ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಸಿನ ಸೋಳೆ, ಕೆಸುವಿನ ಎಲೆ ತಿಂಡಿ

Last Updated 9 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ
ADVERTISEMENT

ಉಂಡಳಕಾಳು
ಬೇಕಾಗುವ ಪದಾರ್ಥಗಳು:
ಉಪ್ಪಿನ ಹಲಸಿನ ಸೋಳೆ 15 ರಿಂದ 20, ಅಕ್ಕಿ ಹಿಟ್ಟು 2 ಕಪ್, ಕೆಂಪು ಮೆಣಸು 8, ಉಪ್ಪು ರುಚಿಕೆ ತಕ್ಕಷ್ಟು, ಜೀರಿಗೆ 2 ಚಮಚ, ಕೊತ್ತಂಬರಿ 2 ಚಮಚ, ನೆನೆಹಾಕಿದ ಅಕ್ಕಿ 2 ಕಪ್, ತೆಂಗಿನ ತುರಿ 1 ಕಪ್.

ಮಾಡುವ ವಿಧಾನ: ಮೊದಲು ಅಕ್ಕಿಯನ್ನು ನೀರಿನಲ್ಲಿ 4 ಗಂಟೆಗಳ ಕಾಲ ನೆನೆಸಿಕೊಳ್ಳಬೇಕು. ನೆನೆಹಾಕಿದ ಅಕ್ಕಿಯನ್ನು ಉಪ್ಪು, ಉಪ್ಪಿನ ಹಲಸಿನ ಸೋಳೆ, ಕೆಂಪು ಮೆಣಸು, ಜೀರಿಗೆ, ಕೊತ್ತಂಬರಿ ಮತ್ತು ತುರಿಯೊಂದಿಗೆ ಸಣ್ಣಗೆ ರುಬ್ಬಿಕೊಳ್ಳಬೇಕು. ನಂತರ ಇದಕ್ಕೆ ಅಕ್ಕಿಹಿಟ್ಟು ಮತ್ತು ಸ್ವಲ್ಪ ಬಿಸಿ ಮಾಡಿದ ಎಣ್ಣೆ ಹಾಕಿ ಚಕ್ಕುಲಿ ಹಿಟ್ಟಿನ ಹದಕ್ಕೆ ಚೆನ್ನಾಗಿ ನಾದಿಕೊಳ್ಳಬೇಕು. ನಂತರ ಒಲೆಯ ಮೇಲೆ ಬಾಣಲೆಯಲ್ಲಿ ಎಣ್ಣೆಯಿಟ್ಟು ನಾದಿದ ಹಿಟ್ಟನ್ನು ಸಣ್ಣ ಸಣ್ಣ ಉಂಡೆಗಳನ್ನು ಮಾಡಿ ಎಣ್ಣೆಯಲ್ಲಿ ಕೆಂಪಗೆ ಕರಿಯಬೇಕು.

ಕೆಸುವಿನ ಎಲೆ ಮತ್ತು ಉಪ್ಪಿನ ಸೋಳೆ ಪಲ್ಯ
ಬೇಕಾಗುವ ಪದಾರ್ಥಗಳು:
ಕೆಸುವಿನ ಎಲೆ 10, ಹಲಸಿನ ಸೋಳೆ 10, ಹಸಿ ಮೆಣಸು 3 ರಿಂದ 4, ಅರಿಷಣ ಸ್ವಲ್ಪ, ಸಾಸಿವೆ ಸ್ವಲ್ಪ, ಉದ್ದಿನ ಬೇಳೆ 1 ಚಮಚ, ಕರಿಬೇವು ಸ್ವಲ್ಪ ಇಂಗು 1 ಚಿಟಿಕೆ.

ಮಾಡುವ ವಿಧಾನ: ಮೊದಲು ಉಪ್ಪಿನ ಸೋಳೆಯನ್ನು 2 ಗಂಟೆ ನೀರಿನಲ್ಲಿ ನೆನಸಿ. ನಂತರ ಕೆಸುವಿನ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ ಹಾಕಿ ಉದ್ದಿನ ಬೇಳೆ, ಸಾಸಿವೆ, ಅರಿಶಿವ, ಇಂಗು, ಹಸಿಮೆಣಸು ಮತ್ತು ಕರಿಬೇವು ಹಾಕಿ.

ಇವೆಲ್ಲ ಕಾದ ಬಳಿಕ ಹೆಚ್ಚಿದ ಕೆಸುವಿನ ಎಲೆ ಮತ್ತು ಹಲಸಿನ ಸೋಳೆ ಸೇರಿಸಿ 15 ನಿಮಿಷ ತಾಳಿಸಿ. ನಂತರ ಹಲಸಿನ ಸೋಳೆಯ ಉಪ್ಪಿನ ಪ್ರಮಾಣ ನೋಡಿ ಬೇಕಾದರೆ ಸ್ವಲ್ಪ ಉಪ್ಪು ಸೇರಿಸಿ. ಈಗ ಅನ್ನದೊಂದಿಗೆ ಪಲ್ಯ ಕಲಸಿ ತಿನ್ನಲು ರೆಡಿ.

ಕೆಸುವಿನ ಎಲೆ ಕರಕಲಿ
ಬೇಕಾಗುವ ಪದಾರ್ಥಗಳು:
ಕೆಸುವಿನ ಎಲೆ 10, ಹಸಿಮೆಣಸು 5 ರಿಂದ 6, ಉಪ್ಪು ರುಚಿಗೆ, ಸಾಸಿವೆ 1 ಚಮಚ, ಉದ್ದಿನಬೇಳೆ 1 ಚಮಚ, ಕರಿಬೇವು, ಬೆಳ್ಳುಳ್ಳಿ 5 ರಿಂದ 6 ಎಸಳು, ಹುಳಿ ಪುಡಿ/ಲಿಂಬೆ ಹಣ್ಣು ಸ್ವಲ್ಪ.

ಮಾಡುವ ವಿಧಾನ: ಮೊದಲಿಗೆ ಕೆಸುವಿನ ಎಲೆಯನ್ನು ಸಣ್ಣಗೆ ಹೆಚ್ಚಿಕೊಳ್ಳಬೇಕು, ನಂತರ ಒಲೆಯ ಮೇಲೆ ಬಾಣಲೆ ಇಟ್ಟು ಎಣ್ಣೆ, ಉದ್ದಿನಬೇಳೆ, ಸಾಸಿವೆ ಮತ್ತು ಹಸಿಮೆಣಸು ಹಾಕಿ ಕಾದ ಬಳಿಕ ಕೆಸುವಿನ ಎಲೆಯನ್ನು ಸೇರಿಸಬೇಕು. ನಂತರ ಉಪ್ಪು ಮತ್ತು ಹುಳಿ ಪುಡಿ/ಲಿಂಬೆ ಹಣ್ಣು ಸೇರಿಸಿ ಸಣ್ಣ ಉರಿ ಇಟ್ಟು ಮುಚ್ಚಬೇಕು. ಎಲೆ ಮೆತ್ತಗಾದ ಬಳಿಕ ಬೆಳ್ಳುಳ್ಳಿ, ಸಾಸಿವೆ, ಕರಿಬೇವು ಸೇರಿಸಿ ಒಗ್ಗರಣೆ ಹಾಕಬೇಕು. ಹೊರಗೆ ಮಳೆ ಬರುತ್ತಾ ಇದ್ದರೆ ಬಿಸಿ ಬಿಸಿ ಅನ್ನದೊಂದಿಗೆ ಊಟ ಮಾಡಲು ತುಂಬಾ ಚೆನ್ನಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT