ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪೆಕ್ಟ್ರಂ: ಜೆಪಿಸಿ ತನಿಖೆಗೆ ಸರ್ಕಾರ ಒಲವು

Last Updated 18 ಫೆಬ್ರುವರಿ 2011, 17:20 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): 2ಜಿ ಸ್ಪೆಕ್ಟ್ರಂ ಹಗರಣದ ತನಿಖೆಗೆ ಜಂಟಿ ಸಂಸ ದೀಯ ಸಮಿತಿ (ಜೆಪಿಸಿ) ರಚಿಸುವ ಮುನ್ಸೂಚನೆಯನ್ನು ಶುಕ್ರವಾರ ಇಲ್ಲಿ ನೀಡಿದ ಸರ್ಕಾರ, ಆದರೆ ಇದರ ವ್ಯಾಪ್ತಿಯನ್ನು ಇತರ ಹಗರಣಗಳ ತನಿಖೆಗೂ ವಿಸ್ತರಿಸುವ ಸಾಧ್ಯತೆಯನ್ನು ತಳ್ಳಿಹಾಕಿದೆ.

ಸೋಮವಾರದಿಂದ ಆರಂಭವಾಗ ಲಿರುವ ಮೂರು ತಿಂಗಳ ದೀರ್ಘಾ ವಧಿಯ ಬಜೆಟ್ ಅಧಿವೇಶನಕ್ಕೂ ಪೂರ್ವಭಾವಿಯಾಗಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪಿ.ಕೆ. ಬನ್ಸಾಲ್ ಈ ಸುಳಿವು ನೀಡಿ ದರು. ಬುಧವಾರದೊಳಗಾಗಿ ಜೆಪಿಸಿ ರಚಿಸುವ ನಿರ್ಧಾರವನ್ನು ಕೈಗೊಳ್ಳ ಲಾಗುವುದು ಎಂದರು.

ಸಂಸತ್ತಿನ ಇಡೀ ಚಳಿಗಾಲ ಅಧಿ ವೇಶವನ್ನು ನುಂಗಿ ಹಾಕಿದ 2ಜಿ ಸ್ಪೆಕ್ಟ್ರಂ ಹಗರಣದ ಬಗ್ಗೆ ವಿರೋಧ ಪಕ್ಷಗಳ ಒತ್ತಾಯದಂತೆ ಜೆಪಿಸಿ ತನಿಖೆಗೆ ಯುಪಿಎ ಸರ್ಕಾರ ಒಪ್ಪ ಬಹುದೆಂಬ ಸುಳಿವು ಅರಿತ ಬಿಜೆಪಿ, ಈ ತನಿಖಾ ವ್ಯಾಪ್ತಿಗೆ ಕಾಮನ್‌ವೆಲ್ತ್ ಕ್ರೀಡಾ ಕೂಟಗಳ ಹಗರಣ ಮತ್ತು ಆದರ್ಶ ವಸತಿ ಹಗರಣವನ್ನು ಒಳಪಡಿಸ ಬೇಕೆಂದು ಆಗ್ರಹಪಡಿಸಿತ್ತು.

ಈಗ ಜೆಪಿಸಿ ತನಿಖೆಯ ವಿಷಯದ ಕುರಿತು ಪ್ರತಿಪಕ್ಷಗಳೊಡನೆ ಚರ್ಚಿಸಲು ಸರ್ಕಾರ ಸಿದ್ಧವಿದ್ದು, ಇದರಿಂದ ಬಜೆಟ್ ಅಧಿವೇಶನ ಸುಗಮವಾಗಿ ನಡೆಯುವುದೆಂಬ ವಿಶ್ವಾಸವನ್ನು ಸಚಿವರು ವ್ಯಕ್ತಪಡಿಸಿದರು.

‘ಒಂದೇ ನಿರ್ಣಯದಲ್ಲಿ ಹಲವು ವಿಷಯಗಳನ್ನು ಒಳಪಡಿಸುವ ನಿಯಮ ಸಂಸದೀಯ ವ್ಯವಸ್ಥೆಯಲ್ಲಿ ಇಲ್ಲದಿರುವುದರಿಂದ ಸ್ಪೆಕ್ಟ್ರಂ ಜೊತೆ ಇತರ ಹಗರಣಗಳ ತನಿಖೆ ಸೇರಿಸುವ ಸಾಧ್ಯತೆ ಇಲ್ಲ’ ಎಂದು ಅವರು ವಿರೋಧಪಕ್ಷಗಳ ಒತ್ತಾಯವನ್ನು ತಳ್ಳಿಹಾಕಿದರು. ‘ಜೆಪಿಸಿ ಆಹ್ವಾನಿಸಿ ದರೆ, ಅದರ ಮುಂದೆ ಪ್ರಧಾನಿಯ ವರು ಹಾಜ ರಾಗುತ್ತಾರೆಯೇ’ ಎಂಬ ಪ್ರಶ್ನೆಗೆ, ಇದನ್ನು ‘ಲೋಕಸಭಾಧ್ಯಕ್ಷರು ನಿರ್ಧರಿಸಲಿದ್ದು, ಅವರ ತೀರ್ಮಾನವೇ ಅಂತಿಮ ಆಗಿರುತ್ತದೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT