ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಲಸೂರ: ಕನ್ನಡ ಸಾಹಿತ್ಯ ಪರಿಷತ್ ಘಟಕ ಉದ್ಘಾಟನೆ

Last Updated 24 ಡಿಸೆಂಬರ್ 2012, 6:45 IST
ಅಕ್ಷರ ಗಾತ್ರ

ಬಸವಕಲ್ಯಾಣ: ತಾಲ್ಲೂಕಿನ ಹುಲಸೂರನಲ್ಲಿ ಈಚೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ವಲಯ ಘಟಕದ ಉದ್ಘಾಟನಾ ಸಮಾರಂಭ ನಡೆಯಿತು.

ಶಿವಾನಂದ ಸ್ವಾಮೀಜಿಯವರು ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರತಿಯೊಬ್ಬರು ಪ್ರತಿದಿನ ಕನ್ನಡದಲ್ಲಿ ಮಾತನಾಡಿದರೆ ಮಾತ್ರ ಕನ್ನಡ ಭಾಷೆ ಉಳಿಯುತ್ತದೆ ಎಂದರು.

ಗಡಿಗೌಡಗಾಂವ ಶಾಂತವೀರ ಶಿವಾಚಾರ್ಯರು ಮಾತನಾಡಿ ಬಸವಣ್ಣನ ಪೂರ್ವದಲ್ಲಿ ಎಲ್ಲೆಡೆ ಸಂಸ್ಕೃತ ಭಾಷೆ ಚಾಲ್ತಿಯಲ್ಲಿತ್ತು. ಆದರೆ ಶರಣರು ಅದನ್ನು ಧಿಕ್ಕರಿಸಿ ಕನ್ನಡಕ್ಕೆ ಮಾನ್ಯತೆ ಕೊಟ್ಟಿದ್ದಾರೆ ಎಂದರು. ತಹಸೀಲ್ದಾರ ಶಿವರಾಜ ಹಲಬರ್ಗೆ ಮಾತನಾಡಿ ಶಾಲೆಯಲ್ಲಿ ಕನ್ನಡ ಕಲಿಸಿದರೆ ಕನ್ನಡ ಬೆಳೆಯುತ್ತದೆ ಎಂದರು. ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಚಂದ್ರಕಾಂತ ಸ್ವಾಮಿ ನಾರಾಯಣಪುರ ಮಾತನಾಡಿ ಜನವರಿಯಲ್ಲಿ ಎಲ್ಲ ವಲಯಗಳಲ್ಲಿ ವಲಯ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಶಬ್ಬೀರಪಾಶಾ ಮುಜಾವರ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ ಮಾತನಾಡಿದರು.

ಪ್ರಾಚಾರ್ಯ ಶಿವಕುಮಾರ ರಾಜನಾಳೆ ಅಧ್ಯಕ್ಷತೆ ವಹಿಸಿದ್ದರು. ಎಪಿಎಂಸಿ ಸದಸ್ಯ ಅಶೋಕ ತೆಲಂಗ್, ಕಾಶಿನಾಥ ಪಾರಶೆಟ್ಟೆ, ನಾಗರಾಜ ಮಡ್ಡೇರ್, ಮಡಿವಾಳಪ್ಪ ಭೋಗೆ ಉಪಸ್ಥಿತರಿದ್ದರು. ಅನಿಲಕುಮಾರ ತಾಂಬೋಳೆ ಸ್ವಾಗತಿಸಿದರು. ಬಾಲಾಜಿ ಅದೆಪ್ಪ ನಿರೂಪಿಸಿದರು. ಲಿಂಗರಾಜ ಜಡಗೆ    ವಂದಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT