ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಫೈನಲ್‌ಗೆ ಕಾರ್ಯದರ್ಶಿ ಇಲೆವೆನ್

ಶಫಿ ದಾರಾಷ ಕ್ರಿಕೆಟ್: ಅಸ್ಸಾಂಗೆ ನಿರಾಸೆ, ಕರುಣ್ ನಾಯರ್ 97 ರನ್
Last Updated 1 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಕರುಣ್ ನಾಯರ್ ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್ ತಂಡ ಶಫಿ ದಾರಾಷ ಕ್ರಿಕೆಟ್ ಟೂರ್ನಿಯ ಅಸ್ಸಾಂ ಎದುರಿನ ಪಂದ್ಯದಲ್ಲಿ ಐದು ವಿಕೆಟ್‌ಗಳ ಗೆಲುವು ಸಾಧಿಸಿ ಸೆಮಿಫೈನಲ್ ಪ್ರವೇಶಿಸಿತು.

ಎಸ್‌ಜೆಸಿಇ ಎಂಜಿನಿಯರಿಂಗ್ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಅಸ್ಸಾಂ 314 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 73.1 ಓವರ್‌ಗಳಲ್ಲಿ 299 ರನ್ ಗಳಿಸಿತ್ತು. ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ್ದ ಕಾರ್ಯದರ್ಶಿ ಇಲೆವೆನ್ ಕೊನೆಯ ದಿನವಾದ ಗುರುವಾರ ಅಬ್ಬರದ ಬ್ಯಾಟಿಂಗ್ ನಡೆಸಿತು. ಮೂಲತಃ ಜೋಧಪುರದವರಾದ ಕರುಣ್ (97, 101ಎಸೆತ, 12 ಬೌಂಡರಿ) ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅನಿರುದ್ಧ್ ಜೋಶಿ (58, 64ಎಸೆತ, 4ಬೌಂಡರಿ, 1 ಸಿಕ್ಸರ್) ನೆರವಾದರು.

ಕೋಲ್ಟ್ಸ್ ತಂಡಕ್ಕೆ ನಿರಾಸೆ: ಕೆಎಸ್‌ಸಿಎ ಕೋಲ್ಟ್ಸ್ ತಂಡ ತನ್ನ ಮೂರನೇ ಲೀಗ್ ಪಂದ್ಯದಲ್ಲಿ ಹರಿಯಾಣ ಎದುರು ಡ್ರಾ ಸಾಧಿಸಿತಾದರೂ, ಇನಿಂಗ್ಸ್ ಮುನ್ನಡೆ ಸಾಧಿಸಿದ ಆಧಾರದ ಮೇಲೆ ಹರಿಯಾಣ ಸೆಮಿಫೈನಲ್‌ಗೆ ಮುನ್ನಡೆಯಿತು. ಕೋಲ್ಟ್ಸ್ ಮೊದಲ ಇನಿಂಗ್ಸ್‌ನಲ್ಲಿ 363 ರನ್ ಗಳಿಸಿತ್ತು. ಹರಿಯಾಣ 120 ಓವರ್‌ಗಳಲ್ಲಿ ಎಂಟು ವಿಕೆಟ್ ನಷ್ಟಕ್ಕೆ 432 ರನ್ ಕಲೆ ಹಾಕಿತ್ತು.

ಇಲೆವೆನ್-ಕಾರ್ಯದರ್ಶಿ ಪೈಪೋಟಿ: ಸಿ.ಎಂ. ಗೌತಮ್ ಸಾರಥ್ಯದ ಕೆಎಸ್‌ಸಿಎ ಇಲೆವೆನ್ ತಂಡ ಸೆಮಿಫೈನಲ್ ಪಂದ್ಯದಲ್ಲಿ ಕಾರ್ಯದರ್ಶಿ ಇಲೆವೆನ್ ಎದುರು ಪೈಪೋಟಿ ನಡೆಸಲಿದೆ. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಕೆಎಸ್‌ಸಿಎ ಅಧ್ಯಕ್ಷರ ಇಲೆವೆನ್ ಹಾಗೂ ಹರಿಯಾಣ ಮುಖಾಮುಖಿಯಾಗಲಿವೆ. ಈ ಎರಡೂ ಪಂದ್ಯಗಳು ಆಲೂರು ಕ್ರೀಡಾಂಗಣದಲ್ಲಿ ನಡೆಯಲಿದೆ.

ಸಂಕ್ಷಿಪ್ತ ಸ್ಕೋರು:
ಎಸ್‌ಜೆಸಿ ಕಾಲೇಜು ಕ್ರೀಡಾಂಗಣ:
ಅಸ್ಸಾಂ ಕ್ರಿಕೆಟ್ ಸಂಸ್ಥೆ: 103.4 ಓವರ್‌ಗಳಲ್ಲಿ 314 ಹಾಗೂ ಎರಡನೇ ಇನಿಂಗ್ಸ್ 73.1 ಓವರ್‌ಗಳಲ್ಲಿ 299. ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್: 113 ಓವರ್‌ಗಳಲ್ಲಿ 366 ಹಾಗೂ ದ್ವಿತೀಯ ಇನಿಂಗ್ಸ್ 56.1 ಓವರ್‌ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 251. (ಕರುಣ್ ನಾಯರ್ 97, ಅರ್ಜುನ್ ಹೊಯ್ಸಳ 21, ಕೌನೇನ ಅಬ್ಬಾಸ್ 22, ಅನಿರುದ್ಧ್ ಜೋಶಿ 58; ಸುಜಯ್ ತೌಫಿಕ್‌ದಾರ್ 80ಕ್ಕೆ3, ಎಸ್. ಪ್ರಸನ್ನ 76ಕ್ಕೆ2. ಫಲಿತಾಂಶ: ಕೆಎಸ್‌ಸಿಎ ಕಾರ್ಯದರ್ಶಿ ಇಲೆವೆನ್‌ಗೆ ಐದು ವಿಕೆಟ್ ಜಯ ಹಾಗೂ ಐದು ಪಾಯಿಂಟ್.

ಗಂಗೋತ್ರಿ ಗ್ಲೇಡ್ಸ್: ಬರೋಡ ಕ್ರಿಕೆಟ್ ಸಂಸ್ಥೆ: 97.5 ಓವರ್‌ಗಳಲ್ಲಿ 257 ಎರಡನೇ ಇನಿಂಗ್ಸ್ 85 ಓವರ್‌ಗಳಲ್ಲಿ 5 ವಿಕೆಟ್‌ಗೆ 295. ಆಂಧ್ರಪ್ರದೇಶ ಕ್ರಿಕೆಟ್ ಸಂಸ್ಥೆ: 85 ಓವರ್‌ಗಳಲ್ಲಿ 211 ಹಾಗೂ ದ್ವಿತೀಯ ಇನಿಂಗ್ಸ್ 97.2 ಓವರ್‌ಗಳಲ್ಲಿ 7 ವಿಕೆಟ್‌ಗೆ 247. (ಶ್ರೀಕಾಂತ್ 43, ಡಿ.ಬಿ. ಪ್ರಶಾಂತ್ 59, ಶ್ರೀರಾಮ್ 61; ಸ್ವಪ್ನಿಲ್ ಸಿಂಗ್ 84ಕ್ಕೆ3, ಶೊಯೆಬ್ 75ಕ್ಕೆ2. ಫಲಿತಾಂಶ: ಡ್ರಾ.

ಆಲೂರು-2: ಕೆಎಸ್‌ಸಿಎ ಕೋಲ್ಟ್ಸ್ 99.1 ಓವರ್‌ಗಳಲ್ಲಿ 363 ಹಾಗೂ 79.2 ಓವರ್‌ಗಳಲ್ಲಿ 337. (ಅಭಿಷೇಕ್ ಸಂಜಯ್ ರಂಜನ್ ಕುಮಾರ್ 78, ಬಿ. ದಿನೇಶ್ 72, ಟಿ. ರಾಹುಲ್ 97ಕ್ಕೆ7, ಜಯಂತ್ ಯಾದವ್ 83ಕ್ಕೆ2). ಹರಿಯಾಣ ಕ್ರಿಕೆಟ್ ಸಂಸ್ಥೆ: 120 ಓವರ್‌ಗಳಲ್ಲಿ ಎಂಟು ವಿಕೆಟ್‌ಗೆ 462 ಮತ್ತು ಎರಡನೇ ಇನಿಂಗ್ಸ್ 60 ಓವರ್‌ಗಳಲ್ಲಿ 6 ವಿಕೆಟ್‌ಗೆ 146. (ಜಯಂತ್ ಯಾದವ್ 39, ಯತಾರ್ಥ್ ಥಾಮಸ್ ಔಟಾಗದೆ 34, ಸಂದೀಪ್ ಸಿಂಗ್ ಔಟಾಗದೆ 23; ಡೇವಿಡ್ 28ಕ್ಕೆ2, ಅಬ್ರಾರ್ ಖಾಜಿ 47ಕ್ಕೆ2) ಫಲಿತಾಂಶ: ಡ್ರಾ.

ಆಲೂರು-3: ಬಂಗಾಳ ಕ್ರಿಕೆಟ್ ಸಂಸ್ಥೆ 120 ಓವರ್‌ಗಳಲ್ಲಿ 8 ವಿಕೆಟ್‌ಗೆ 445 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 58.1 ಓವರ್‌ಗಳಲ್ಲಿ 277 (ಶ್ರೀವತ್ಸ ಗೋಸ್ವಾಮಿ 57, ಸಂದೀಪನ್ ದಾಸ್ 32; ಸಿ.ಪಿ. ಶಾಹಿದ್ 103ಕ್ಕೆ5, ಎಂ.ಇ. ಸನತ್ 46ಕ್ಕೆ2, ಸಂದೀಪ್ ವಾರಿಯರ್ 59ಕ್ಕೆ1). ಕೇರಳ ಕ್ರಿಕೆಟ್ ಸಂಸ್ಥೆ: 120 ಓವರ್‌ಗಳಲ್ಲಿ 4 ವಿಕೆಟ್‌ಗೆ 521 ಮತ್ತು ಎರಡನೇ ಇನಿಂಗ್ಸ್ 36.5 ಓವರ್‌ಗಳಲ್ಲಿ 2 ವಿಕೆಟ್‌ಗೆ 202. (ವಿ.ಎ. ಜಗದೀಶ್ ಅಜೇಯ 77, ಸಚಿನ್ ಬೇಬಿ ಅಜೇಯ 83; ವೀರ್ ಪ್ರತಾಪ್ ಸಿಂಗ್ 55ಕ್ಕೆ1. ಫಲಿತಾಂಶ: ಕೇರಳ ತಂಡಕ್ಕೆ 8 ವಿಕೆಟ್ ಗೆಲುವು ಹಾಗೂ ಐದು ಪಾಯಿಂಟ್.

ಬಿಜಿಎಸ್: ಗೋವಾ ಕ್ರಿಕೆಟ್ ಸಂಸ್ಥೆ 100 ಓವರ್‌ಗಳಲ್ಲಿ 289 ಹಾಗೂ ದ್ವಿತೀಯ ಇನಿಂಗ್ಸ್ 80 ಓವರ್‌ಗಳಲ್ಲಿ 9 ವಿಕೆಟ್‌ಗೆ 270. ಜಾರ್ಖಂಡ್ ಕ್ರಿಕೆಟ್ ಸಂಸ್ಥೆ: 89.3 ಓವರ್‌ಗಳಲ್ಲಿ 254 ಹಾಗೂ ಎರಡನೇ ಇನಿಂಗ್ಸ್ 72.1 ಓವರ್‌ಗಳಲ್ಲಿ 250. (ಭಾವಿನ್ ಠಾಕೂರ್ 38; ಅಮಿತ್ ಯಾದವ್ 53ಕ್ಕೆ6, ಜಿ. ಹರ್ಷಲ್ 28ಕ್ಕೆ1) ಫಲಿತಾಂಶ: ಗೋವಾ ತಂಡಕ್ಕೆ 55 ರನ್ ಗೆಲುವು ಮತ್ತು ಐದು ಪಾಯಿಂಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT