ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಪ್ರೀಮಿಯರ್ ಲೀಗ್‌ಗೆ ಚಾಲನೆ

Last Updated 29 ಡಿಸೆಂಬರ್ 2010, 10:20 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ನಿಂಬಸ್ ಸ್ಪೋರ್ಟ್ಸ್ ಮತ್ತು ಭಾರತ ಹಾಕಿ ಫೆಡರೇಷನ್ (ಐಎಚ್‌ಎಫ್) ಜಂಟಿಯಾಗಿ ವರ್ಲ್ಡ್ ಸೀರಿಸ್ ಹಾಕಿ ಲೀಗ್‌ಗೆ ಬುಧವಾರ ಚಾಲನೆ ನೀಡಿತು.
‘ಹಾಕಿ ಇಂಡಿಯಾ’ಕ್ಕೆ ದೊಡ್ಡ ಹೊಡೆತವಾಗಿ ಪರಿಣಮಿಸಿರುವ ಈ ಲೀಗ್ ಜೊತೆಗಿನ ಒಪ್ಪಂದಕ್ಕೆ ಭಾರತದ ಎಲ್ಲ ಪ್ರಮುಖ ಆಟಗಾರರು ಸಹಿ ಹಾಕಿದ್ದಾರೆ. ನಿಂಬಸ್ ಸ್ಪೋರ್ಟ್ಸ್ ಮುಖ್ಯಸ್ಥ ಹರೀಶ್ ತವಾನಿ ಮತ್ತು ಐಎಚ್‌ಎಫ್ ಅಧ್ಯಕ್ಷ ಆರ್.ಕೆ. ಶೆಟ್ಟಿ ಅವರು ಮಂಗಳವಾರ ಈ ವಿಷಯವನ್ನು ಖಚಿತಪಡಿಸಿದರು. ಲೀಗ್‌ನ ಬಗ್ಗೆ ವಿವರ ನೀಡಿದ ಹರೀಶ್, ‘ಚೊಚ್ಚಲ ಟೂರ್ನಿಯನ್ನು 2011ರ ನವೆಂಬರ್ ಮತ್ತು 2012ರ ಫೆಬ್ರುವರಿ ತಿಂಗಳ ಒಳಗಿನ ಅವಧಿಯಲ್ಲಿ ನಡೆಸಲಾಗುವುದು’ ಎಂದರು.

ಭಾರತ ತಂಡದ ನಾಯಕ ರಾಜ್ಪಾಲ್ ಸಿಂಗ್, ಪೆನಾಲ್ಟಿ ಕಾರ್ನರ್ ಸ್ಪೆಶಲಿಸ್ಟ್ ಸಂದೀಪ್ ಸಿಂಗ್ ಮತ್ತು ಸರ್ದಾರ ಸಿಂಗ್ ಅಲ್ಲದೆ ಶಿವೇಂದ್ರ ಸಿಂಗ್, ಅರ್ಜುನ್ ಹಾಲಪ್ಪ, ಗುರ್ಬಾಜ್ ಸಿಂಗ್, ಅಡ್ರಿಯಾನ್ ಡಿಸೋಜಾ, ಭರತ್ ಚೆಟ್ರಿ, ಪ್ರಭೋದ್ ಟಿರ್ಕಿ ಮತ್ತು ತುಷಾರ್ ಖಾಂಡೇಕರ್ ಅವರು ಲೀಗ್ ಜೊತೆ ಒಪ್ಪಂದ ಮಾಡಿಕೊಂಡ ಪ್ರಮುಖರಾಗಿದ್ದಾರೆ.

ಈ ಆಟಗಾರರು ಪ್ರತಿ ವರ್ಷ 40 ರಿಂದ 50 ಲಕ್ಷ ರೂ. ಪಡೆಯುವ ಸಾಧ್ಯತೆಯಿದೆ. 8 ರಿಂದ 10 ಫ್ರಾಂಚೈಸಿ ತಂಡಗಳು ಲೀಗ್‌ನಲ್ಲಿ ಕಾಣಿಸಿಕೊಳ್ಳಲಿವೆ. ವಿದೇಶದ ಸುಮಾರು 60 ಕ್ಕೂ ಅಧಿಕ ಆಟಗಾರರು ಲೀಗ್‌ನಲ್ಲಿ ಪಾಲ್ಗೊಳ್ಳುವರು. ‘ಹಾಕಿ ಇಂಡಿಯಾ’ವು ಲೀಗ್ ಬಗ್ಗೆ ಈ ಮೊದಲೇ ಅಪಸ್ವರ ಎತ್ತಿತ್ತು. ಮಾತ್ರವಲ್ಲ ಅಂತರರಾಷ್ಟ್ರೀಯ ಹಾಕಿ ಫೆಡರೇಷನ್‌ನಿಂದ ಮಾನ್ಯತೆ ಪಡೆಯದ ಐಎಚ್‌ಎಫ್‌ಗೆ ರಾಷ್ಟ್ರೀಯ ಆಟಗಾರರ ಜೊತೆ ಒಪ್ಪಂದ ಮಾಡಿಕೊಳ್ಳುವ ಅಧಿಕಾರ ಇಲ್ಲ ಎಂದಿತ್ತು. ಈ ಲೀಗ್‌ನಲ್ಲಿ ಪಾಲ್ಗೊಳ್ಳುವ ಆಟಗಾರರ ಮೇಲೆ ನಿಷೇಧ ಹೇರಲಾಗುವುದು ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ನರೀಂದರ್ ಬಾತ್ರ ಎಚ್ಚರಿಕೆ ನೀಡಿದ್ದರು. ಆದರೆ ಈ ಬೆದರಿಗೆಕೆ ಬೆಲೆ ಸಿಕ್ಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT