ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಅಸುಂತಾ ಲಾಕ್ರಾ ಸಾರಥ್ಯ

Last Updated 31 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಫೆಬ್ರವರಿ 18ರಿಂದ ನಡೆಯಲಿರುವ ಅರ್ಹತಾ ಸುತ್ತಿನ ಹಾಕಿ ಟೂರ್ನಿಗೆ ಭಾರತ ಮಹಿಳಾ ತಂಡವನ್ನು ಪ್ರಕಟಿಸಲಾಗಿದ್ದು, ಅಸುಂತಾ ಲಾಕ್ರಾ ಸಾರಥ್ಯ ವಹಿಸಲಿದ್ದಾರೆ.

ಇಲ್ಲಿನ ಮೇಜರ್ ಧ್ಯಾನಚಂದ್ ರಾಷ್ಟ್ರೀಯ ಹಾಕಿ ಕ್ರೀಡಾಂಗಣದಲ್ಲಿ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಮಿಡ್‌ಫೀಲ್ಡರ್ ಕರ್ನಾಟಕದ ಎಂ.ಎನ್. ಪೊನ್ನಮ್ಮ ಹೆಚ್ಚುವರಿ ಆಟಗಾರ್ತಿಯಾಗಿದ್ದಾರೆ.

ಟೂರ್ನಿಯ ಆರಂಭದ ದಿನವೇ ಆತಿಥೇಯ ಭಾರತ ತಂಡ ಉಕ್ರೇನ್‌ನ ಸವಾಲನ್ನು ಎದುರಿಸಲಿದೆ. ಇದರಲ್ಲಿ ಕೆನಡಾ, ಪೊಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಇಟಲಿ ತಂಡಗಳು ಪಾಲ್ಗೊಳ್ಳಲಿವೆ.

ಇತ್ತೀಚಿಗೆ ನಡೆದ ಅಜರ್ ಬೈಜಾನ್ ವಿರುದ್ಧದ ಹಾಕಿ ಟೆಸ್ಟ್ ಸರಣಿಯಲ್ಲಿ ಆಟಗಾರ್ತಿಯರು ನೀಡಿದ ಪ್ರದರ್ಶನದ ಆಧಾರದ ಮೇಲೆ ಈ ಆಯ್ಕೆ ಮಾಡಲಾಗಿದೆ ಎಂದು ಹಾಕಿ ಇಂಡಿಯಾ ಆಯ್ಕೆ ಸಮಿತಿ ತಿಳಿಸಿದೆ. ಈ ಸರಣಿಯಲ್ಲಿ ಭಾರತ ಗೆಲುವು ಸಾಧಿಸಿತ್ತು.

ಕಳೆದ ವರ್ಷ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡ ವೇಳೆ ಗಾಯಗೊಂಡಿದ್ದ ಡಿಫೆಂಡರ್ ಜಯದೀಪ್ ಕೌರ್ ತಂಡಕ್ಕೆ ಮರಳಿದ್ದಾರೆ. ಆಯ್ಕೆ ಸಮಿತಿಯಲ್ಲಿ ಬಲ್ಬೀರ್ ಸಿಂಗ್, ಬಿ.ಪಿ. ಗೋವಿಂದ್, ಸೈಯದ್ ಅಲಿ, ಬಿ. ರೇಖಾ ಹಾಗೂ ಸರ್ಕಾರದ ವೀಕ್ಷಕರು ಇದ್ದರು.

ತಂಡ ಇಂತಿದೆ: ಗೋಲ್ ಕೀಪರ್ಸ್‌: ಯೋಗಿತಾ ಬಾಲಿ, ಸವಿತಾ.
ಡಿಫೆಂಡರ್ಸ್‌: ಜಸ್ಪ್ರೀತ್ ಕೌರ್, ಜಯದೀಪ್ ಕೌರ್, ಸುಭದ್ರ ಪ್ರಧಾನ್.
ಮಿಡ್ ಫೀಲ್ಡರ್ಸ್‌: ಪಿ. ಸುಶೀಲಾ ಚಾನು, ಅಸುಂತಾ ಲಾಕ್ರಾ (ನಾಯಕಿ), ಕಿರಣದೀಪ್ ಕೌರ್, ದೀಪಿಕಾ, ರಿತು ರಾಣಿ, ಮುಕ್ತಾ ಪಿ. ಬಾರ್ಲಾ.

ಫಾರ್ವಡ್ಸ್: ಪೂನಮ್ ರಾಣಿ, ವಂದನಾ ಕತೇರಿಯಾ, ರಾಣಿ ರಾಂಪಾಲ್, ಸೌಂದರ್ಯ ಯೆಂದೆಲಾ, ಅನುರಾಧ ದೇವಿ, ರೋಸಲಿನ್ ಡಂಗ್ ಡಂಗ್, ಜಸ್ಜೀತ್ ಕೌರ್ ಹಂದಾ.

ಕಾಯ್ದಿರಿಸಿದ ಆಟಗಾರ್ತಿಯರು: ರಜಿನಿ ಇತಿಮರ್ಪು (ಗೋಲ್ ಕೀಪರ್), ಪಿಂಕಿ ದೇವಿ (ಡಿಫೆಂಡರ್), ಎಂ.ಎನ್. ಪೊನ್ನಮ್ಮ (ಮಿಡ್ ಫೀಲ್ಡರ್), ದೀಪ್ ಗ್ರೇಸ್ ಇಕ್ಕಾ (ಮಿಡ್ ಫೀಲ್ಡರ್), ಅನೂಪ್ ಬಾರ್ಲಾ (ಫಾರ್ವರ್ಡ್). ಲಿಲಿ ಚಾನು (ಫಾರ್ವರ್ಡ್).

ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ: ಉಕ್ರೇನ್ (ಫೆ. 18), ಕೆನಡಾ (ಫೆ. 19), ಪೊಲೆಂಡ್ (ಫೆ. 21), ದಕ್ಷಿಣ ಆಫ್ರಿಕಾ (ಫೆ. 22) ಮತ್ತು ಇಟಲಿ (ಫೆ. 24).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT