ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಜನಪಕ್ಷಪಾತ ಅಭಿವೃದ್ಧಿಗೆ ಮಾರಕ

Last Updated 8 ಅಕ್ಟೋಬರ್ 2012, 8:40 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಭ್ರಷ್ಟಾಚಾರ, ಹಗರಣ, ಸ್ವಜನಪಕ್ಷ ಪಾತ, ಅಸಮಾನತೆ, ಶೋಷಣೆ ಮತ್ತು ದೌರ್ಜನ್ಯ ಗಳಿಂದ ರಾಷ್ಟ್ರ ರಕ್ಷಿಸಲು ಸ್ವಾತಂತ್ರ್ಯ ಸಂಗ್ರಾಮಕ್ಕಿಂತಲೂ ದೊಡ್ಡಮಟ್ಟದ ಹೋರಾಟದ ಅಗತ್ಯವಿದೆ ಎಂದು ಧಾರವಾಡದ ಮನಗುಂಡಿಯ ಮಹಾಮನೆ ಮಠದ ಬಸವಾನಂದ ಸ್ವಾಮೀಜಿ ಪ್ರತಿಪಾದಿಸಿದರು.

ಅಂಧ ಸಮುದಾಯದ ಹಿತಾಸಕ್ತಿ ಕಾಪಾಡಲು ಅಸ್ತಿತ್ವಕ್ಕೆ ತಂದಿರುವ ರಾಜ್ಯಮಟ್ಟದ ಸಂವೇದನಾ ವೇದಿಕೆಯನ್ನು ನಗರದ ಆಶಾಕಿರಣ ಅಂಧಮಕ್ಕಳ ಪಾಠಶಾಲೆಯಲ್ಲಿ ಭಾನುವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಿತಿ ಮೀರಿದ ಭ್ರಷ್ಟಾಚಾರ, ಸ್ವಜನಪಕ್ಷಪಾತ, ಹಗರಣಗಳ ಸರಮಾಲೆ, ಅಸಮಾನತೆ, ದೌರ್ಜನ್ಯ ಮತ್ತು ಶೋಷಣೆ ದೇಶವನ್ನು ಕಾಡುತ್ತಿದ್ದು, ಅಭಿವೃದ್ಧಿಗೆ ಮಾರಕವಾಗಿದೆ. ರಾಷ್ಟ್ರವು ವಿಶ್ವಮಟ್ಟದಲ್ಲಿ ತಲೆತಗ್ಗಿಸುವ ಜತೆಗೆ ಜನಸಾಮಾನ್ಯರ ಬದುಕು ಅಸಹನೀಯವಾಗಿದೆ. ಭ್ರಷ್ಟಾಚಾರ ಮತ್ತು ಹಗರಣಗಳಿಗೆ ಕೇವಲ ರಾಜಕಾರಣಿಗಳಷ್ಟೇ ಕಾರಣರಲ್ಲ. ಅದಕ್ಕೆ ರಾಷ್ಟ್ರದ ಜನತೆಯೂ ಪಾಲುದಾರರಾಗಿದ್ದಾರೆ. ಅನ್ಯಾಯ, ಅಧರ್ಮ ನಡೆದಾಗ ಅದಕ್ಕೆ ಪ್ರೇರೇಪಿಸಿದವರು ಹಾಗೂ ಅದನ್ನು ತಡೆಯದೇ ಸುಮ್ಮನೆ ಇರುವವರಿಗೂ ಅದರ ಪಾಪ ತಟ್ಟುತ್ತದೆ. ಎಲ್ಲರನ್ನೂ ಸಹ ಪಾಪ ಕೃತ್ಯದ ಪಾಲುದಾರನ್ನಾಗಿಸುತ್ತದೆ ಎಂದು ಎಚ್ಚರಿಸಿದರು.

ಆಶಾಕಿರಣ ಅಂಧ ಮಕ್ಕಳ ಪಾಠಶಾಲೆ ಪ್ರಾಚಾರ್ಯ ಬಿ.ಜಿ.ಚಂದ್ರಶೇಖರ್, ನೂತನ ವೇದಿಕೆ ರಾಜ್ಯದ ಅಂಧ ಸಮುದಾಯದ ಸರ್ವಾಂಗೀಣ ಪ್ರಗತಿಗೆ ದುಡಿಯಲಿದೆ. ಅಗತ್ಯ ಮೂಲ ಸೌಲಭ್ಯ ದೊರಕಿಸಿಕೊಡಲು ಹೋರಾಟ ನಡೆಸಲಿದೆ. ಅಂಧ ಸಮುದಾಯದ ಮಾಸ ಪತ್ರಿಕೆ ಹೊರ ತರುವುದು, ಅಂಧಮಕ್ಕಳ ವಿದ್ಯಾಭ್ಯಾಸಕ್ಕೆ ಅಗತ್ಯ ಪುಸ್ತಕ ಪ್ರಕಟಿಸುವ ಕೆಲಸ ಮಾಡಲಿದೆ ಎಂದು ಆಶಯ ವ್ಯಕ್ತಪಡಿಸಿದರು.

ಶಾಲೆಯ ಆಡಳಿತ ಮಂಡಳಿ ನಿರ್ದೇಶಕಿ ವಾಣಿ ನಾಯ್ಡು, ಪೊಲೀಸ್ ಅಧಿಕಾರಿ ಸೋಮಶೇಖರ್, ಮೈಸೂರಿನ ಅಂಧರ ತರಬೇತಿ ಕೇಂದ್ರದ ಉಪನ್ಯಾಸಕ ಎ.ಸುರೇಶ್, ಅಂಧರ ಒಕ್ಕೂಟದ ಹಾಸನ ಜಿಲ್ಲಾ ಕಾರ್ಯದರ್ಶಿ ಎಂ.ಎಲ್.ಚಂದ್ರಕುಮಾರ್, ಶಿಕ್ಷಕರಾದ ಎಚ್.ಎಸ್.ಲಕ್ಷ್ಮೇಗೌಡ, ಕೆ.ಎಸ್.ಲೋಕೇಶ್, ಎಂ.ಸುರೇಶ್ ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT