ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಬೆಂಗಳೂರು ಗ್ರಾಮಾಂತರ ಶುಭಾರಂಭ

Last Updated 15 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮೈಸೂರು: ಬೆಂಗಳೂರು ಗ್ರಾಮಾಂತರ ತಂಡದ ಮಹಿಳೆಯರು ಸೋಮವಾರ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾದ ರಾಜ್ಯಮಟ್ಟದ ದಸರಾ ವಾಲಿಬಾಲ್ ಟೂರ್ನಿಯ ಮಹಿಳೆಯರ ಲೀಗ್ ವಿಭಾಗದಲ್ಲಿ ಎರಡು ಪಂದ್ಯಗಳನ್ನು ಗೆದ್ದು ಶುಭಾರಂಭ ಮಾಡಿದರು.

ಮೊದಲ ಪಂದ್ಯದಲ್ಲಿ ಬೆಂಗಳೂರು ಗ್ರಾಮಾಂತರ ತಂಡವು 25-18, 25-7ರಿಂದ ಗುಲ್ಬರ್ಗ ವಿಭಾಗವನ್ನು ಸೋಲಿಸಿತು. ಸುಮಯಾ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಇನ್ನೊಂದು ಪಂದ್ಯದಲ್ಲಿ ನಿವೇದಿತಾ ಪ್ರದರ್ಶನದ ನೆರವಿನಿಂದ 25-15, 27-25, 25-20, 25-23ರಿಂದ ಬೆಂಗಳೂರು ನಗರ ತಂಡದ ವಿರುದ್ಧ ಜಯ ಗಳಿಸಿತು.

ಆತಿಥೇಯರಿಗೆ ಜಯ: ಆತಿಥೇಯ ಮೈಸೂರು ವಿಭಾಗದ ವನಿತೆಯರು  ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ್ತಿಯರಾದ ನಿಶಾ ಮತ್ತು ಬಬಿತಾ ಅವರ ಉತ್ತಮ ಪ್ರದರ್ಶನದ ನೆರವಿನಿಂದ  25-1, 25-3, 25-8ರಿಂದ ಗುಲ್ಬರ್ಗ ವಿಭಾಗದ ತಂಡವನ್ನು ಪರಾಭವಗೊಳಿಸಿದರು.

ಹಾಕಿ: ಆತಿಥೇಯ ಮೈಸೂರಿನ ಮಹಿಳಾ ತಂಡವು ಸೋಮವಾರ ದಸರಾ ಕ್ರೀಡಾಕೂಟದ ಹಾಕಿ ಟೂರ್ನಿಯಲ್ಲಿ ಶುಭಾರಂಭ ಮಾಡಿತು.

ಮೈಸೂರು ವಿಶ್ವವಿದ್ಯಾಲಯದ ಹಾಕಿ ಮೈದಾನದಲ್ಲಿ ನಡೆದ ಲೀಗ್ ಹಂತದ ಪಂದ್ಯದಲ್ಲಿ ಮೈಸೂರು ವಿಭಾಗದ ತಂಡವು 11-1ರಿಂದ ಗುಲ್ಬರ್ಗ  ವಿರುದ್ಧ ಸುಲಭ ಜಯ ಗಳಿಸಿತು.

ಮೈಸೂರಿನ ಎ.ಕೆ. ರಂಜಿತಾ (8ನೇ ನಿಮಿಷ, 11ನಿ, 30ನಿ, 33ನಿ) ನಾಲ್ಕು ಗೋಲು ಗಳಿಸಿದರು. ಉಳಿದಂತೆ  ಎಂ. ಚೈತ್ರಾ (3ನಿ), ಬಿ.ಪಿ. ನಂದಿನಿ (17, 23),  ತನುಶ್ರೀ (19)ನಿ, ಭವ್ಯ (35, 46), ಕೋಮಲಾ (31ನಿ) ಕೂಡ ತಮ್ಮ ಕಾಣಿಕೆ ನೀಡಿದರು. ಗುಲ್ಬರ್ಗ ಪರವಾಗಿ ಏಕೈಕ ಗೋಲನ್ನು ನಿಖಿತಾ ರೆಡ್ಡಿ (49ನಿ) ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಬೆಳಗಾವಿ ವಿಭಾಗವು 6-0ಯಿಂದ ಬೆಂಗಳೂರು ಗ್ರಾಮಾಂತರ ವಿಭಾಗವನ್ನು ಸೋಲಿಸಿತು. ಶಾಲಿನಿ (13, 43) ಎರಡು ಗೋಲು ಗಳಿಸಿದರು. ಸೌಮ್ಯಾ (2ನಿ), ಬಸಮ್ಮ (34ನಿ), ರೂಪಾ (43ನಿ) ಮತ್ತು ಶ್ವೇತಾ (49ನಿ) ತಲಾ ಒಂದು ಗೋಲು ಗಳಿಸಿದರು.

ಮತ್ತೊಂದು ಪಂದ್ಯದಲ್ಲಿ ಗುಲ್ಬರ್ಗ ತಂಡವು 8-0ಯಿಂದ ಬೆಂಗಳೂರು ಗ್ರಾಮಾಂತರ ತಂಡದ ವಿರುದ್ಧ ಗೆದ್ದಿತು. ಗುಲ್ಬರ್ಗದ ಶ್ರಾವಣಿ (3, 8, 22) 3 ಗೋಲು ಗಳಿಸಿದರೆ, ನಿಖಿತಾ ರೆಡ್ಡಿ (30, 32) ಎರಡು ಗೋಲು ಹೊಡೆದರು. ಸುರೇಖಾ (14), ವಿಜಯಲಕ್ಷ್ಮೀ (35) ತಲಾ ಒಂದು ಬಾರಿ ಚೆಂಡನ್ನು ಗೋಲುಪೆಟ್ಟಿಗೆಗೆ ಸೇರಿಸಿದರು.

ಪುರುಷರ ವಿಭಾಗದಲ್ಲಿ ಬೆಂಗಳೂರು ನಗರ ತಂಡವು 6-0ಯಿಂದ ಗುಲ್ಬರ್ಗ ತಂಡವನ್ನು ಪರಾಭವಗೊಳಿಸಿತು. ಮಹೇಶ್ (18ನೇ ನಿಮಿಷ, 30, 42, 48) ನಾಲ್ಕು ಗೋಲು ಹೊಡೆದರು. ಶಿವಕುಮಾರ್ (5) ಮತ್ತು ರಾಜಶೇಖರ್ (9) ತಲಾ ಒಂದು ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT