ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ಜೂನಿಯರ್ ತಂಡಕ್ಕೆ ಗುರ್ಜಿಂದರ್ ನಾಯಕ

Last Updated 20 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ/ಐಎಎನ್‌ಎಸ್): ಮಲೇಷ್ಯಾದಲ್ಲಿ ನವೆಂಬರ್ 5 ರಂದು ಆರಂಭವಾಗಲಿರುವ  ಆರು ರಾಷ್ಟ್ರಗಳನ್ನೊಳಗೊಂಡ ಸುಲ್ತಾನ್ ಜೋಹಾರ್ ಕಪ್ ಹಾಕಿ ಟೂರ್ನಿಗೆ  ಗುರ್ಜಿಂದರ್ ಸಿಂಗ್ ಅವರನ್ನು ಭಾರತ ತಂಡದ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಇಬ್ಬರು ಗೋಲ್ ಕೀಪರ್ ಸೇರಿದಂತೆ 18 ಆಟಗಾರರನ್ನು ಒಳಗೊಂಡ ಭಾರತ ತಂಡವನ್ನು ಆಯ್ಕೆ ಸಮಿತಿ ಪ್ರಕಟಿಸಿತು. ಈ ಟೂರ್ನಿ ಎಂಟು ದಿನಗಳ ಕಾಲ ನಡೆಯಲಿದೆ. ಆಸ್ಟ್ರೇಲಿಯಾ, ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಂಡಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ.

ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ (ಎಸ್‌ಎಐ) ಅಕ್ಟೋಬರ್ 14 ಹಾಗೂ 15ರಂದು ಆಯ್ಕೆ ಟ್ರಯಲ್ಸ್ ನಡೆಯಿತು.

ತಂಡ ಇಂತಿದೆ: ಗೋಲ್ ಕೀಪರ್ಸ್‌: ಹರ್ಮಪ್ರೀತ್ ಸಿಂಗ್, ಪಿ. ನವೀನ್ ಕುಮಾರ್.; ಡಿಫೆಂಡರ್ಸ್‌: ಗುರ್ಜಿಂದರ್ ಸಿಂಗ್ (ನಾಯಕ), ಅಮಿತ್ ರೋಹಿದಾಸ್, ಎಂ. ಸಂಪತ್ ಕುಮಾರ್.;  ಮಿಡ್ ಫೀಲ್ಡರ್ಸ್‌: ಎಂ. ಪ್ರದೀಪ್, ಜರ್ಮನ್‌ಪ್ರೀತ್ ಸಿಂಗ್, ದೇವಿಂದರ್ ವಾಲ್ಮೀಕಿ (ಉಪ ನಾಯಕ), ಬಿಪಿನ್ ಕಿಶೋರ್ ಕೆರ್ಕೆಟ್ಟಾ, ಗುರೀಂದರ್ ಸಿಂಗ್.; ಫಾರ್ವಡ್ಸ್: ಪಿ.ಎಲ್. ತಿಮ್ಮಣ್ಣ, ಸತ್ಬೀರ್ ಸಿಂಗ್, ಮಾಲಕ್ ಸಿಂಗ್, ಸುಖ್ದೇವ್ ಸಿಂಗ್, ರಣಜಿತ್ ಸಿಂಗ್, ಎಂ. ಗುಣಶೇಖರ, ರಾಮದೀಪ್ ಸಿಂಗ್ ಮತ್ತು ತಲ್ವೀಂದರ್ ಸಿಂಗ್.

ರಿಸರ್ವ್ ಆಟಗಾರರು: ಕೇಶವ್ ದತ್ (ಗೋಲ್ ಕೀಪರ್), ಹರ್ಪಿತ್ ಸಿಂಗ್ (ಡಿಫೆಂಡರ್), ಸುಮಿತ್ ತೊಪ್ನಾ (ಡಿಫೆಂಡರ್), ಜತೀಂದರ್ ಸಿಂಗ್ (ಮಿಡ್ ಫೀಲ್ಡರ್), ಹರ್ಜಿತ್ ಸಿಂಗ್ (ಮಿಡ್ ಫೀಲ್ಡರ್), ಮನದೀಪ್ ಸಿಂಗ್ (ಫಾರ್ವರ್ಡ್) ಮತ್ತು ಇಮ್ರಾನ್ ಖಾನ್.

ಭಾರತ ಆಡುವ ಪಂದ್ಯಗಳ ವೇಳಾಪಟ್ಟಿ: ಭಾರತ-ಕೊರಿಯಾ (ನವೆಂಬರ್ 5), ಭಾರತ-ಆಸ್ಟ್ರೇಲಿಯಾ (ನ. 6), ಭಾರತ-ಪಾಕಿಸ್ತಾನ (ನ. 8), ಭಾರತ-ನ್ಯೂಜಿಲೆಂಡ್ (ನ. 9) ಹಾಗೂ ಭಾರತ-ಮಲೇಷ್ಯಾ (ನ. 11). ಫೈನಲ್ ಪಂದ್ಯ: ನ. 12.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT