ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೆ ಎದೆಯಲ್ಲಿ ಸೊಂಕು: ಆರೋಗ್ಯ ಸ್ಥಿರ

Last Updated 1 ಜನವರಿ 2012, 8:15 IST
ಅಕ್ಷರ ಗಾತ್ರ

ಪುಣೆ (ಐಎಎನ್ಎಸ್): ಎದೆಯಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಭಷ್ಟಾಚಾರ ವಿರುದ್ಧದ ಪ್ರಬಲ ಲೋಕಪಾಲ್ ಜಾರಿ ಕುರಿತು ಜನಾಂದೋಲನ ಹುಟ್ಟುಹಾಕಿರುವ  ಅಣ್ಣಾ ಹಜಾರೆ ಅವರು ಭಾನುವಾರ ಬೆಳಿಗ್ಗೆ ಇಲ್ಲಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಚಿಕಿತ್ಸೆಯ ನಂತರ ಆರೋಗ್ಯದಲ್ಲಿ ಸ್ಥಿರತೆ ಮೂಡಿದೆ. ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ ಎಂದು ಅವರ ಸಮೀಪವರ್ತಿಗಳು ತಿಳಿಸಿದ್ದಾರೆ.

ಕಳೆದ ಒಂದೆರೆಡು ವಾರಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ  74ರ ಹರೆಯದ ಅಣ್ಣಾ ಹಜಾರೆ ಅವರನ್ನು ನೋಡಿಕೊಳ್ಲುತ್ತಿದ್ದ ಅವರ ವೈದ್ಯ ಕೆ.ಎಚ್.ಸಂಕೇತಿ ಅವರ ಸಲಹೆಯ ಮೇರೆಗೆ ಭಾನುವಾರ ಅವರನ್ನು ತಕ್ಷಣ ಸಂಕೇತಿ ಆಸ್ಪತ್ರಗೆ ದಾಖಲಿಸಲಾಯಿತು.

~ಭಾನುವಾರ ಬೆಳಿಗ್ಗೆ ಅಣ್ಣಾ ಹಜಾರೆ ಅವರ ಆರೋಗ್ಯ ತಪಾಸಣೆ ನಡೆಸಿದ ವೈದ್ಯ ಸಂಕೇತಿ ಅವರು, ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕೆಂದು ಸೂಚಿಸಿದ್ದಾರೆ. ಇಷ್ಟಲ್ಲದೇ, ಯಾವುದೇ ಬಗೆಯ ಉದ್ವಿಗ್ನನಕ್ಕೊಳಗಾದೇ ಹತ್ತು ದಿನಗಳವರೆಗೆ ವಿಶ್ರಾಂತಿ ಪಡೆಯಬೇಕೆಂದು ತಿಳಿಸಿದ್ದಾರೆ ~ ಎಂದು ಅಣ್ಣಾ ಅವರ ಸಮೀಪವರ್ತಿಗಳು ಮಾಹಿತಿ ನೀಡಿದ್ದಾರೆ.

~ಅಣ್ಣಾ ಹಜಾರೆ ಅವರು ಗಂಟಲೂತದಿಂದ ಬಳಲುತ್ತಿದ್ದಾರೆ . ಕೆಲವು ಮಾಧ್ಯಮಗಳಲ್ಲಿ ವರದಿಯಾದಂತೆ ಅವರು ನ್ಯುಮೋನಿಯಾ ರೋಗದಿಂದ ಬಳಲುತ್ತಿಲ್ಲ~ ಎಂದು ಅಣ್ಣಾ ಅವರ ಆರೊಗ್ಯವನ್ನು ನೋಡಿಕೊಳ್ಳುತ್ತಿರುವ ವೈದ್ಯ ಸಂಕೇತಿ ಅವರು ಸ್ಪಷ್ಟಪಡಿಸಿದ್ದಾರೆ. ~ಹಲವಾರು ವೈದ್ಯಕೀಯ ತಪಾಸಣೆಗಳನ್ನು ಕೈಗೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಅವರ ಸ್ಥಿತಿ ಸುಧಾರಿಸುತ್ತಿದೆ~ ಎಂದೂ ಅವರು ತಿಳಿಸಿದ್ದಾರೆ.

ಕೆಲವು ದಿನಗಳಿಂದ ಕೆಮ್ಮ ಮತ್ತು ಗಂಟಲು ಕಟ್ಟಿಕೊಂಡು ಬಳಲುತ್ತಿದ್ದ ಅಣ್ಣಾ ಅವರ ಎದೆಯಲ್ಲಿ ಚಿಕ್ಕ ಪ್ರಮಾಣದಲ್ಲಿ ಊತ ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಣ್ಣಾ ಅವರು ಬಲವಾದ ಲೋಕಪಾಲಗೆ ಆಗ್ರಹಿಸಿ ಮುಂಬೈಯಲ್ಲಿ ಆರಂಭಿಸಿದ್ದ ಮೂರು ದಿನಗಳ ತಮ್ಮ ಉಪವಾಸವನ್ನು ಮಂಗಳವಾರವೇ ನಿಲ್ಲಿಸಿ ಮನೆಗೆ ಹಿಂದಿರುಗಿದ್ದರು. 

ಅಣ್ಣಾ ಅವರ ಅನಾರೋಗ್ಯದ ಕಾರಣ ಸೋಮವಾರ ಮತ್ತು ಮಂಗಳವಾರ ಮಹಾರಾಷ್ಟ್ರದ ರಾಳೇಗಣ ಸಿದ್ಧಿ ಗ್ರಾಮದಲ್ಲಿ ಆಯೋಜಿಸಿದ್ದ ಅಣ್ಣಾ ತಂಡದ ಕೇಂದ್ರ ಸಮಿತಿಯ  ಸಭೆಯನ್ನು ಮುಂದೂಡಲಾಗಿದೆ. ಭ್ರಷ್ಟಾಚಾರ ವಿರೋಧಿ ಚಳವಳಿಯ ಮುಂದಿನ ಕಾರ್ಯವಿಧಾನ ರೂಪಿಸಲುದ್ದೇಶಿಸಿರುವ ಅಣ್ಣಾ ತಂಡದ ಕೇಂದ್ರ ಸಮಿತಿಯ ಸಭೆಯನ್ನು ಇಷ್ಟರಲ್ಲೇ ಇನ್ನೊಂದು ದಿನಕ್ಕೆ ನಿಗದಿಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT