಅವರು ಗಾಲ್‌ವೆ ವಿವಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಗರ್ಭಿಣಿಯಾಗಿದ್ದ ಅವರು, ದೇಹಸ್ಥಿತಿ ಬಿಗಡಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಗರ್ಭಪಾತ ಮಾಡುವಂತೆ ಮನವಿ ಸಲ್ಲಿಸಿದ್ದರು. ಭ್ರೂಣದ ಹೃದಯ ಬಡಿತ ಇದ್ದಿದ್ದರಿಂದ ಮತ್ತು ಇದು ಕ್ಯಾಥೋಲಿಕ್ ರಾಷ್ಟ್ರ ಎಂಬ ಕಾರಣ ನೀಡಿ ಗರ್ಭಪಾತ ನಿರಾಕರಿಸಲಾಗಿತ್ತು. ಇದು ವಿಶ್ವದಾದ್ಯಂತ ಭಾರಿ ವಿವಾದ ಹುಟ್ಟು ಹಾಕಿತ್ತು.