ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಲ್ ಪಕ್ಷೇತರ ಅಭ್ಯರ್ಥಿ

Last Updated 18 ಏಪ್ರಿಲ್ 2013, 12:51 IST
ಅಕ್ಷರ ಗಾತ್ರ

ಕಾರವಾರ: ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ನಿರೀಕ್ಷೆಯಲ್ಲಿದ್ದು ಕೊನೆಗಳಿಗೆಯಲ್ಲಿ ನಿರಾಶೆಗೊಂಡ ಕೆಪಿಸಿಸಿ ಸದಸ್ಯ ಸತೀಶ ಸೈಲ್ ಬುಧವಾರ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ನಗರದ ಕೋಡಿಬಾಗದ ಖಾಪ್ರಿ ದೇವಸ್ಥಾನದ ಎದುರು ಆಂದಾಜು 7-8 ಸಾವಿರ ಸಂಖ್ಯೆಯಲ್ಲಿ ಸೈಲ್ ಅವರ ಅಭಿಮಾನಿಗಳು, ಆಪ್ತರು, ಬೆಂಬಲಿಗರು ಜಮಾಯಿಸಿದ್ದರು. ಸುಮಾರು 11.30ಕ್ಕೆ ದೇವಸ್ಥಾನದ ಎದುರಿನಿಂದ ಪ್ರಾರಂಭವಾದ ಮೆರವಣಿಗೆ ಕೋಡಿಬಾಗದಿಂದ ಮುಖ್ಯರಸ್ತೆಯಲ್ಲಿ ಸಾಗಿ ಹೂವಿನ ಚೌಕ್, ಸವಿತಾ ವೃತ್ತ, ಸುಭಾಷ ಹಾಗೂ ಶಿವಾಜಿ ವೃತ್ತದ ಮೂಲಕ ಚುನಾವಣಾಧಿಕಾರಿಗಳ ಕಚೇರಿ ತಲುಪಿತು.

ಮಾರ್ಗದುದ್ದಕ್ಕೂ ಸೈಲ್ ಅವರು ಸಾಯಿಕಟ್ಟಾದಲ್ಲಿರುವ ವೀರಬಹದ್ದೂರ ಹೆಂಜಾ ನಾಯ್ಕ ಪುತ್ಥಳಿ, ನಗರಸಭೆ ಉದ್ಯಾನದಲ್ಲಿರುವ ಶಿವಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಸಂಚಾರ ಠಾಣೆಯ ಎದುರಿರುವ ಗಣಪತಿ ದೇವಸ್ಥಾನಕ್ಕೆ ಪೂಜೆ ಸಲ್ಲಿಸಿ ನಾಮಪತ್ರ ಸಲ್ಲಿಸಲು ತೆರಳಿದರು.

ಚುನಾವಣಾಧಿಕಾರಿಗಳ ಕಚೇರಿಗೆ ಹೋಗುವ ಮುನ್ನ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, `ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗಬಹುದು ಎಂದು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದೆ. ಆದರೆ ಕೊನೆಗಳಿಗೆಯಲ್ಲಿ ಟಿಕೆಟ್ ತಪ್ಪಿಸಿದರು. ಇದು ಬೇಸರ ಉಂಟು ಮಾಡಿದೆ' ಎಂದರು.

`ಜಿಲ್ಲೆಯ ಗಡಿಭಾಗದಲ್ಲಿ ಎಂಜಿನಿಯರಿಂಗ್ ಕಾಲೇಜು ಇರಲಿಲ್ಲ. ಇಲ್ಲಿ ಕಾಲೇಜು ಸ್ಥಾಪಿಸಿ ಎನ್ನುವ ಬೇಡಿಕೆ ಜನರು ಬೇಡಿಕೆ ಇಟ್ಟರು. ಬೇಡಿಕೆಗೆ ಮನ್ನಣೆ ನೀಡಿ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಿದ್ದೇನೆ. ಇದರ ಫಲವಾಗಿ ಗಡಿಭಾಗದ ಅನೇಕರು ಉನ್ನತ ಶಿಕ್ಷಣ ಪಡೆಯುವಂತಾಗಿದೆ ಎಂದು ಸೈಲ್ ನುಡಿದರು.

ಅಪಘಾತ ಅಥವಾ ಸಾರ್ವಜನಿಕರು ಗಂಭೀರ ಕಾಯಿಲೆಗೀಡಾದವರು ಮಣಿಪಾಲ, ಮಂಗಳೂರು ಅಥವಾ ಗೋವಾ ರಾಜ್ಯದಲ್ಲಿರುವ ಆಸ್ಪತ್ರೆಗಳಿಗೆ ಹೋಗಬೇಕಾಗಿದೆ. ಹಾಗಾಗಿ ಇಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು ಎನ್ನುವ ಕನಸು ಕಂಡಿದ್ದೇನೆ. ಅದಕ್ಕೆ ನಿಮ್ಮ ಸಹಕಾರ ಅಗತ್ಯ' ಎಂದು ಅವರು ಹೇಳಿದರು.

`ಕಳೆದ ಉಪಚುನಾವಣೆಯಲ್ಲಿ ಸ್ವಲ್ಪ ಕಡಿಮೆ ಅವಧಿಯಲ್ಲಿ ನನಗೆ 51ಸಾವಿರ ಮತಗಳನ್ನು ನೀಡಿ ಪ್ರೋತ್ಸಾಹ ನೀಡಿದ್ದೀರಿ. ಅದೇ ಪ್ರೋತ್ಸಾಹ ಈ ಬಾರಿಯೂ ನೀಡಿ ಹರಸಬೇಕು' ಎಂದರು.

ಸೈಲ್ ಪತ್ನಿ ಕಲ್ಪನಾ ಸೈಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಂಗಣಕರ್, ಜಿಲ್ಲಾ ಘಟಕದ ಕಾರ್ಯದರ್ಶಿ ಕೆ.ಶಂಭು ಶೆಟ್ಟಿ, ಪ್ರಭಾಕರ ಮಾಳ್ಸೇಕರ್, ವಕೀಲ ಜಿ.ಎನ್. ಜಾಂಬಾವಳಿಕರ್, ಸಂಜಯ ಸಾಳುಂಕೆ, ಎನ್.ದತ್ತಾ, ಛತ್ರಪತಿ ಮಾಳ್ಸೇಕರ್, ಚಂದ್ರಕಾಂತ ಖಾರ್ವಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT