ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾ ಕಣದಲ್ಲಿ ರಿಕ್ಷಾ ಚಾಲಕ...

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಅಮೃತಸರ (ಪಂಜಾಬ್) (ಪಿಟಿಐ): ರಿಕ್ಷಾ ತಳ್ಳುಗಾಡಿ ಎಳೆಯುವ 60 ವರ್ಷದ ಮಹೀಂದ್ರ ಸಿಂಗ್ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

ಪೂರ್ವ ಅಮೃತಸರ ಕ್ಷೇತ್ರದಿಂದ ಅವರು ಕಣಕ್ಕೆ ಇಳಿದಿದ್ದು, ಇಲ್ಲಿನ ಬಿಜೆಪಿ ಸಂಸದ, ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪತ್ನಿ ಡಾ. ನವಜೋತ್ ಕೌರ್ ಅವರ ವಿರುದ್ಧ ಅವರು ಸ್ಪರ್ಧಿಸುತ್ತಿರುವುದು ವಿಶೇಷ.

ರಿಕ್ಷಾವನ್ನು ವಿಶಿಷ್ಟ ರೀತಿಯಲ್ಲಿ ಅಲಂಕರಿಸಿ ಕ್ಷೇತ್ರದಾದ್ಯಂತ ಪ್ರಚಾರ ನಡೆಸುತ್ತಿರುವ ಸಿಂಗ್, ದಿನನಿತ್ಯದ ಕಾಯಕ ಮಾಡುವುದನ್ನೂ ಬಿಟ್ಟಿಲ್ಲ.

`ಸ್ವಾತಂತ್ರ್ಯ ದೊರೆತು ಬಹಳಷ್ಟು ವರ್ಷಗಳೇ ಕಳೆದರೂ ನಮ್ಮಂತಹ ಬಡವರ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ದಿನಾ ದುಡಿಯದೇ ಹೋದರೆ ಕುಟುಂಬದವರು ಉಪವಾಸ ಇರಬೇಕಾಗುತ್ತದೆ. ಆದ್ದರಿಂದ ಈ ವ್ಯವಸ್ಥೆ ಬದಲಾವಣೆ ಮಾಡುವ ಉದ್ದೇಶದಿಂದ ಚುನಾವಣೆಗೆ ನಿಂತಿದ್ದೇನೆ.  ಒಂದು ವೇಳೆ ಆಯ್ಕೆಯಾದರೆ ಸೈಕಲ್‌ನಲ್ಲಿ ಓಡಾಡಿ ಆದ್ಯತೆ ಮೇರೆಗೆ ಜನರ ಸಮಸ್ಯೆಯನ್ನು ಆಲಿಸುತ್ತೇನೆ~ ಎಂದು ನಾಲ್ಕು ಮಕ್ಕಳ ತಂದೆಯಾಗಿರುವ ಮಹೀಂದ್ರ ಸಿಂಗ್ ಅವರು  ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT