ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಸ್ಗಳ ಸಮಸ್ಯೆ ಬಗೆಹರಿಸಲು ಹೊಸ ಸಂಘ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಸೈಸ್~ಗಳಿಗೆ ಸಂಬಂಧಿಸಿದಂತೆ ಎದ್ದಿರುವ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ) ಹೊಸ ಸಂಘವನ್ನು ಸ್ಥಾಪಿಸುವ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.

`ಸೈಸ್‌ಗಳ ವೇತನ ಹಾಗೂ ಇತರ ವಿಷಯಗಳ ಕುರಿತು ತಲೆದೋರಿರುವ ಸಮಸ್ಯೆ ಬಗೆಹರಿಸಲು ಬಿಟಿಸಿಯಲ್ಲಿರುವ ಕುದುರೆ ಮಾಲೀಕರು, ತರಬೇತುದಾರರು ಮತ್ತು ರೇಸ್‌ನ ಪೋಷಕರು ತೀರ್ಮಾನಿಸಿದ್ದಾರೆ.
ಇದಕ್ಕಾಗಿ ಕರ್ನಾಟಕ ಸಹಕಾರಿ ಸಂಘಗಳ ನೋಂದಣಿ ಕಾಯ್ದೆಯಡಿ ಹೊಸ ಸಂಘ ಸ್ಥಾಪಿಸಲು ಒಮ್ಮತದ ನಿರ್ಣಯ ಕೈಗೊಳ್ಳಲಾಗಿದೆ~ ಎಂದು ಬಿಟಿಸಿ ಚೇರ್‌ಮನ್ ಶ್ರೀನಿವಾಸ ಗೌಡ ನುಡಿದರು.

`ಹೊಸ ಸಂಘ ಅಸ್ತಿತ್ವಕ್ಕೆ ಬರಲು ಮೂರದಿಂದ ನಾಲ್ಕು ವಾರಗಳ ಅಗತ್ಯವಿದೆ. ಮಾರ್ಚ್ 4 ರಂದು ನಡೆಯುವ ಇಂಡಿಯನ್ ಟರ್ಫ್ ಇನ್ವಿಟೇಶನ್ ಕಪ್ ರೇಸ್ ಬಳಿಕ ಸಂಘದ ನೋಂದಾವಣೆಗೆ ಅಗತ್ಯದ ಪ್ರಕ್ರಿಯೆ ಆರಂಭಿಸುವೆವು~ ಎಂದು ತಿಳಿಸಿದರು.

ಈ ಸಂಘ `ಸೈಸ್~ಗಳ ಕ್ಷೇಮಾಭಿವೃದ್ಧಿಗೆ ತಕ್ಕ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಸೈಸ್‌ಗಳ ಅಸಹಕಾರದಿಂದಾಗಿ ಈ ಹಿಂದೆ ಬಿಟಿಸಿಯ ಹಲವು ರೇಸ್‌ಗಳು ರದ್ದುಗೊಂಡಿದ್ದವು. ಫೆ. 17 ಮತ್ತು 18 ರ ರೇಸ್‌ಗಳೂ ನಡೆದಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT