ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ಒತ್ತಡ ನಿರೀಕ್ಷೆ

Last Updated 13 ಮೇ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಏಪ್ರಿಲ್‌ನಲ್ಲಿನ ಹಣದುಬ್ಬರ ಅಂಕಿ ಅಂಶಗಳನ್ನು ಸರ್ಕಾರ ಸೋಮವಾರ ಪ್ರಕಟಿಸಲಿದೆ. ಮುಖ್ಯವಾಗಿ ಈ ಸಂಗತಿ ಆಧರಿಸಿ ಈ ವಾರದ ವಹಿವಾಟು ನಡೆಯಲಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ. 

ಕಳೆದ ವಾರ ಸೂಚ್ಯಂಕ ತೀವ್ರ ಕುಸಿತ ಕಂಡಿದೆ. ದೇಶದ ಕೈಗಾರಿಕೆ ಉತ್ಪಾದನೆ ಸೂಚ್ಯಂಕವೂ (ಐಐಪಿ) ಐದು ತಿಂಗಳ ಹಿಂದಿನ ಮಟ್ಟಕ್ಕೆ ಕುಸಿದಿರುವುದು ಕೂಡ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದೆ. ಈ ನಡುವೆ ಸೋಮವಾರ ಪ್ರಕಟಗೊಳ್ಳಲಿರುವ `ಹಣದುಬ್ಬರ~ ಅಂಕಿ ಅಂಶಗಳು ಪೇಟೆಯಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ಬೊನಂಜಾ ಪೋರ್ಟ್‌ಪೊಲಿಯೊ ಸಂಸ್ಥೆ ಉಪಾಧ್ಯಕ್ಷ ಪ್ರಕಾಶ್ ಗೋಯಲ್ ಅಭಿಪ್ರಾಯಪಟ್ಟಿದ್ದಾರೆ.

`ಸಗಟು ಸೂಚ್ಯಂಕ ಆಧರಿಸಿದ ಆಹಾರ ಹಣದುಬ್ಬರ ದರ (ಡಬ್ಲ್ಯುಪಿಐ) ಏಪ್ರಿಲ್‌ನಲ್ಲಿ ಶೇ 5ಕ್ಕೆ ಏರಿಕೆ ಕಾಣುವ ಸಾಧ್ಯತೆ ಇದೆ ಎನ್ನುವುದು ನಮ್ಮ ಅಂದಾಜು. ಇದು ನಿಜವಾದಲ್ಲಿ ಷೇರುಪೇಟೆ ಇನ್ನಷ್ಟು ಕುಸಿಯಲಿದೆ~ ಎಂದು ಹಣಕಾಸು ಪೇಟೆ ತಜ್ಞ ಸೋನಲ್ ವರ್ಮಾ ವಿಶ್ಲೇಷಿಸಿದ್ದಾರೆ.

ಕಳೆದ ವಾರ ಮುಂಬೈ ಷೇರುಪೇಟೆ (ಬಿಎಸ್‌ಇ) 538 ಅಂಶಗಳಷ್ಟು ಮತ್ತು ರಾಷ್ಟ್ರೀಯ ಷೇರು ಸೂಚ್ಯಂಕ `ನಿಫ್ಟಿ~ ಶೇ 3ರಷ್ಟು ಕುಸಿತ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT