ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹು-ಧಾದಲ್ಲಿ ಇನ್ನಷ್ಟು ಒನ್ ಕೇಂದ್ರ

Last Updated 30 ಅಕ್ಟೋಬರ್ 2011, 9:30 IST
ಅಕ್ಷರ ಗಾತ್ರ

ಧಾರವಾಡ: ಅವಳಿ ನಗರದಲ್ಲಿ ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರಗಳಿಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಶೀಘ್ರ ಇನ್ನಷ್ಟು ಕೇಂದ್ರಗಳನ್ನು ತೆರೆಯಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದರು.

ನಗರದ ಬಾರಾಕೊಟ್ರಿಯಲ್ಲಿ ಶನಿವಾರ ಹುಬ್ಬಳ್ಳಿ-ಧಾರವಾಡ ಒನ್ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು. ಧಾರವಾಡದಲ್ಲಿ 2ನೇ ಕೇಂದ್ರ, ನವನಗರದಲ್ಲಿ ಒಂದು, ಹುಬ್ಬಳ್ಳಿಯಲ್ಲಿ 5 ಸೇರಿ ಒಟ್ಟು ಎಂಟು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದು ಅವರು ತಿಳಿಸಿದರು.

ಕಳೆದ ವರ್ಷದಲ್ಲಿ 10 ಲಕ್ಷಗಳ ಬಿಲ್ಲು ಪಾವತಿ ಯಾಗಿದ್ದು, ಸುಮಾರು 75 ಕೋಟಿ ರೂಪಾಯಿ ಗಳಷ್ಟು ವ್ಯವಹಾರವಾಗಿದೆ. ಧಾರವಾಡ ಹಾಗೂ ಹಳೇ ಹುಬ್ಬಳ್ಳಿಯಲ್ಲಿ ಇನ್ನು ಹೆಚ್ಚುವರಿ ಹುಬ್ಬಳ್ಳಿ- ಧಾರವಾಡ ಒನ್ ಕೇಂದ್ರ ತೆರೆಯಲಾಗುವುದು.

ದೂರವಾಣಿ, ವಿದ್ಯುಚ್ಛಕ್ತಿ, ಪಾಲಿಕೆ ಕರಗಳ ಶುಲ್ಕ ಪಾವತಿ, ಐಟಿ ರಿಟರ್ನ್, ಬಸ್‌ಪಾಸ್ ನೀಡಿಕೆ ಮುಂತಾದ 13 ಸೌಲಭ್ಯಗಳಿದ್ದು, ಇನ್ನೂ ಹೆಚ್ಚಿನ ಸೌಲಭ್ಯ ವಿಸ್ತರಿಸಲು ವಿವಿಧ ಇಲಾಖೆ, ಸಂಸ್ಥೆಗ ಳೊಂದಿಗೆ ಚರ್ಚೆ ನಡೆಸಲಾಗುತ್ತದೆ ಎಂದು ಹೇಳಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳ ಮೇಲೆ ನಡೆದಿರುವ ಹಲ್ಲೆ, ಕಿರುಕುಳ ಪ್ರಸ್ತಾಪಿಸಿದ ಅವರು, ಪ್ರಾರಂಭದಲ್ಲಿ ಗೊಂದಲಗಳು ಸಹಜ. ಸಮಸ್ಯೆಗಳಿವೆ ಎಂದು ರಾಜೀನಾಮೆಗೆ ಮುಂದಾಗುವುದು ಪರಿಹಾರವಲ್ಲ.
 
ಅವರಿಗೆ ಕಿರುಕುಳ ನೀಡುವ ಪ್ರಕರಣಗಳಲ್ಲಿ ಭಾಗಿಯಾದವರ ಮೇಲೆ ಕಠಿಣ ಕ್ರಮ ಜರುಗಿಸಲಾಗಿದ್ದು ಸರ್ಕಾರ ಸುಮ್ಮನಿರುವುದಿಲ್ಲ ಎಂಬ ಸಂದೇಶ ನೀಡಲಾಗಿದೆ.
 
ಅವರಲ್ಲಿ ವಿಶ್ವಾಸ ಮೂಡಿಸಲು ತಾವು ಸದಾ ಪ್ರಯತ್ನಶೀಲರಾಗಿದ್ದು, ಹಲವಾರು ತರಬೇತಿ ಕಾರ್ಯಕ್ರಮ ಜರುಗಿಸಲಾಗಿದೆ. ಗ್ರಾ.ಪಂ.ಗಳಿಗೆ ಪಿಡಿಒಗಳನ್ನು ನಿಯಮಿಸುವ ಕರ್ನಾಟಕ ರಾಜ್ಯದ ಈ ಕಾರ್ಯವನ್ನು ಕೇಂದ್ರಸರ್ಕಾರವು ರಾಷ್ಟ್ರವ್ಯಾಪಿ ವಿಸ್ತರಿಸಲು ಮುಂದಾಗಿರುವುದು ಹೆಮ್ಮೆಯ ಸಂಗತಿ.

ಆದ್ದರಿಂದ ಗ್ರಾಮ ಪಂಚಾಯಿತಿಯ ಯೋಜನಾಭಿವೃದ್ಧಿ ಅಧಿಕಾರಿಗಳು ಈ ಅವಕಾಶವನ್ನು ಉಪಯೋಗಿಸಿಕೊಂಡು ಉತ್ತಮ ಆಡಳಿತ ನೀಡಲು ಮಾನಸಿಕರಾಗಿ ಸಿದ್ಧರಾಗುವ ಅವಶ್ಯಕತೆಯಿದೆ. ಸರ್ಕಾರ ಅವರ ಈ ಕಾರ್ಯದಲ್ಲಿ ಸದಾ ಬೆನ್ನಾಗಿರುತ್ತದೆ ಎಂದು ಭರವಸೆ ನೀಡಿದರು.

ನೆಮ್ಮದಿ ಕೇಂದ್ರಗಳು ಸರಿಯಾದ ರೀತಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸುತ್ತಿಲ್ಲ ಎಂದು ಪದೇ ಪದೇ ದೂರುಗಳಿದ್ದು, ಅವುಗಳನ್ನು ಕಂದಾಯ ಇಲಾಖೆಗೆ ಜಿಲ್ಲಾಧಿಕಾರಿಗಳ ವ್ಯಾಪ್ತಿಗೆ ತರಲು ಗಂಭೀರ ಚಿಂತನೆ ನಡೆದಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಜಿಲ್ಲಾಧಿಕಾರಿ ದರ್ಪಣ ಜೈನ್, ಮೋಹನ ನಾಗಮ್ಮನವರ, ಕಲಾವಿದ ಮಧು ದೇಸಾಯಿ ಹಾಗೂ ಹುಬ್ಬಳ್ಳಿ-ಧಾರವಾಡ ಒನ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT