ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವದೇಶಿ ಸಂಕ್ಷಿಪ್ತ ಸುದ್ದಿಗಳು

Last Updated 15 ಸೆಪ್ಟೆಂಬರ್ 2011, 19:05 IST
ಅಕ್ಷರ ಗಾತ್ರ

ಆತಂಕದಲ್ಲಿ ಹಾರಾಡಿದ ವಿಮಾನ
ಹೈದರಾಬಾದ್ (ಐಎಎನ್‌ಎಸ್):
ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಕಿರಣ ಕುಮಾರ್ ರೆಡ್ಡಿ ಅವರು ಪ್ರಯಾಣಿಸುತ್ತಿದ್ದ ವಿಮಾನವು ಪ್ರತಿಕೂಲ ಹವಾಮಾನದಿಂದಾಗಿ ಸುಮಾರು 30 ನಿಮಿಷಗಳ ಕಾಲ ಆಕಾಶದಲ್ಲಿಯೇ ಅತಂತ್ರ ಸ್ಥಿತಿಯಲ್ಲಿ ಹಾರಾಟ ನಡೆಸಿ ಆತಂಕ ಸೃಷ್ಟಿಸಿದ ಪ್ರಸಂಗ ಗುರುವಾರ ಇಲ್ಲಿ ನಡೆಯಿತು.

ತದನಂತರ ವಿಮಾನವನ್ನು ಸುರಕ್ಷಿತವಾಗಿ ರಾಜಮಂಡ್ರಿಯಲ್ಲಿ ಇಳಿಸಲಾಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಹೈದರಾಬಾದ್‌ನಿಂದ ಆಗಮಿಸುತ್ತಿದ್ದ ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ಸೇರಿದ ಈ ವಿಮಾನ ನಿಗದಿತ ಸಮಯನುಸಾರ ಬೆಳಿಗ್ಗೆ 10.30ಕ್ಕೆ ರಾಜಮಂಡ್ರಿ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಕೆಳಗಿಳಿಯಲು ಸಾಧ್ಯವಾಗಲೇ ಇಲ್ಲ. 

2ಜಿ ಸ್ಪೆಕ್ಟ್ರಂ-ಹೊಸ ಸಾಕ್ಷ್ಯದ ಪ್ರತಿಪಾದನೆ
ನವದೆಹಲಿ (ಪಿಟಿಐ):
2ಜಿ ಸ್ಪೆಕ್ಟ್ರಂ ಪರವಾನಗಿ ಹಂಚಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧನದಲ್ಲಿರುವ ಮಾಜಿ ದೂರಸಂಪರ್ಕ ಸಚಿವ ಎ.ರಾಜಾ ಹಾಗೂ ಕೇಂದ್ರ ಗೃಹ ಸಚಿವ ಪಿ.ಚಿದಂಬರ ಅವರ ಪಾತ್ರದ ಬಗ್ಗೆ ತಮ್ಮ ಬಳಿ ಮತ್ತಷ್ಟು ಹೊಸ ಸಾಕ್ಷ್ಯಗಳಿವೆ ಎಂದು ಜನತಾ ಪಕ್ಷದ ಅಧ್ಯಕ್ಷ ಡಾ.ಸುಬ್ರಮಣಿಯನ್ ಸ್ವಾಮಿ ಪ್ರತಿಪಾದಿಸಿದರು.

ಪ್ರಕರಣದ ವಿಚಾರಣೆ ನಡೆಸುತ್ತಿರುವ ದೆಹಲಿಯ ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ಹಾಜರಾದ ಅವರು, ಈ ಬಗ್ಗೆ ಸ್ವತಃ ವಾದ ಮಂಡಿಸಿದರು.

ನಿಮ್ಹಾನ್ಸ್ ಮಸೂದೆ: ಕೇಂದ್ರ ಅಸ್ತು
ನವದೆಹಲಿ (ಪಿಟಿಐ):
`ನಿಮ್ಹಾನ್ಸ್ ಬೆಂಗಳೂರು-2010~ ಮಸೂದೆಯ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದೆ.

ಬೆಂಗಳೂರಿನ ಪ್ರತಿಷ್ಠಿತ ಮಾನಸಿಕ ಮತ್ತು ನರರೋಗ ವಿಜ್ಞಾನಗಳ ಸಂಸ್ಥೆ `ನಿಮ್ಹಾನ್ಸ್~ ಅನ್ನು ಮುಂದೆ ರಾಷ್ಟ್ರೀಯ ಮಹತ್ವದ ಸಂಸ್ಥೆ ಎಂದು ಪರಿಗಣಿಸುವಲ್ಲಿ ಈ ತಿದ್ದುಪಡಿ ಮಸೂದೆಯು ಅನುವು ಮಾಡಿಕೊಡಲಿದೆ.

ಶೇ.9ರ ಆರ್ಥಿಕ ಅಭಿವೃದ್ಧಿಗೆ ಅಸ್ತು
ನವದೆಹಲಿ (ಪಿಟಿಐ):
ಸರ್ಕಾರವು 12ನೇ ಪಂಚವಾರ್ಷಿಕ ಯೋಜನೆಯಲ್ಲಿ (2012-17) ವಾರ್ಷಿಕ ಶೇ 9ರಷ್ಟು ಆರ್ಥಿಕ ಬೆಳವಣಿಗೆ ಸಾಧಿಸುವ ಮಹತ್ವಾಕಾಂಕ್ಷೆಯ ಪ್ರಸ್ತಾವನೆಗೆ (ಯೋಜನಾ ಪತ್ರ) ಒಪ್ಪಿಗೆ ನೀಡಿದೆ.

ಮುಂದಿನ ಐದು ವರ್ಷಗಳ ಅವಧಿಯಲ್ಲಿ ಪ್ರಸಕ್ತ ಪಂಚವಾರ್ಷಿಕ ಯೋಜನೆಯ ಅಂದಾಜು ಆರ್ಥಿಕ ಬೆಳವಣಿಗೆ ದರವನ್ನು ಶೇ 8.2ರಿಂದ 9ಕ್ಕೆ ಏರಿಸುವ ಪ್ರಸ್ತಾವನೆಗೆ ಗುರುವಾರ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಸಚಿವೆ ಅಂಬಿಕಾ ಸೋನಿ  ತಿಳಿಸಿದರು.

ಪರಾರಿಯಾಗಿದ್ದ ಚಾಲಕನ ಬಂಧನ
ಭುವನೇಶ್ವರ್ (ಪಿಟಿಐ):
ಛತ್ತಿಸ್‌ಗಡದ ಬಿಜೆಪಿ ಶಾಸಕನ ಕಾರು ಹಾಗೂ ಅಂಗರಕ್ಷಕರಿಗೆ ಸೇರಿದ್ದ ಎಕೆ-47 ರೈಫಲ್‌ನೊಂದಿಗೆ ಪರಾರಿಯಾಗಿದ್ದ ಕಾರು ಚಾಲಕನನ್ನು ಒಡಿಶಾದ ಜತಿನಿ ರೈಲು ನಿಲ್ದಾಣದ ಬಳಿ ಪೊಲೀಸರು ಬಂಧಿಸಿದ್ದಾರೆ. ದಾಂತೇವಾಡ ವಲಯದ ಬಿಜೆಪಿ ಶಾಸಕ ಭೀಮಾ ಮಾಂಡವಿ ಅವರ ಕಾರು ಚಾಲಕ ಅವಿನಾಶ್ ಭಾದುರಿಯಾ ಶಾಸಕರ ಕಾರು ಮತ್ತು ಅಂಗರಕ್ಷಕನಿಗೆ ಸೇರಿದ್ದ ಎಕೆ-47 ರೈಫಲ್‌ನೊಂದಿಗೆ ಭಾನುವಾರ ರಾತ್ರಿ ಪರಾರಿಯಾಗಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT