ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿ: ಈರುಳ್ಳಿಗೆ ಉತ್ತಮ ದರ

Last Updated 20 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಬೆಂಗಳೂರು ಸೇರಿದಂತೆ ರಾಜ್ಯದ ಇತರೆ ಮಾರುಕಟ್ಟೆಗಳಲ್ಲಿ ಈರುಳ್ಳಿ ಧಾರಣೆ ಪಾತಾಳಕ್ಕೆ ಕುಸಿದರೂ, ಇಲ್ಲಿನ ಎಪಿಎಂಸಿಯಲ್ಲಿ ಶುಕ್ರವಾರ ಉತ್ತಮ ಬೆಲೆ ದೊರೆಯಿತು.

ಮಾರುಕಟ್ಟೆಗೆ ಶುಕ್ರವಾರ 6,489 ಕ್ವಿಂಟಲ್ ಆವಕವಾಗಿತ್ತು. ಸ್ಥಳೀಯ ತಳಿಯ ಉತ್ತಮ ಗುಣಮಟ್ಟದ ಈರುಳ್ಳಿಗೆ ಕ್ವಿಂಟಲ್‌ಗೆ ₨ 900 ಮಾದರಿ ಬೆಲೆ ದೊರೆಯಿತು.

ಮಹಾರಾಷ್ಟ್ರದಲ್ಲಿ ಮೂರು ದಿನಗಳಿಂದ ಭಾರಿ ಪ್ರಮಾಣದಲ್ಲಿ ಬೆಲೆ ಕುಸಿದು ಬೆಳೆಗಾರರ ಪ್ರತಿಭಟನೆಗೆ ಕಾರಣವಾಗಿರುವ ಪುಣೆ ತಳಿಯ ಈರುಳ್ಳಿ ಹುಬ್ಬಳ್ಳಿ ಎಪಿಎಂಸಿಗೆ 191 ಕ್ವಿಂಟಲ್‌ನಷ್ಟು ಬಂದಿದ್ದು  ₨ 950 ಮಾದರಿ ಬೆಲೆ ದೊರೆತು ದೂರದ ಊರುಗಳಿಂದ ಬಂದಿದ್ದ ರೈತರು ಸಂತಸಗೊಂಡರು.

ವಿಜಾಪುರ ಭಾಗದಲ್ಲಿ ಬೆಳೆಯುವ ತೆಲಗಿ ತಳಿ ಈರುಳ್ಳಿ ಕೂಡ  ಕ್ವಿಂಟಲ್‌ಗೆ ₨ 900 ದರದಲ್ಲಿ ಮಾರಾಟವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT