ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾತಂತ್ರ್ಯ ಯುವಜನತೆಗೆ ಪ್ರೇರಣಿಯಾಗಲಿ

Last Updated 16 ಆಗಸ್ಟ್ 2012, 7:10 IST
ಅಕ್ಷರ ಗಾತ್ರ

ಬಾಗಲಕೋಟೆ: ತ್ಯಾಗ, ಬಲಿದಾನದ ಪ್ರತೀಕವಾದ ಸ್ವಾತಂತ್ರ್ಯ ಹೋರಾಟ ಇಂದಿನ ಯುವ ಜನತೆಗೆ ಪ್ರೇರಣೆಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ.ಕಾರಜೋಳ ಹೇಳಿದರು.

ಜಿಲ್ಲಾಡಳಿತದ ವತಿಯಿಂದ ನವನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಸ್ವಾತಂತ್ರ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.ಸಮಾಜ ಸುಧಾರಣೆಯು ಸ್ವಾತಂತ್ರ್ಯ ಚಳವಳಿಯ ಭಾಗವಾಗಿಯೇ ಮೂಡಿಬಂದಿದೆ. ಪರಿಶಿಷ್ಟರ ಉದ್ಧಾರ, ಅಸ್ಪೃಶ್ಯತೆ ನಿವಾರಣೆ, ವಿಧುವಾ ವಿವಾಹ ಮುಂತಾದವುಗಳು ಸಮಾಜ ಸುಧಾರಣೆಯ ಭಾಗಗಳಾಗಿವೆ ಎಂದು ಹೇಳಿದರು.

ಸ್ವಾತಂತ್ರ ಚಳುವಳಿಯಲ್ಲಿ ಕರ್ನಾಟಕ ಮತ್ತು ಬಾಗಲಕೋಟೆ ಜಿಲ್ಲೆಯ ಪಾತ್ರವನ್ನು ಸ್ಮರಿಸಿದ ಸಚಿವರು, ಜಿಲ್ಲೆಯ ಹಲಗಲಿ ಬೇಡರು, ಬಾದಾಮಿಯ ನಿಂಬಾಜಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದವರಲ್ಲಿ ಪ್ರಮುಖರಾಗಿದ್ದಾರೆ. ಅವರೆಲ್ಲರ ಹೋರಾಟ ಫಲವಾಗಿ ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ ಎಂದರು.

ಸಮೂಹನೃತ್ಯ:
ಜಿಲ್ಲಾ ಕ್ರೀಡಾಂಗಣದಲ್ಲಿ ಧ್ವಜಾ ರೋಹಣದ ಬಳಿಕ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಪ್ರಸ್ತುತ ಪಡಿಸಿದ ಸಮೂಹ ನೃತ್ಯ ಮತ್ತು ಪಥಸಂಚಲನ ನೆರೆದವರ ಮನಸೂರೆಗೊಂಡಿತು.

ಬಸವೇಶ್ವರ ಶಿಶು ವಿಹಾರ, ಸೇಂಟ್ ಆ್ಯನಿಸ್ ಆಂಗ್ಲ ಮಾಧ್ಯಮ ಶಾಲೆ, ವಿವೇಕಾನಂದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆ ಹಾಗೂ ಪ್ರತಿಭಾನ್ವಿತ ಎಸ್‌ಸಿ, ಎಸ್‌ಟಿ ಬಾಲಕಿಯರ ವಸತಿ ಶಾಲೆಯ ವಿದ್ಯಾರ್ಥಿನಿಯರು ಸಮೂಹ ನೃತ್ಯದ ಮೂಲಕ ದೇಶಭಕ್ತಿಯ ರೋಮಾಂಚನ ಮೂಡಿಸಿದರು.ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿಯರು ಆರಂಭದಲ್ಲಿ ರೈತಗೀತೆಯನ್ನು ಸುಶ್ರಾವ್ಯವಾಗಿ ಹಾಡಿದರು.

ಸನ್ಮಾನ: ಸ್ವಾತಂತ್ರ ಯೋಧರಾದ ಟಿ.ಆರ್. ಆಚನೂರ ಮತ್ತು ಎಸ್.ಎಸ್. ಪಟ್ಟಣಶೆಟ್ಟಿ ಹಾಗೂ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಡಾ. ನಾರಾಯಣ ಮುನಿಸ್ವಾಮಿ (ವೈದ್ಯಕೀಯ), ರಾಚಪ್ಪ ಗೊಂಬಿ (ರಂಗಭೂಮಿ),  ಬಸಪ್ಪ ಯಾದವಾಡ (ಕ್ರೀಡೆ, ಈಜು ಸ್ಪರ್ಧೆ), ರಾಘವೇಂದ್ರ ಬಲ್ಲಾಳ ಮತ್ತು ವರ್ಷಾ ಪಾಟೀಲ (ಎನ್‌ಸಿಸಿ), ಮಲ್ಲಿಕಾರ್ಜುನ ಮುದಕವಿ (ಶ್ರೀಕೃಷ್ಣ ಪಾರಿಜಾತ) ಮತ್ತು ಸಿದ್ದನಾಥ ದಾದಾಸಾಬ ಮಾನೆ (ಕುಸ್ತಿಪಟು) ಅವರನ್ನು ಸಚಿವ ಗೋವಿಂದ ಕಾರಜೋಳ ಸನ್ಮಾನಿಸಿದರು.

ಆಕರ್ಷಣೆ: ಧ್ವಜಾರೋಹಣದ ಬಳಿಕ ಪೊಲೀಸ್, ಗೃಹ ರಕ್ಷಕದಳ, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್, ಭಾರತ ಸೇವಾದಳ ಹಾಗೂ ಶಾಲಾ ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.
ಕಾರ್ಯಕ್ರಮದಲ್ಲಿ ಗಾಂಧಿ ವೇಷಧಾರಿ ಬಾಗಲಕೋಟೆ ತೋಟಗಾರಿಕೆ ಕಾಲೇಜಿನ ವಿದ್ಯಾರ್ಥಿ ಮಧ್ವಾಚಾರ್ಯ ಕುಲಕರ್ಣಿ ಗಮನ ಸೆಳೆದರು.

ಮಧ್ಯರಾತ್ರಿ ಧ್ವಜಾರೋಹಣ: ಬ್ರಿಟಿಷರಿಂದ ಭಾರತಕ್ಕೆ ಮಧ್ಯಾರಾತ್ರಿ ಸ್ವಾತಂತ್ರ ಸಿಕ್ಕಿ ಸವಿನೆನಪಿಗಾಗಿ ನಗರದ ಶಬರೀಶ ವಿಕಲಚೇತನರ ಕ್ಷೇಮಾಭಿವೃದ್ಧಿ ಸಂಸ್ಥೆಯ ವತಿಯಿಂದ ಮಂಗಳವಾರ ಮಧ್ಯ ರಾತ್ರಿ 12 ಗಂಟೆಗೆ ಧ್ವಜಾರೋಹಣ ಮಾಡುವ ಮೂಲಕ ದೇಶಪ್ರೇಮ ಮೆರೆಯಲಾಯಿತು.

ನವನಗರದ ಎಲ್‌ಐಸಿ ಕಚೇರಿ ಹತ್ತಿರ ಇರುವ 34ನೇ ಸೆಕ್ಟರನಲ್ಲಿ ಜಗಮಗಿಸುವ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದ ಕಾರ್ಯಕ್ರಮದಲ್ಲಿ ರಾತ್ರಿಯನ್ನು ಲೆಕ್ಕಿಸದೇ ನೆರೆದಿದ್ದ ಸಾವಿರಾರು ಜನರ ಸಮ್ಮುಖದಲ್ಲಿ ಚಲನಚಿತ್ರ ನಿರ್ದೇಶಕ ವಿಶಾಲರಾಜ ಧ್ವಜಾರೋಹಣ ನೆರವೇರಿಸಿದರು.

ಸಂಸ್ಥೆಯ ಅಧ್ಯಕ್ಷ ಘನಾಶ್ಯಾಂ ಭಾಂಡಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಹುಚ್ಚೇಶ್ವರ ಮಠದ ಹುಚ್ಚೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಗುಳೇದಗುಡ್ಡ -ತಾಳಿಕೋಟಿ ಮುರುಘಾಮಠದ ಕಾಶಿನಾಥ ಸ್ವಾಮೀಜಿ ಮಾತನಾಡಿದರು.

ಯೋಗಿತಾ ಬೋಸ್ಲೆ ನೇತೃತ್ವದ `ಸ್ಟೈಲ್~ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ಗಾಯನ ಮಾಡಿದರು. ಅಶೋಕ ಲಿಂಬಾವಳಿ, ಆರ್‌ಟಿಒ ಗುರುಬಾಳಪ್ಪ ಪಾಟೀಲ, ಸುಭಾಷ ಕೊಠಾರಿ, ಬಸವರಾಜ ಸಿದ್ದಲಿಂಗಪ್ಪನವರ, ಸಂಜೀವ ವಾಡಕರ್, ಮೋಹನ ದೇಶಪಾಂಡೆ, ಈಶ್ವರಿ ವಿಶ್ವವಿದ್ಯಾಲಯದ ಉಮೇಶ, ಶಿವಪ್ರಸಾದ ಗದ್ದಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT