ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋರುತಿಹುದು ಕೊಟಗ್ಯಾಳ ಅಂಗನವಾಡಿ ಕಟ್ಟಡ..!

Last Updated 9 ಅಕ್ಟೋಬರ್ 2012, 9:10 IST
ಅಕ್ಷರ ಗಾತ್ರ

ಕಮಲನಗರ: ಸಮೀಪದ ಕೊಟಗ್ಯಾಳ ಗ್ರಾಮದಲ್ಲೊಂದು ಸೋರುವ ಅಂಗನವಾಡಿ ಕಟ್ಟಡವಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕಳೆದ 2009-10 ನೇ ಸಾಲಿನಲ್ಲಿ ರೂ 2.70 ಲಕ್ಷ ವೆಚ್ಚದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.ತರಗತಿ ಕೋಣೆ, ಅಡುಗೆ ಕೋಣೆ, ಸಾಮಗ್ರಿ ಸಂಗ್ರಹ ಕೋಣೆ ಹೀಗೆ ಈ ಕಟ್ಟಡದಲ್ಲಿ ಒಟ್ಟು ಮೂರು ಕೋಣೆಗಳಿವೆ.

ಈಗ ಹೇಳಿ ಕೇಳಿ ಮಳೆಗಾಲದ ಸಮಯ. ಹೀಗಾಗಿ ಎಲ್ಲ ಕೋಣೆಗಳ ಮೇಲ್ಛಾವಣಿ ಅಲ್ಲಲ್ಲಿ ಸೋರುತ್ತಿರು ವು ದರಿಂದ ತೀವ್ರ ಸಮಸ್ಯೆಯಾಗಿದೆ ಎಂದು ಗ್ರಾಮಸ್ಥ ಶಿವಾಜಿ ಪರಭಣೆ ತಿಳಿಸಿದ್ದಾರೆ.

ಡೋಣಗಾಂವ್ (ಎಂ) ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊಟಗ್ಯಾಳ  ಗ್ರಾಮದ ಈ ಅಂಗನವಾ ಡಿಯು ಚಳಿಗಾಲ ಮತ್ತು ಬೇಸಿಗೆಯಲ್ಲಿ ಸರಿಯಾಗಿಯೇ ಕಾರ್ಯನಿರ್ವಹಿಸು ತ್ತದೆ. ಆದರೆ ಸಮಸ್ಯೆ ಶುರುವಾಗುವುದೇ ಮಳೆಗಾಲದಲ್ಲಿ. ಕಳಪೆ ಕಾಮಗಾರಿಯಿಂದ ಕಟ್ಟಡದ ಮೇಲ್ಛಾವಣಿ ಸೋರುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇಲ್ಲಿ ದಾಖಲಾದ ಮಕ್ಕಳಿಗೆ ಭಾರೀ ಮಳೆ ಬಂದರೆ ಅಘೋಷಿತ ರಜೆ ಇದ್ದಂತಾಗಿದೆ.ಕಾರಣ ಜೋರು ಮಳೆ ಬಂದರೆ ನೀರೆಲ್ಲ ತರಗತಿಯೊಳಗೆ ಎಗ್ಗಿಲ್ಲದೇ ನುಗ್ಗುತ್ತಿವೆ ಎಂದು ಪರಮೇಶ್ವರ ಪಾಟೀಲ ತಿಳಿಸಿದ್ದಾರೆ.

ಈ ಅಂಗನವಾಡಿಯಲ್ಲಿ ಒಟ್ಟು 30 ಮಕ್ಕಳು ದಾಖಲಾಗಿದ್ದಾರೆ. ಮಳೆಗಾಲ ಬಂದರೆ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆ ಕೇವಲ 10 ಅಥವಾ ಅದಕ್ಕಿಂತ ಕಡಿಮೆಯಾಗಿರುತ್ತದೆ. ಕಟ್ಟಡದ ಮೇಲ್ಛಾವಣಿ ಈಗ ಬೀಳುವುದೋ, ಆಗ ಬೀಳುವುದೋ ಎಂಬ ಆತಂಕದಿಂದ ಪಾಲಕರು ತಮ್ಮ ಮಕ್ಕಳನ್ನು ಅಂಗನವಾಡಿಗೆ ಕಳುಹಿಸುವುದಿಲ್ಲ ಎಂದು ಅಂಗನವಾಡಿ ಸಹಾಯಕಿ ಅಂಬವ್ವ ಮೇತ್ರೆ ತಿಳಿಸಿದ್ದಾರೆ.

ಕಳಪೆ ಕಟ್ಟಡ ಕಾಮಗಾರಿಯಿಂದ ಅನೇಕ ಸಮಸ್ಯೆಗಳು ಉದ್ಭವಿಸಿದರೂ, ಕಟ್ಟಡ ದುರಸ್ತಿ ಕಂಡಿಲ್ಲ. ಸಂಬಂಧಪಟ್ಟವರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ. ಆದರೆ ಸಮಸ್ಯೆ ನಿವಾರಿಸದೇ ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಸಂಬಂಧಪಟ್ಟವರು ಶೀಘ್ರದಲ್ಲಿ ಕಳಪೆ ಅಂಗನವಾಡಿ ಕಟ್ಟಡ ಕಾಮಗಾರಿ ಕೈಗೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕಟ್ಟಡ ದುರಸ್ತಿಗೆ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಮಾಡಲಾಗುವುದು ಎಂದು ಗ್ರಾಮದ ಅಶೋಕ ಕುಲಕರ್ಣಿ, ಅಂಬಾದಾಸ ಧನಾಸಿರೆ, ಸುಖವಂತ ಪವಾರ್, ಮಶ್ಣಪ್ಪಾ ಮೇತ್ರೆ, ವೈಜಿನಾಥ ತೇಲಂಗ್ ಎಚ್ಚರಿಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT