ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಲಿನ ಉತ್ಪನ್ನ ಖರೀದಿಸಲು ಸಲಹೆ

Last Updated 20 ಸೆಪ್ಟೆಂಬರ್ 2013, 9:26 IST
ಅಕ್ಷರ ಗಾತ್ರ

ಹಳೇಬೀಡು: ಕರ್ನಾಟಕ ಹಾಲು ಉತ್ಪಾದನೆಯಲ್ಲಿ ದೇಶ ದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ಹೈನುಗಾರಿಕೆ ನಡೆಸುವ ರೈತರು ಹಾಲು ಒಕ್ಕೂಟಗಳು ಉತ್ಪಾದಿಸುವ ಸಿಹಿ ಉತ್ಪನ್ನಗಳನ್ನು ಖರೀದಿಸಿದರೆ ಸರ್ಕಾರದಿಂದ ಸವಲತ್ತು ಪಡೆಯಲು ಅನುಕೂಲವಾಗುತ್ತದೆ ಎಂದು ಶಾಸಕ ವೈ.ಎನ್. ರುದ್ರೇಶ್‌ಗೌಡ ಸಲಹೆ ಮಾಡಿದರು

ಲಿಂಗಪ್ಪನಕೊಪ್ಪಲು ಗ್ರಾಮದಲ್ಲಿ ರೂ.7ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಗುರುವಾರ ಮಾತನಾಡಿದರು. ರಾಜ್ಯದಲ್ಲಿ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿ ರುವುದರಿಂದ ಹೊರ ರಾಜ್ಯಕ್ಕೆ ಮಾರಾಟ ಮಾಡಲಾ ಗುತ್ತಿದೆ. ಉಳಿದ ಹಾಲಿನಲ್ಲಿ ಹಾಲಿನಪುಡಿ ತಯಾರಿಸ ಲಾಗುತ್ತಿದೆ. ಹಾಲಿನ ವಹಿವಾಟಿನಲ್ಲಿಯೂ ಲಾಭಂಶ ಗಣನೀಯವಾಗಿ ಕುಸಿಯುತ್ತಿದೆ. ಸಾಕಷ್ಟು ಮಳೆ ಬಿದ್ದು ಮೇವು ದೊರಕಿದರೆ ಮಾತ್ರ ಹಾಲು ಉತ್ಪಾದನೆ ಸುಗುಮವಾಗುತ್ತದೆ ಎಂದು ಅವರು ಹೇಳಿದರು.

ಲಿಂಗಪ್ಪನಕೊಪ್ಪಲು ದೇವಾಲಯ ಜೀರ್ಣೋದ್ದಾರಕ್ಕೆ ಮುಜಾರಾಯಿ ಇಲಾಖೆಯಿಂದ ರೂ.5ಲಕ್ಷ ಮಂಜೂರು ಮಾಡಿಸಲಾಗುವುದು. ನಬಾರ್ಡ್ ಯೋಜನೆ ಅಡಿಯಲ್ಲಿ ಹಳೇಬೀಡು-–ಬಾಣಾವರ ರಸ್ತೆಯಿಂದ ಲಿಂಗಪನಕೊಪ್ಪಲು ಸಂಪರ್ಕ ರಸ್ತೆ ಡಾಂಬರೀಕರಣಕ್ಕೆ ರೂ.50 ಲಕ್ಷ ಹಾಘೂ ಗಂಗೂ ದೊಡ್ಡಕೋಡಿಹಳ್ಳಿ ರಸ್ತೆ ಡಾಂಬರೀಕರಣಕ್ಕೆ ರೂ.75 ಲಕ್ಷ ಹಣ ಮಂಜೂರಾಗಿದೆ. ಹಳೇಬೀಡು ಮಾದಿಹಳ್ಳಿ ಹೋಬಳಿಗಳಿಗೆ ಈಚೆಗೆ ಮಳೆ ಬಿದ್ದರೂ ಕೆರೆ ಕಟ್ಟೆ ಭರ್ತಿಯಾಗಿಲ್ಲ. ಶೀಘ್ರದಲ್ಲಿಯೇ ಯಗಚಿ ಏತ ನೀರಾವರಿ ಯೋಜನೆ ಕಾಮಗಾರಿ ಪರಿಶೀಲನೆ ನಡೆಸಿ ಶೀಘ್ರವೇ ಎರಡು ಹೋಬಳಿಗೆ ನೀರು ಹರಿಯುವಂತೆ ಕ್ರಮಕೈ ಗೊಳ್ಳಲಾಗುವುದು ಎಂದು ರುದ್ರೇಶ್‌ಗೌಡ ತಿಳಿಸಿದರು.

ಹಾಲು ಉತ್ಪಾಕರ ಸಂಘದ ಅಧ್ಯಕ್ಷ ಎನ್.ಆರ್. ವೀರೇಗೌಡ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಹೇಮಾವತಿ ಮಂಜುನಾಥ್, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಸ್.ಲಿಂಗೇಶ್, ಪುರಸಭಾ ಮಾಜಿ ಅಧ್ಯಕ್ಷ ಬಿ.ಸಿ.ಮಂಜುನಾಥ್‌ಹಾಸನ ಹಾಲು ಒಕ್ಕೂಟ ನಿರ್ದೇಶಕ ರಾಮಚಂದ್ರೇಗೌಡ, ಉಪ ವ್ಯವಸ್ಥಾಪಕ ಜಯಪ್ರಕಾಶ್, ಸಹಾಯಕ ವ್ಯವಸ್ಥಾಪಕ ಮೊಹನಶೆಟ್ಟಿ, ಜಿಲ್ಲಾ ಸಹಕಾರ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಲ್.ಬಿ.ಬಸವರಾಜು ಮಾತನಾಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ, ನಿರ್ದೇಶಕ ರಾದ ಎಲ್.ಎಸ್.ಜಯಪ್ರಕಾಶ್, ಎಲ್.ನೀಲಕಂಠೇಗೌಡ, ಎಂ.ಎಸ್. ಜಯಲಿಂಗಪ್ಪ, ಶಂಕರಪ್ಪ, ಗೋವಿಂದೇಗೌಡ, ಸುಶೀಲಮ್ಮ, ನಾಗರಾಜು, ಕಾರ್ಯದರ್ಶಿ ಎಲ್.ಎ. ಮಲ್ಲೇಶ್, ಮಾಜಿ ಕಾರ್ಯದರ್ಶಿಗಳಾದ ಎಲ್.ಆರ್. ಬಸವರಾಜು, ರುದ್ರೇಗೌಡ, ಪುಟ್ಟಲಿಂಗೇಗೌಡ ಇದ್ದರು.

ಅತಿಥಿ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ
ಅರಕಲಗೂಡು: ತಾಲ್ಲೂಕಿನ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕಕ್ಕೆ ಅರ್ಜಿ ಸಲ್ಲಿಸಲು ಸೆ. 23 ಕೊನೆಯ ದಿನವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ರೇವಣ್ಣ ತಿಳಿಸಿದ್ದಾರೆ. ಸ್ಥಳೀಯರನ್ನು ಆಯ್ಕೆ ಮಾಡಿಕೊಳ್ಳಲು ಸರ್ಕಾರ ಸೂಚನೆ ನೀಡಿದೆ. ಖಾಲಿ ಇರುವ ಹುದ್ದೆಗಳ ಪಟ್ಟಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಪ್ರಕಟಿಸಿದ್ದು ಸಂಬಂಧಿಸಿದ ಶಾಲೆಗಳ ಮುಖ್ಯ ಶಿಕ್ಷಕರಿಗೆ  ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT